ಚೆನ್ನೈ, ಜು.26 (ಹಿ.ಮಿಳುನಾಡಿನಲ್ಲಿ ದುರಂತವೊಂದು ಸಂಭವಿಸಿದೆ. ವಿಡಿಯೋ ನೋಡಿ ಹೆರಿಗೆ ಮಾಡಿಸುವಾಗ ಮಹಿಳೆ ಸಾವಿಗೀಡಾಗಿದ್ದಾಳೆ. 28 ವರ್ಷದ ಕೆ.ಕೃತಿಗಾ ಮೃತ ಮಹಿಳೆಯಾಗಿದ್ದು, ತಿರುವಣ್ಣಾಮಲೈ ಜಿಲ್ಲೆಯ ಪುದುಪಾಲ್ಯಂ ಸಮೀಪದ ರೈತ ನಗಿರೀಶ್ವರ್ ನಗರದಲ್ಲಿ ಈ ಘಟನೆ ನಡೆದಿದೆ. ಕೃತಿಕಾ ಪತಿ ಕಾತರ್ಿಕೇಯನ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಈ ದಂಪತಿಗೆ ಈಗಾಗಲೇ ಮೂರು ವರ್ಷದ ಮಗಳು ಇದ್ದಾಳೆ. ಎರಡನೇ ಬಾರಿಗೆ ಗಭರ್ಿಣಿಯಾಗಿದ್ದ ಕೃತಿಕಾಳಿಗೆ ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪತಿ ಕಾತರ್ಿಕೇಯನ್ ತನ್ನ ಕುಟುಂಬ ಸ್ನೇಹಿತರಾದ ಪ್ರವೀಣ್ ಹಾಗು ಲಾವಣ್ಯ ದಂಪತಿ ಜೊತೆ ಸೇರಿ ಮನೆಯಲ್ಲೇ ಆಕೆಗೆ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ.
ಪ್ರವೀಣ್ ಮತ್ತು ಲಾವಣ್ಯ ದಂಪತಿ ನೈಸಗರ್ಿಕ ಚಿಕಿತ್ಸೆ ನಂಬುತ್ತಿದ್ದವರಾಗಿದ್ದು, ಕೃತಿಕಾಳಿಗೆ ಮನೆಯಲ್ಲೇ ಹರಿಗೆ ಮಾಡಿಸೋಣ.
ಮನೆಯಲ್ಲಿ ಹರಿಗೆ ಮಾಡಿಸೋದು ಆಸ್ಪತ್ರೆಗಿಂತ ಒಳ್ಳೆಯದು ಎಂದು ಕಾತರ್ಿಕೇಯನ್ ತಲೆ ತುಂಬಿದ್ದಾರೆ. ಅಂತೆಯೇ, ಮನೆಯಲ್ಲೇ ಕೃತಿಕಾಳಿಗೆ ಹೆರಿಗೆ ಮಾಡಿಸಲು ಮೂವರು ಮುಂದಾಗಿದ್ದಾರೆ. ಗಭರ್ಿಣಿಗೆ ಹೇಗೆ ಸಹಾಯ ಮಾಡುಬಹುದು ಎಂಬ ಯುಟ್ಯೂಬ್ ವಿಡಿಯೋ ನೋಡಿ ಹೆರಿಗೆ ಸಾಹಸಕ್ಕೆ ಮೂವರೂ ಕೈ ಹಾಕಿದ್ದು, ಕೃತಿಕಾ ಹೆಣ್ಣು ಮಗವಿಗೂ ಜನ್ಮ ನೀಡಿದ್ದಾಳೆ.
ಆದರೆ, ಮಗುವಿಗೆ ಜನ್ಮ ನೀಡಿದ ನಂತರ ಬಳಿಕ ಕೃತಿಕಾ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಕೇಂದ್ರದ ಅಧಿಕಾರಿ ವಿವರಿಸಿದ್ದಾರೆ. ಸದ್ಯ ಕೃತಿಕಾ ಸಾವಿನ ಸಂಬಂಧ ಕಾತರ್ಿಕೇಯನ್ ಮತ್ತು ಪ್ರವೀಣ್-ಲಾವಣ್ಯ ದಂಪತಿ ವಿರುದ್ಧ ಪೊಲೀಸರಿಗೆ ದೂರು
ದಾಖಲಾಗಿದೆ.