ಧಾರವಾಡ 09: ಆತ್ಮ ವಿಶ್ವಾಸದಿಂದ ಸತತ ಪರಿಶ್ರಮದಿಂದ ಅಧ್ಯಯನ ಮಾಡಿದಲ್ಲಿ ಪರೀಕ್ಷೆ ಯಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ, ಕನ್ನಡ ಸಾಹಿತ್ಯ ಪರಿಷತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ ಏರಿ್ಡಸುತ್ತಾ ಬಂದಿದೆ ಇದರ ಸದುಪಯೋಗ ಮಾಡಿಕೊಳ್ಳಿ ಎಂದು ಡಾ. ಲಿಂಗರಾಜ ಅಂಗಡಿ ಹೇಳಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೆ ಎಲ್ ಇ ಸಂಸ್ಥೆಯ ಆರ್ ಎಲ್ ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಪ್ರೌಢ ಶಾಲೆ ವಿಭಾಗ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಸಾಪ್ತಾಹಿಕ ಸಾಹಿತ್ಯ ಮಾಲಿಕೆಯಡಿಯಲ್ಲಿ ಭಾಗೀರಥಿ ಕೆ ದೇವರಮನಿ ಇವರ ಜನ್ಮದಿನ ಮತ್ತು ಇವರ ಮೊಮ್ಮಕ್ಕಳ ದತ್ತಿ ಹಾಗೂ ಮಂಜುನಾಥ ಶಂಕ್ರಣ್ಣ ಮುನವಳ್ಳಿ ದತ್ತಿ ಅಂಗವಾಗಿ ಏರಿ್ಡಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ಸಿಸ್ಲೆಪ್ ಧಾರವಾಡದ ಉಪನ್ಯಾಸಕರಾದ ಡಾ ಪೂರ್ಣಿಮಾ ಮುಕ್ಕುಂದಿ, ವಿದ್ಯಾರ್ಥಿಗಳು ಪರೀಕ್ಷಾ ಭಯ ದಿಂದ ಹೊರಬರಬೇಕು.. ಸಮಯ ಪರಿಪಾಲನೆ ವಯಕ್ತಿಕ ವೇಳಾಪಟ್ಟಿ ಹಾಕಿಕೊಳ್ಳಿ ಸತತ ಪ್ರಯತ್ನ ಮಾಡಿ ಮನಸ್ಸಿಟ್ಟು ಓದಿ, ಅಂದಾಗ ಪರೀಕ್ಷೆಯಲ್ಲಿ ಭಯ ಬರುವುದೇ ಇಲ್ಲ ಎಂದರು... ದತ್ತಿ ದಾನಿಗಳು ಆದ ಕೆ ಜಿ ದೇವರಮನಿ ಇವರು ಮಕ್ಕಳಿಗೆ ಗಣಿತ ವಿಷಯ ಕುರಿತು ಮನವರಿಕೆ ಮಾಡಿ ಪ್ರೋತ್ಸಾಹಕ ಮಾತುಗಳನ್ನು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ ಎ ಭಾವಿಕಟ್ಟಿ ನಿವೃತ್ತ ಮುಖ್ಯಾಧ್ಯಾಪಕರು, ಮಕ್ಕಳಿಗೆ ಅಧ್ಯಯನ ಮಾಡಿ ಮನನ ಮಾಡಿ ಚಿಂತನ ಮಾಡಿ ಎಂದು ಪ್ರೋತ್ಸಾಹಕ ಮಾತುಗಳನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆರ್ ಬಿ ಬಾನಪ್ಪನವರ ಇವರು ಮಕ್ಕಳಿಗೆ ಉಪಯುಕ್ತ ಕಾರ್ಯಕ್ರಮ ಆಯೋಜಿಸಿರುವಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಕನ್ನಡ ನಾಡು ನುಡಿಯ ಗೀತೆಗಳ ಪ್ರಸ್ತುತಿಯನ್ನು ಪ್ರಮಿಳಾ ಜಕ್ಕಣ್ಣವರ ಹಾಗೂ ಪ್ರೇಮಾನಂದ ಶಿಂಧೆ ಮಾಡಿದರು. ಡಾ ಪೂರ್ಣಿಮಾ ಮುಕ್ಕುಂದಿ ಮತ್ತು ಆರ್ ಬಿ ಬಾನಪ್ಪನವರ ಇವರನ್ನು ಸನ್ಮಾನ ಮಾಡಲಾಯಿತು.. ವೇದಿಕೆಯ ಮೇಲೆ ಎಸ್ ಎಂ ದಾನಪ್ಪಗೌಡರ, ಬಸವರಾಜ ಬಾರ್ಕಿ, ಬಿ ಎಸ್ ದೇಸಾಯಿ ಮಾತಾಂರ್ಡಪ್ಪ ಕತ್ತಿ ಇದ್ದರು.
ಪ್ರಾರಂಭದಲ್ಲಿ ಸುಪ್ರೀಯಾ ಜಂಬಗಿ ಇವರು ಪ್ರಾರ್ಥಿಸಿದರು.. ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿದರು. ಶಿಕ್ಷಕರಾದ ಎಂ ಆರ್ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.. ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತೇಶ್ ನರೇಗಲ್ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಕಾಂತ ಮುಳಗುಂದ, ಕೃಷ್ಣಮೂರ್ತಿ ಹಾಗೂ ಪ್ರೌಢಶಾಲೆ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.