ಇಂಡಿ 20: ಇಂಡಿ ತಾಲ್ಲೂಕಿನ ಕ್ರಿಯಾಶೀಲ ಸಂಘಟನಾ ಚತುರ ಶಿಕ್ಷಕರಾದ ರಮೇಶ ಮುಂಜಣ್ಣಿಯವರನ್ನು ರಾಜ್ಯಾಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ( ರಿ) ಬೆಂಗಳೂರರವರ ಆದೇಶದ ಮೇರೆಗೆ ರಾಜ್ಯದ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರನಾಗಿ ನೇಮಕ ಮಾಡಿ ರಾಜ್ಯದ ಅಧ್ಯಕ್ಷರು ಸಿ.ಎಸ್. ಷಡಕ್ಷರಿಯವರು ಆದೇಶ ಹೊರಡಿಸಿದ್ದಾರೆ.
ವಿಜಯಪೂರ ಜಿಲ್ಲಾ ಅಧ್ಯಕ್ಷರಾದ ಸುರೇಶ ಶೇಡಶ್ಯಾಳರವರು, ಇಂಡಿ ತಾಲೂಕಿನ ರಾಜ್ಯ ಸರಕಾರಿ ನೌಕರ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಂಘದ ಎಲ್ಲಾ ಪಧಾಧಿಕಾರಿಗಳು ರಮೇಶ್ ಮುಂಜಣ್ಣಿರನ್ನು ಅಭಿನಂದಿಸಿದ್ದಾರೆ. ರಮೇಶ್ ಮುಂಜಣ್ಣಿ ಅವರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಗೊಳ್ಳಗಿ ವಸತಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಇಲ್ಲಿ ಸ್ಮರಿಸಬಹುದು ಇವರ ಆಯ್ಕೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.