ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳ ಆಯ್ಕೆ

Selection of Namma Karnataka Army Office bearers

ಸಿಂದಗಿ 29: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಮ್ಮ ಕರ್ನಾಟಕ ಸೇನೆ ಸಿಂದಗಿ ತಾಲೂಕ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಅಧ್ಯಕ್ಷ ಮಹೇಶ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.  

ಜಿಲ್ಲಾ ಅಧ್ಯಕ್ಷ ಮಹೇಶ ನಾಯಕ ಮಾತನಾಡಿ ನಮ್ಮ ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯಾಗಿದೆ ಇಂತಹ ನಮ್ಮ ಭಾಷೆಗೆ ಧಕ್ಕೆ ತರುವಂತ ಕೆಲಸ ಯಾರೇ ಮಾಡಿದರು ಅದನ್ನು ನಮ್ಮ ಸಂಘಟನೆಯ ಪದಾಧಿಕಾರಿಗಳಾದ ತಾವು ಕಂಡಿಸಿ ಕನ್ನಡ ನಾಡು, ನುಡಿ, ಜಲ ಕ್ಕಾಗಿ ಹಾಗೂ ಹಿಂದುಳಿದವರ, ದೀನ ದಲಿತರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಬೇಕೆಂದು ಹೇಳಿದರು.  

ಅಧ್ಯಕ್ಷರಾಗಿ ಪುಂಡಲೀಕ ಬಿರಾದಾರ, ಉಪಾಧ್ಯಕ್ಷರಾಗಿ ಮನ್ಸೂರ ಪತ್ತೇಪುರ, ತಾಲೂಕ ಯುವ ಘಟಕ ಅಧ್ಯಕ್ಷರಾಗಿ ಸಿದ್ದು ಬಡಿಗೇರ, ಗೌರವ ಅಧ್ಯಕ್ಷರಾಗಿ ಸಂಗಪ್ಪ ಚೌರ, ಪ್ರಧಾನ ಕಾರ್ಯದರ್ಶಿಯಾಗಿ  ಸಾಗರ ಜೇರಟಗಿ, ಸಹ ಕಾರ್ಯದರ್ಶಿಯಾಗಿ ಆಕಾಶ ಪೂಜಾರಿ, ರೈತ ಘಟಕ ಅಧ್ಯಕ್ಷರಾಗಿ ರಜಾಕಸಾಬ ಚಾಂದಕವಟಗಿ, ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉಮೇಶ ಮಯೂರಮಠ, ಅವಿನಾಶ ಯಂಕಂಚಿ, ಸಾಗರ ಜೇರಟಗಿ, ಇನ್ನು ಅನೇಕರು ಉಪಸ್ಥಿತರಿದ್ದರು.