ಅಸಿಸ್ಟಂಟ್ ರೆಜಿಸ್ಟರರ್ ಕೊ-ಆಪ್ ಸೊಸೈಟಿ ಹುದ್ದೆಗೆ ಆಯ್ಕೆ

ಕಾಗವಾಡ 25: ಜುಗೂಳ ಗ್ರಾಮದ ರವೀಂದ್ರ ಪರಸಗೌಡಾ ಪಾಟೀಲ ಇವರು ಕನರ್ಾಟಕ ಲೋಕಸೇವಾ ಆಯೋಗದ ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತಿರ್ಣರಾಗಿ, ಅವರನ್ನು ಅಸಿಸ್ಟಂಟ್ ರೆಜಿಸ್ಟರರ್ ಕೊ-ಆಪ್ ಸೊಸೈಟಿ ಈ ಹುದ್ದೆಗಾಗಿ ಆಯ್ಕೆಯಾಗಿದ್ದಾರೆ.

ಜುಗೂಳ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿ, ಇದೇ ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದು, ಪದವಿ ಶಿಕ್ಷಣ ಕೆ.ಎಲ್.ಇ ಇಂಜೀನಿಯರಿಂಗ್ ಕಾಲೇಜಿನಲ್ಲಿ ಪಡೆದು, ಬೆಂಗಳೂರಿನಲ್ಲಿ ಖ್ಯಾತ ಸೇವೆ ಸಲ್ಲಿಸುತ್ತಾ ಕೆ.ಎ.ಎಸ್ ಮತ್ತು ಐ.ಎ.ಎಸ್ ಎರಡು ಉನ್ನತ ಹುದ್ದೆಗೆ ಪರೀಕ್ಷೆ ಬರೆದಿದ್ದರು. ಕೆ.ಎ.ಎಸ್ ಎರಡನೇ ಹಂತದಲ್ಲಿ ಉತ್ತಿರ್ಣರಾಗಿ ಅಸಿಸ್ಟಂಟ್ ರೆಜಿಸ್ಟರರ್ಕೊ-ಆಪ್ ಸೊಸೈಟಿಈ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಚಿಕ್ಕೋಡಿ ಡಿ.ಕೆ.ಎಸ್.ಎಸ್ ಸಕ್ಕರೆ ಕಾಖರ್ಾನೆಯ ನಿದರ್ೇಶಕ ಪರಸಗೌಡಾ ಪಾಟೀಲ ಇವರ ಸುಪುತ್ರರಾಗಿದ್ದಾರೆ. ಜುಗೂಳ ಗ್ರಾಮದಲ್ಲಿ ಪ್ರಥಮ ಬಾರಿಗೆ ಸಕರ್ಾರಿ ಕೆ.ಎ.ಎಸ್ ಹುದ್ದೆಗೆ ಉತ್ತೀರ್ಣರಾದ ಸೌಭಾಗ್ಯ ಇವರಿಗೆ ದೊರೆತಿದೆ. ಇವರು ಆಯ್ಕೆಯಾಗಿದ್ದರಿಂದ ಗ್ರಾಮದಲ್ಲಿಯ ಅವರ ಆಪ್ತರು, ಶಿಕ್ಷಣ ಸಂಸ್ಥೆಯಲ್ಲಿ ಸಿಹಿ ಹಂಚಿ, ಸಂಭ್ರಮಾಚರಿಸಿದರು.