ಫಲಾನುಭವಿಗಳ ಆಯ್ಕೆ: ನೇರ ನೇಮಕಾತಿಗೆ ಆಗ್ರಹಿಸಿ ಮನವಿ
ಧಾರವಾಡ 08: ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಲಾಟರಿ ಪದ್ಧತಿ ರದ್ದುಗೊಳಿಸಿ ನೇರ ನೇಮಕಾತಿಗೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಮಾಜ ಜಲ್ಲಾ ಘಟಕದಿಂದ ಜಿಲ್ಲಾ ಪಂಚಾಯತ ಮುಖ್ಯಕಾರ್ಯದರ್ಶಿ ಡಾ. ಸತೀಶ ಅವರಿಗೆ ಮನವಿ ಅರ್ಪಿಸಲಾಯಿತು. ರಾಜ್ಯದಲ್ಲಿ ಹಿಂದುಗಳಿದ ವರ್ಗಗಳಲ್ಲಿ ವಿಶ್ವಕರ್ಮ ಸಮಾಜ ಜನ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದ್ದು, ಆರ್ಥಿಕವಾಗಿ ಹಿಂದುಳಿದದನ್ನು ಹೋರಾಟದ ಮುಖಾಂತರ ಮತ್ತು ಬೃಹತ್ ಸಮಾವೇಶಗಳನ್ನು ಮಾಡುವದರ ಮೂಲಕ ಹಿಂದಿನ ಸರ್ಕಾರದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಮ್ಮ ಸಮಸ್ಯೆಗೆ ಸರ್ಕಾರ ಕೂಡಲೇ ಸ್ಪಂದಿಸಿ ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ವಿವಿಧ ಯೋಜನೆಗಳಾದ ಗಂಗಾ ಕಲ್ಯಾಣ, ಅರಿವು, ಪಂಚವೃತ್ತಿ ಸಾಲ, ಮಹಿಳಾ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ, ಪಂಚ ಕಸಬುಗಳಾದ ಬೆಳ್ಳಿ, ಬಂಗಾರದ ಕೆಲಸ, ಕಟ್ಟಿಗೆ ಕೆಲಸ, ಲೋಹದ ಕೆಲಸ, ಶಿಲ್ಪದ ಕೆಲಸ ಹೀಗೆ ಅನೇಕ ಯೋಜನೆಗಳನ್ನು ರೂಪಿಸಿ ನಿಗಮದ ಕೆಲಸವನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಅರ್ಜಿಸಲ್ಲಿಸಿದ ಫಲಾನುಭವಿಗಳನ್ನು ಆಯ್ಕೆಮಾಡುವ ಪ್ರಕ್ರೀಯೆಯಲ್ಲಿ ಲಾಟರಿ ಪದ್ಧತಿಯನ್ನು ಅಳವಡಿಸಿದ್ದು, ಇದರಿಂದ ನಿಜವಾದ ಫಲಾನುಭವಿಗಳಿಗೆ ಇದರ ಪ್ರಯೋಜನೆ ದೊರೆಯದೇ ಮಧ್ಯಮ ಸ್ಥಿತಿವಂತರಿಗೆ ಇದರ ಲಾಭವಾಗುತ್ತಿದೆ.
ಕಾರಣ ವಿಶ್ವಕರ್ಮ ಸಮಾಜ ಸಬಲಗೊಳ್ಳಬೇಕಾದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಬಲಗೊಳ್ಳುವಲ್ಲಿ ಯಶಸ್ವಿಗೊಳ್ಳಬೇಕಾದರೆ, ನಿಜವಾದ ಫಲಾನುಭವಿಗಳನ್ನು ಆಯ್ಕೆ ಸಮಿತಿಯಲ್ಲಿ ನೇರವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು, ಒಟ್ಟಾರೆ ಸಮಾಜದ ಹಿತದೃಷ್ಠಿಯಿಂದ ಲಾಟರಿ ಪದ್ಧತಿ ರದ್ದುಗೊಳಿಸಿ ಏಕೆಂದರೆ ರಾಜ್ಯದ ಯಾವ ಜಿಲ್ಲೆಯಲ್ಲಿಯೋ ಈ ಲಾಟರಿ ಪದ್ಧತಿ ಇರುವದಿಲ್ಲ. ಆದರಿಂದ ಹೆಚ್ಚಿನ ಪ್ರಾದಿನಿತ್ಯವನ್ನು ನೇರವಾಗಿ ಫಲಾನುಭವಿಗಳನ್ನು ಆಯ್ಕೆಮಾಡಬೇಕೆಂದು ಧಾರವಾಡ ಜಿಲ್ಲಾ ವಿಶ್ವಕರ್ಮ ಮಹಾಸಭಾ ಮನವಿ ಮಾಡಿದೆ.
ಮನವಿ ಅರ್ಪಣೆ ಕಾಲಕ್ಕೆ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಮನೋಹರ ಲಕ್ಕುಂಡಿ, ಪ್ರ. ಕಾರ್ಯದರ್ಶಿ ಶಿವಣ್ಣ ಬಡಿಗೇರ, ನಿರ್ದೇಶಕ ವಸಂತ ಅರ್ಕಾಚಾರ್, ಶಂಕರ ಅರ್ಕಸಾಲಿ, ಲೋಕಪ್ಪ ಪೂಜಾರ, ನಾರಾಯಣ ಬಡಿಗೇರ, ಸಂತೋಷ ಬಡಿಗೇರ ಸಮಾಜದ ಮುಖಂಡರಾದ ಕಾಳಪ್ಪ ಬಡಿಗೇರ, ಸಂತೋಷ ಬಡಿಗೇರ, ಆರ್.ಕೆ. ಪತ್ತಾರ, ಎಂ.ಬಿ. ಬಡಿಗೇರ, ಗುರುನಾಥ ಪಟ್ಟಣಕೋಡಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ 