ರಾಷ್ಟ್ರಮಟ್ಟಕ್ಕೆ ಸ್ಪೂರ್ತಿ ಲಾಲಿಬುಡ್ಡಿ ಆಯ್ಕೆ
ರನ್ನ ಬೆಳಗಲಿ 21 ; ಗುರು ಮಹಾಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ರನ್ನ ಬೆಳಗಲಿಯ ವಿದ್ಯಾರ್ಥಿನಿ ಕುಮಾರಿ ಸ್ಪೂರ್ತಿ ನಾರಾಯಣ ಲಾಲಿಬುಡ್ಡಿ ರಾಜ್ಯಮಟ್ಟದ ನೆಟ್ ಬಾಲ್ ತಂಡದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು ಇದೇ ತಿಂಗಳು 25 ರಿಂದ 28 ವರೆಗೆ ಛತ್ತಿಸಘಡ ರಾಜ್ಯದ ಕೊರ್ಬಾದಲ್ಲಿ ನಡೆಯುವ ರಾಷ್ಟ್ರಮಟ್ಟದ ನೆಟ್ ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಈ ವಿದ್ಯಾರ್ಥಿನಿಗೆ ಬೆಳಗಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಿ ವಿ ಬರಮನಿ ಉಪಾಧ್ಯಕ್ಷರಾದ ಸಿ ಜಿ ನಾಯಕ, ಕಾರ್ಯಧ್ಯಕ್ಷರಾದ ಪಿ ಬಿ ಪೂಜಾರ, ಕಾರ್ಯದರ್ಶಿಗಳಾದ ಎಸ್ ಐ ಒಂಟಗೋಡಿ ಹಾಗೂ ಸರ್ವ ಸದಸ್ಯರು ಕಾಲೇಜಿನ ಪ್ರಾಚಾರ್ಯರು, ದೈಹಿಕ ನಿರ್ದೇಶಕರು, ಉಪನ್ಯಾಸಕರು ಹಾಗೂ ಊರಿನ ಗುರುಹಿರಿಯರು ಈ ವಿದ್ಯಾರ್ಥಿನಿಗೆ ಶುಭ ಹಾರೈಸಿದ್ದಾರೆ