ಭೀಮ್ ಸರ್ಕಾರ ಸಂಘಟನೆ ಪದಾಧಿಕಾರಿಗಳ ಆಯ್ಕೆ

Selection of office bearers of Bhim Sarkar Sangathan

ಭೀಮ್ ಸರ್ಕಾರ ಸಂಘಟನೆ ಪದಾಧಿಕಾರಿಗಳ ಆಯ್ಕೆ 


ಇಂಡಿ 01: ತಾಲೂಕು ಭೀಮ್ ಸರ್ಕಾರ ಸಂಘಟನೆ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಕಾರ್ಯಕ್ರಮ  ಭೀಮ್ ಸರ್ಕಾರ ಸ್ಥಾಪಕ ರಾಜ್ಯ ಅಧ್ಯಕ್ಷ ಪರುಶುರಾಮ ಛಲವಾದಿ ಅವರ ಅಧ್ಯಕ್ಷತೆಯಲ್ಲಿ ಇಂಡಿ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು. ಪರುಶುರಾಮ ಛಲವಾದಿ ಅವರು ಮಾತನಾಡಿ ಭೀಮ್ ಸಂಘಟನೆ ಜ್ಯಾತ್ಯಾತೀತ ಹಾಗೂ ಪಕ್ಷಾತೀತವಾದ ಸಂಘಟನೆಯಾಗಿದೆ. ಅನ್ಯಾಯದ ವಿರುದ್ಧ ಹಾಗೂ ನೊಂದವರ ಧ್ವನಿಯಾಗಿ ಕೆಲಸ ಮಾಡುವ ಸಂಘಟನೆ ಇದಾಗಿದೆ ಎಂದು ಹೇಳಿದರು. 

ಎಮ್ ಆರ್ ದೊಡ್ಡಮನಿ, ಸೋಮಶೇಖರ ಶಾಹಪೂರ ಸೇರಿದಂತೆ ಅನೇಕರು ಮಾತನಾಡಿದರು. ನಂತರ ನೂತನ ಇಂಡಿ ತಾಲೂಕು ಬೀಮ್ ಸರ್ಕಾರ ಸಂಘಟನೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಆನಂದ ಅಗರಖೇಡ, ಉಪಾಧ್ಯಕ್ಷರಾಗಿ ನಿಂಗರಾಯ ಬಾವಿಮನಿ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಆರ್ ನಾಯ್ಕೊಡಿ, ಸಂಘಟನಾ ಸಂಚಾಲಕರಾಗಿ ರಾಹುಲ್ ಮನಗೂಳಿ, ಖಜಾಂಚಿಯಾಗಿ ಆಕಾಶ ದೊಡ್ಡಮನಿ, ಗೌರವಾಧ್ಯಕ್ಷರಾಗಿ ಬಸಲಿಂಗಪ್ಪ ಹಳದಮನಿ ನಾಮದೇವ ಮಾವಿನಹಳ್ಳಿ, ರಾಜಶೇಖರ ಶಿಂಧೆ, ತ್ರೀಶೂಲ ಸಾಗರ, ಶಶಿಕುಮಾರ್ ಹರಿಜನ ರಮೇಶ ಹೊಸಮನಿ ಪ್ರವಿಣ ದೇವದರ ಅವರನ್ನು ಸದಸ್ಯರನಾಗಿ  ಆಯ್ಕೆ ಮಾಡಲಾಯಿತು. 

 ಹಿರಿಯ ಪತ್ರಕರ್ತರಾದ ವಿನಾಯಕ ಸೊಂಡುರ, ಶಿವಾನಂದ ಮೂಡಲಿಗಿ, ಹಾಗೂ ಎಸ್ ಎಂ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.