ಜಪಾನ್ ಅಂತರಾಷ್ಟ್ರೀಯ ತಂತ್ರಜ್ಞಾನ ತರಬೇತಿ ಕಾರ್ಯಕ್ರಮಕ್ಕೆ ಜಿಐಟಿ ವಿದ್ಯಾಥರ್ಿಗಳ ಆಯ್ಕೆ

ಲೋಕದರ್ಶನ ವರದಿ ಬೆಳಗಾವಿ,14: ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿ ಐ ಟಿ) ವಿದ್ಯಾಥರ್ಿಗಳಾದ ಕು. ಅನಯ್ ಕುಲಕಣರ್ಿ, ಕು. ಅಮೋಘ ಹುಯಿಲಗೋಳ, ಕು. ಬದ್ರಿನಾಥ್ . ಕೆ ಹಾಗೂ ಕು. ಆದಿತ್ಯ ಠಕ್ಕರ ಅವರು ಜಪಾನ ಸಕರ್ಾರದ ಜಪಾನ್ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದ ಆಶ್ರದಯಲ್ಲಿ ರೂಪಿಸಿರುವ ಅತ್ಯಂತ ಪ್ರತಿಷ್ಠಿತ ಅಂತರಾಷ್ಟ್ರೀಯ ತಂತ್ರಜ್ಞಾನ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಇದು ಜಪಾನ್-ಏಷ್ಯಾ ವಿಜ್ಞಾನ ಯುವ ವಿನಿಮಯ ಕಾರ್ಯಕ್ರಮ (ಸಕುರಾ ವಿಜ್ಞಾನ ಯುವ ವಿನಿಮಯ)ದ ಭಾಗವಾಗಿದೆ. ಇದು ನಾಲ್ಕನೇ ಕೈಗಾರಿಕಾ ಕ್ರಾಂತಿ (ಇಂಡಸ್ಟ್ರಿ 4.0) ಯ ವಿಷಯಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ತಂತ್ರಜ್ಞಾನ ತರಬೇತಿ ಕಾರ್ಯಕ್ರಮವಾಗಿದೆ. ಇದು ಜಪಾನದ ಶಿಬೌರಾ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗದಲ್ಲಿ ನವೆಂಬರ್ 18 ರಿಂದ 29 2018 ವರೆಗೆ ನಡೆಯಲಿದೆ. ಈ ನಾಲ್ಕು ವಿದ್ಯಾಥರ್ಿಗಳ ಜೊತೆಗೆ ಮತ್ತು ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಶ್ವೇತಾ ಇಂದೂದರ್ ಗೌಡರ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ.ನಾಲ್ಕನೇ ಕೈಗಾರಿಕಾ ಕ್ರಾಂತಿಯ (ಇಂಡಸ್ಟ್ರಿ 4.0) ಕೃತಕ ಬುದ್ಧಿಮತ್ತೆ (ಎಐ), ಇಂಟನರ್ೆಟ್ ಆಫ್ ಥಿಂಗ್ಸ್(ಐ ಓ ಟಿ), ಬಿಗ್ ಡೇಟಾ ಮತ್ತು ರೊಬೊಟಿಕ್ಸ್ ತಂತ್ರಜ್ಞಾನಗಳನ್ನು ನಾಲ್ಕನೇ ಕೈಗಾರಿಕಾ ಕ್ರಾಂತಿಯ (ಇಂಡಸ್ಟ್ರಿ 4.0) ಪ್ರಮುಖ ತಂತ್ರಜ್ಞಾನಗಳೆಂದು ಪರಿಗಣಿಸಲಾಗುತ್ತದೆ. ಮತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿಯ (ಇಂಡಸ್ಟ್ರಿ 4.0) ರ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮುಂಬರುವ ತಂತ್ರಜ್ಞರಿಗೆ ಮಾಹಿತಿ ಮತ್ತು ಸಂವಹನ (ಐಸಿಟಿ) ಕ್ಷೇತ್ರದಲ್ಲಿ ತಾಂತ್ರಿಕ ನಿಪುಣರನ್ನಾಗಿ ಮಾಡಲು ಜಪಾನ್ ಸಕರ್ಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ ಈ ಕಾರ್ಯಕ್ರಮವನ್ನು ಪ್ರಾರಂಭಿಸಿತು ಜಪಾನ್-ಏಷ್ಯಾ ವಿಜ್ಞಾನ ಯುವ ವಿನಿಮಯ ಕಾರ್ಯಕ್ರಮ (ಸಕುರಾ ವಿಜ್ಞಾನ ಯುವ ವಿನಿಮಯ)ದ ಅಡಿಯಲ್ಲಿ ಪ್ರಾರಂಭಿಸಿತು. ಜಪಾನ್ ಸಕರ್ಾರದ ಪರವಾಗಿ ಜಪಾನದ ಶಿಬೌರಾ ತಾಂತ್ರಿಕ ಮಹಾವಿದ್ಯಾಲಯ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಬೆಳಗಾವಿಯ ಕೆಎಲ್ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಐಐಟಿ ಗುವಾಹಾಟಿಯ ವಿದ್ಯಾಥರ್ಿ ತಂಡಗಳು ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಕಾರ್ಯಕ್ರಮಕ್ಕಾಗಿ ಭಾರತದಿಂದ ಆಯ್ಕೆಯಾದ ಎರಡೇ ಎರಡು ತಂಡಗಳಾಗಿವೆ. ಈ ಕಾರ್ಯಕ್ರಮದಲ್ಲಿ, ಭಾಗವಹಿಸುವವರು ಈ ನಾಲ್ಕು ತಂತ್ರಜ್ಞಾನಗಳನ್ನು ಬಳಸಿಕೊಂಡು ಹೊಸ ಮಾಹಿತಿ ಮತ್ತು ಸಂವಹನ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ರಚಿಸುವುದು ಹೇಗೆ ಮತ್ತು ವ್ಯವಸ್ಥೆಯನ್ನು ಸಮಾಜದಲ್ಲಿ ಜಾರಿಗೆ ತರಲು ಹೇಗೆ ಹಾಗೂ ತಾಂತ್ರಿಕ ಪರಿಹಾರಗಳನ್ನು ರೂಪಿಸಲು ಸಂಶೋಧನಾ ಯೋಜನೆಯನ್ನು ಕಲಿಯುವರು. ಈ ಕಾರ್ಯಕ್ರಮವನ್ನು ಮುಖ್ಯವಾಗಿ ಮೂರು ಚಟುವಟಿಕೆಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ ಎಜಿಪಿಬಿಎಲ್ (ಸಮಸ್ಯೆ ಆಧಾರಿತ ಕಲಿಕೆ), ವಿಷಯಾಧಾರಿತ ಚಚರ್ೆಗಳು ಮತ್ತು ವಿಷಯಗಳನ್ನು ನೋಡುವ ದೃಷ್ಟಿಕೋನ ಹಾಗೂ ಸಂಶೋಧನಾ ಪ್ರಯೋಗಾಲಯಗಳಿಗೆ ಭೇಟಿ. ಎಜಿಪಿಬಿಎಲ್ - ಎಜಿ "ಅಡ್ವಾನ್ಸ್ಡ ಗ್ಲೋಬಲ್ ಪಿಬಿಎಲ್ (ಸಮಸ್ಯೆ ಆಧಾರಿತ ಕಲಿಕೆ). ಪಿಬಿಎಲ್ ಎಂಬುದು