ಶಿವನಾಮ ಸ್ಮರಣೆಯಿಂದ ಆತ್ಮ ಶುದ್ಧಿ: ಮುಕ್ತಿಮಂದಿರ ಶ್ರೀ

ಲೋಕದರ್ಶನ ವರದಿ

ಶಿರಹಟ್ಟಿ 22: ಹಿಂದೂಗಳ ಬಹುಮುಖ್ಯ ಆಚರಣೆಗಳಲ್ಲೊಂದಾದ ಮಹಾ ಶಿವರಾತ್ರಿ ಹಬ್ಬವು ಬಹು ಮುಖ್ಯ ಪಾತ್ರವನ್ನು ಹೊಂದಿದ್ದು, ಅಂದು ಪ್ರತಿಯೊಬ್ಬ ಭಕ್ತರೂ ಕೈಗೊಳ್ಳುವ ಉಪವಾಸ ಆಚರಣೆ, ಶಿವ ಶಿವ ಶಿವ ಎಂದು ಶಿವನ ನಾಮ ಸ್ಮರಣೆಗೈಯುವದರಿಂದ ಆತ್ಮಶುದ್ಧಿಯಾಗುತ್ತದೆ ಹಾಗೂ ಸುಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ಧರ್ಮಸ್ಥಳ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮನಿ ಶಿವಾಚಾರ್ಯರು ಆಶೀರ್ವಾದ ನೀಡಿದರು.

ಅವರು ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಪ್ರತೀ ವರ್ಷ ನಡೆದುಕೊಂಡು ಬರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಕಾರ್ಯಕ್ರದ ಅಂಗವಾಗಿ ನಡೆಯುವ ಶಿವಲಿಂಗ ಪೂಜೆ, ವಟುಗಳಿಗೆ ಅಯ್ಯಾಚಾರ ಧೀಕ್ಷೆ ನೀಡುವ ಕಾರ್ಯಕ್ರಮಗಳ ನಂತರ ನಡೆಯುವ ಆಶೀರ್ವಚನ ಕಾರ್ಯಮದಲ್ಲಿ ಆಶೀವರ್ಾದ ನೀಡಿದರು. ಅಯ್ಯಾಚಾರದ ಪ್ರಕಾರ ಪೂಜೆ, ಪುನಸ್ಕಾರ ಕಾರ್ಯ ಮಾಡುವದರಿಂದ ಹಕ್ಕು ಪ್ರಾಪ್ತವಾಗುತ್ತದೆ. ಲಿಂಗಧಾರಣೆ, ಶಿವಪೂಜೆಯಿಂದ ಆತ್ಮಬಲ ವೃದ್ಧಿಯಾಗುತ್ತದೆ. ಪ್ರತಿಯೊಬ್ಬರೂ ನಿತ್ಯ 'ಓಂ ನಮಃ ಶಿವಾಯ' ಪಂಚಾಕ್ಷರಿ ಮಂತ್ರ ಪಠಿಸಬೇಕು ಎಂದು ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 25ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಲಿಂಗದೀಕ್ಷೆ ನೀಡಲಾಯಿತು.

ಶಿವರಾತ್ರಿ ಹಬ್ಬದ ಪ್ರಯುಕ್ತ ಅನೇಕ ಭಕ್ತಾದಿಗಳು ಈ ಕ್ಷೇತ್ರಕ್ಕೆ ಆಗಮಿಸಿ ಶ್ರೀ ವೀರಗಂಗಾಧರ ಮಹಾಸ್ವಾಮಿಗಳ ಕತರ್ೃ ಗದ್ದುಗೆ ಮತ್ತು ವಿಮಲರೇಣುಕ ಮಹಾಸ್ವಾಮಿಗಳ ದರ್ಶನಾಶೀವರ್ಾದ ಪಡೆದು ದರ್ಶನಾಶೀವರ್ಾದ ಪಡೆದು ಪುನೀತನಾದರು.