ತಾರಸಿ ಕೈತೋಟ ಮಹಿಳೆಯರಿಗೆ ಸ್ವಾವಲಂಬನೆ: ಡಾ.ಗಾಣಿಗೇರ

ಬಾಗಲಕೋಟೆ: ರಾಸಾಯನಿಕ ಮುಕ್ತ ತರಕಾರಿಗಳು ಶಾರೀರಿಕ ಕ್ರೀಯೆಗಳ ಸಮತೋಲನಗಳನ್ನು ನಿಯಂತ್ರಿಸುವ ಜೊತೆಗೆ ಬಾಹ್ಯ ಸೇವನೆಯಿಂದ ದೇಹದಲ್ಲಿ ಸೇರುವ ಅನೇಕ ವಿಷ ಅನಿಲಗಳನ್ನು ದೇಹದಿಂದ ವಿಸಜರ್ಿಸುವ ಕ್ರಿಯೆಯನ್ನು ತರಕಾರಿಗಳು ಹಾಗೂ ಹಣ್ಣುಗಳು ಕಾರ್ಯನಿರ್ವಹಿಸುತ್ತವೆ ಎಂದು ತೋಟಗಾರಿಕೆ ವಿವಿಯ ತರಕಾರಿ ಪ್ರಧ್ಯಾಪಕ ಡಾ.ವಸಂತ ಗಾಣಿಗೇರ ತಿಳಿಸಿದರು.

ಕನರ್ಾಟಕ ರೈತ ಸಂಪನ್ಮೂಲ ಕೇಂದ್ರ ಹಾಗೂ ಬೆಳಗಾವಿಯ ಎಸ್.ಎಲ್.ಎಸ್ ಅಭಿವೃದ್ದಿ ಪೌಂಢೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಾವಯವ ತರಕಾರಿ ಪ್ರಾತ್ಯಕ್ಷತೆಯಲ್ಲಿ ಮಹಿಳೆಯರಿಗೆ ಆರೋಗ್ಯದಲ್ಲಿ ತರಕಾರಿ ಸೇವನೆ ಪಾತ್ರ ತಿಳಿಸಿಕೊಟ್ಟರು.

   ಪ್ರತಿಯೊಬ್ಬ ಮಹಿಳೆಯು ತನ್ನ ಮೆನಯ ಅಂಗಳದಲ್ಲಿ ಅಥವಾ ಮೇಲ್ಚಾವಣಿಯಲ್ಲಿ ಸಾವಯವ ತರಕಾರಿಗಳನ್ನು ಬೆಳೆದಲ್ಲಿ ಆರೋಗ್ಯವನ್ನು ವೃದ್ಧಿಸುವದರ ಜೊತೆಗೆ ಆಥರ್ಿಕ ಖರ್ಚನ್ನು ಕಡಿಮೆಗೊಳಿಸಬಹುದಾಗಿದೆ.

  ಕಡಿಮೆ ಖಚರ್ಿನಲ್ಲಿ ಮನೆಯಲ್ಲಿರುವ ಅನೇಕ ಅನುಪಯುಕ್ತ ವಸ್ತುಗಳನ್ನು ಬಳಸಿ ಮೇಲ್ಚಾವಣೆ, ತಾರಸಿ ಕೈತೋಟ ಮಾಡಬಹುದು ಎಂದರು. 

        ಎಸ್.ಎಲ್.ಎಸ್ ಅಭಿವೃದ್ಧಿ ಫೌಂಡೇಶನ್ ಅಧ್ಯಕ್ಷರಾದ ಗೀತಾ ದಾನಶೆಟ್ಟಿ ಮಾತನಾಡಿ ಫೌಂಡೇಶನ್ ಮುಖಾಂತರ ಮಹಿಳೆಯರಿಗೆ  ಸಾವಯವ ತರಕಾರಿ ಉತ್ಪಾದನೆ ತಾಂತ್ರಿಕತೆಯಲ್ಲಿ ಕೌಶಲ್ಯವನ್ನು ನಗರದಲ್ಲಿ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ಪ್ರಾತ್ಯಕ್ಷತೆ ಕೈಗೊಳ್ಳಲು ಯೋಜನೆ ಹಮ್ಮಿಕೊಳ್ಳಲಾಗುವದೆಂದರು.

          ಕನರ್ಾಟಕ ರೈತ ಸಂಪನ್ಮೂಲ ಕೇಂದ್ರದ ಅಧಿಕಾರಿಗಳಾದ ರಾಜೇಶ ಮಾತನಾಡಿ ಸಂಸ್ಥೆಯಿಂದ ದೊರೆಯಬಹುದಾದ ಅನೇಕ ಕೃಷಿ ಹಾಗೂ ಇನ್ನಿತರ ತರಬೇತಿಗಳನ್ನು ಗ್ರಾಮೀಣ ಮಟ್ಟದ ರೈತರಿಗೆ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು.

          ಕಾರ್ಯಕ್ರಮವನ್ನು ವಿಜಯಲಕ್ಷ್ಮೀ ಪಾಟೀಲ ತೋಟಗಾರಿಕ ತಜ್ಞರು ನಿರೂಪಿಸಿದರು. ಸಂಸ್ಥೆಯಿಂದ ತೋ.ವಿ.ವಿ. ತರಕಾರಿ ಬೀಜಗಳನ್ನು ಮಹಿಳೆಯರಿಗೆ ವಿತರಿಸಲಾಯಿತು.