ಮುಧೋಳ : ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಕನ್ನಡ, ಹಿಂದಿ, ಉದರ್ು ಭಾಷೆಯ ಪತ್ರಿಗಳ ವಿತರಕರಾಗಿ ಪ್ರಸ್ತುತ ಸಮಾಜವೀರ, ವಿಶ್ವವಾಣಿ, ಉದಯಕಾಲ ದಿನಪತ್ರಿಕೆಯ ವರದಿಗಾರರಾಗಿ ಅನುಪಮ ಸೇವೆ ಸಲ್ಲಿಸುತ್ತಿರುವದನ್ನು ಜಿಲ್ಲಾ ಆಡಳಿತವು ಗುರುತಿಸಿ ನಗರದ ಬಿ.ಎಚ್. ಬೀಳಗಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಾಗಲಕೋಟ ಜಿಲ್ಲಾ ಕ್ರೀಡಾಂಗಣದಲ್ಲಿ ನ.1.ರಂದು ಜಿಲ್ಲಾ ಆಡಳಿತ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವ ಸನ್ಮಾನ ನೀಡಲಿದ್ದಾರೆ. ಇವರ ಜೊತೆ ಪತ್ರಿಕಾ ಕ್ಷೇತ್ರದಿಂದ ಬೀಳಗಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಜಲ್ಲೆಗಳಲ್ಲಿ ಅಪಾರ ಸೇವೆ ಸಲ್ಲಿಸಿ ನಿವೃತ್ತ ಹೊಂದಿರುವ ನಗರದ ಇನ್ನೋರ್ವ ಹಳಗನ್ನಡದ ಹಿರಿಯ ಸಾಹಿತಿ ಎಸ್.ಎಸ್.ಅವರನ್ನು ಸಹ ಡಿಸಿಎಂ. ಗೋವಿಂದ ಕಾರಜೋಳ ಅವರು ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಎಂದು ರಾಜ್ಯೋತ್ಸವ ಸಮಿತಿಯು ತಿಳಿಸಿದೆ.