ತಾಲೂಕ ಸಂಚಾಲಕರಾಗಿ ಮಾರುತಿ ಆಯ್ಕೆ

ಹುನಗುಂದ30: ಕರ್ನಾಟಕ  ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ತಾಲೂಕ ಸಂಚಾಲಕರಾಗಿ ಮಾರುತಿ ಭಾವಿಕಟ್ಟಿ ಆಯ್ಕೆಗೊಂಡಿದ್ದಾರೆ.                                                         ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಿತಿಯ ಪದಾಧಿಕಾರಿಗಳ ನೇಮಕವನ್ನು ಜಿಲ್ಲಾ ಸಂಚಾಲಕರಾದ ಹನಮಂತ ಸಂ.ಚಿಮ್ಮಲಗಿ ಜಿಲ್ಲಾ ಖಜಾಂಚಿ ಸಂಗಣ್ಣ ಮಡ್ಡಿಯವರ ನೇತೃತ್ವದಲ್ಲಿ ಮಾಡಲಾಯಿತು.

ಸಭೆಯಲ್ಲಿ ಹುನಗುಂದ ತಾಲೂಕು ತಾಲೂಕು ಸಂಘಟನಾ ಸಂಚಾಲಕರಾಗಿ ಪರಸಪ್ಪ ಕುಣಬೆಂಚಿ, ರವಿ ಮಸ್ಕಿ, ಬಾಲಾಜಿ ಭಜಂತ್ರಿ, ಮರುಳಸಿದ್ದಪ್ಪ ಮಾದರ, ರವಿ ಮಸ್ತಿ , ಮತ್ತು ತಾಲೂಕು ಖಚಾಂಚಿಯಾಗಿ ಮನೋಹರ ಮೂಕಿ, ನಗರ ಸಂಚಾಲಕರಾಗಿ ರಾಘು ಬಿಸನಾಳ ಅವರನ್ನು ಆಯ್ಕೆ ಮಾಡಲಾಗಿದೆ.  ಮುಂದಿನ ದಿನಗಳಲ್ಲಿ ಗ್ರಾಮ ಘಟಕಗಳಲ್ಲಿ ಶಾಖೆಯನ್ನು ಮಾಡಿ ಸಂಘಟನೆ ಬಲವನ್ನು ತುಂಬುತ್ತೇವೆ ಎಂದು ತಿಳಿಸಿದರು.