ಒಂದು ಬೋಧನಾ ವಿಧಾನವಾಗಿದ್ದು, ಇದರಲ್ಲಿ ಒಂದು ನಿದರ್ಿಷ್ಟ ಸಮಸ್ಯೆಯನ್ನು ಪರಿಹರಿಸಲು ಮತ್ತು ಆಲೋಚನೆಗಳನ್ನು ಚಚರ್ೆಯ ಮೂಲಕ ಮೌಲ್ಯಮಾಪನ ಮಾಡಲು ವಿದ್ಯಾಥರ್ಿಗಳು ಹೊಸ ಹೊಸ ಕಲ್ಪನೆಗಳನ್ನು ರಚಿಸುತ್ತಾರೆ. ಈ ಕಾರ್ಯಕ್ರಮ ಎರಡು ಹೆಚ್ಚುವರಿ ಚಟುವಟಿಕೆಗಳನ್ನು ಒಳಗೊಂಡಿದೆ. ಎರಡು ಹೆಚ್ಚುವರಿ ಚಟುವಟಿಕೆಗಳ ಮೂಲಕ, ವಿದ್ಯಾಥರ್ಿಗಳು ಸಂಶೋಧನಾ ಸಮಸ್ಯೆಗಳನ್ನು ಸ್ಪಷ್ಟಪಡಿಸುವುದು ಮತ್ತು ಪ್ರಾಯೋಗಿಕ ಕೌಶಲಗಳನ್ನು ಕಲಿಯುತ್ತಾರೆ. ಈ ಕಾರ್ಯಕ್ರಮದಲ್ಲಿ, ವಿಭಿನ್ನ ವಿಷಯಗಳೊಂದಿಗಿನ ನಾಲ್ಕು ವಿಷಯಾಧಾರಿತ ಚಚರ್ೆಗಳು ಹಾಗೂ ಎರಡು ಸಂಶೋಧನಾ ಪ್ರಯೋಗಾಲಯಗಳಿಗೆ ಭೇಟಿ ಮಾಡಿ ತಾಂತ್ರಿಕ ಸಮಸ್ಯಗಳನ್ನು ನೋಡುವ ದೃಷ್ಟಿಕೋನವನ್ನು ತಿಳಿದುಕೊಳ್ಳುವರು. ಜಪಾನ್ ಮತ್ತು ಏಷ್ಯಾದ ದೇಶಗಳೂ ಸೇರಿದಂತೆ ಒಟ್ಟು 25 ಸಂಸ್ಥೆಗಳಿಂದ ವಿದ್ಯಾಥರ್ಿ ತಂಡಗಳು ಈ ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಕೆಎಲ್ಎಸ್ ಕಾರ್ಯಧ್ಯಕ್ಷ ಶ್ರೀ. ಎಮ್. ಆರ್. ಕುಲಕಣರ್ಿ, ಜಿ ಐ ಟಿ ಆಡಳಿತ ಮಂಡಳಿ ಅಧ್ಯಕ್ಷರು ಶ್ರೀ. ಯು. ಏನ್. ಕಾಲಕುಂದ್ರಿಕರ್, ಪ್ರಾಚಾರ್ಯ. ಡಾ. ಎ. ಎಸ. ದೇಶಪಾಂಡೆ, ಆಡಳಿತ ವಿಭಾಗದ ಡೀನ್ ಪ್ರೊ. ಡಿ. ಎ. ಕುಲಕಣರ್ಿ, ಶೈಕ್ಷಣಿಕ ವಿಭಾಗದ ಡೀನ್ ಡಾ. ಎಂ. ಎಸ. ಪಾಟೀಲ್, ಸಂಯೋಜಕರಾದ ಪ್ರೊ. ಶ್ವೇತಾ ಗೌಡರ್, ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾಥರ್ಿ ವೃಂದ ಇವರನ್ನು ಈ ಸಾಧಕರನ್ನು ಅಭಿನಂದಿಸಿದ್ದಾರೆ. ಡಿಸೆಂಬರ್ನಲ್ಲಿ ಅಧಿವೇಶನ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ ಬೆಳಗಾವಿ, 14: ಕನರ್ಾಟಕ ವಿಧಾನ ಮಂಡಳದ ಚಳಿಗಾಲ ಅಧಿವೇಶನ ಡಿಸೆಂಬರ್ ನಲ್ಲಿ ನಡೆಯಲಿರುವುದರಿಂದ ಅಧಿವೇಶನದಲ್ಲಿ ಭಾಗವಹಿಸುವ ಗಣ್ಯರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು.