ಲೋಕದರ್ಶನ ವರದಿ
ಬೆಳಗಾವಿ 21: ಬಿತ್ತಿದಂತೆ ಬೆಳೆ ಎನ್ನುವ ಗಾದೆಗಿಂತ ಮೊದಲು ಬೀಜದಂತೆ ಬೆಳೆ ಎನ್ನುವುದು ಹೆಚ್ಚು ಸೂಕ್ತ. ಬೀಜದ ಮೂಲಗುಣಧರ್ಮವನ್ನು ಗಮನದಲ್ಲಿಟ್ಟುಕೊಂಡು ಬಿತ್ತನೆಯ ಪೂರ್ವದಲ್ಲಿ ಬೀಜವನ್ನು ವೈಜ್ಞಾನಿಕ ಕ್ರಮಗಳಿಂದ ಉಪಚರಿಸಿದಾಗ ಉತ್ತಮ ಇಳುವರಿ ಪಡೆಯಲು ಸಾಧ್ಯ. ಆದ್ದರಿಂದ ಬಿತ್ತನೆಯ ಪೂರ್ವ ಬೀಜೋಪಚಾರ ಮಾಡಬೇಕು ಎಂದು ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ತಜ್ಞ ಡಾ. ಎಸ್. ಎಸ್. ಹಿರೇಮಠ ಸಲಹೆ ನೀಡಿದ್ದಾರೆ.
ಬೀಜ ಮೊಳಕೆ ಪರೀಕ್ಷೆಯಿಂದ ಬಿತ್ತನೆಗೆ ಯೋಗ್ಯವಾದ ಬೀಜಗಳನ್ನು ಆಯ್ಕೆ ಮಾಡುವ ಸಹಾಯಕವಾಗುವುದಲ್ಲದೇ ಕಳಪೆ ಬೀಜಗಳ ಬಳಕೆಯಿಂದಾಗುವ ನಷ್ಟವನ್ನು ತಡೆಗಟ್ಟಲು ತುಂಬಾ ಸಹಕಾರಿಯಾಗುತ್ತದೆ. ರೈತರು ತಾವು ಬಿತ್ತನೆಗಾಗಿ ಬಳಸುವ ಬೀಜಗಳ ಮೊಳಕೆ ಪ್ರಮಾಣವನ್ನು ತಮ್ಮ ಮನೆಯಲ್ಲಿ ರೈತರು ತಾವು ಬಿತ್ತನೆಗಾಗಿ ಬಳಸುವ ಬೀಜಗಳ ಪ್ರಮಾಣವನ್ನು ತಮ್ಮ ಮನೆಯಲ್ಲಿ ಸರಳ ರೀತಿಯಲ್ಲಿ ಪೇಪರ (ಕಾಗದ) ಉಪಯೋಗಿಸಿ, ತಾವೇ ಸ್ವತಃ ಪರೀಕ್ಷಿಸಿಕೊಳ್ಳಬಹುದು. ಸುಮಾರು ಒಂದೂವರೆ ಅಡಿ ಉದ್ದ ಹಾಗೂ ಒಂದು ಅಡಿ ಅಗಲವಿರುವ 2 ದಿನ ಪತ್ರಿಕೆಗಳನ್ನು ತೆಗೆದುಕೊಳ್ಳಬೇಕು ತದನಂತರ ಪತ್ರಿಕೆಯನ್ನು 1-2 ನಿಮಿಷ ನೀರಿನಲ್ಲಿ ನೆನೆ ಹಾಕಿ ಹೆಚ್ಚಿದ ನೀರನ್ನು ಬಸಿದು ಹೋಗುವಂತೆ ಮಾಡಿರಿ, ನಂತರ ದಿನಪತ್ರಿಕೆಯ ಅಳತೆಗಿಂತ ಸ್ವಲ್ಪ ಅಗಲವಾದ ಪ್ಲಾಸ್ಟಿಕ್ ಹಾಳೆಯನ್ನು ನೆಲದ ಮೇಲೆ ಹರಡಿರಿ, ಅದರ ಮೇಲೆ ನೀರಿನಲ್ಲಿ ನೆನೆಸಿದ ಹಾಳೆಗಳನ್ನು ಒಂದರ ಮೇಲೆ ಒಂದರಂತೆ ಹರಡಿ; ಅದರ ಮೆಲೆ ಸಮನಾದ ಅಂತರದಲ್ಲಿ ನೂರು ಬೀಜಗಳನ್ನು ಜೋಡಿಸಬೇಕು. ಒಂದು ಬೀಜದಿಂದ ಇನ್ನೊಂದು ಬೀಜ 1 ರಿಂದ 1.5 ಅಂಗುಲದಷ್ಟು ದೂರವಿರಲಿ. ಬೀಜಗಳನ್ನು ಜೋಡಿಸಿದ ನಂತರ ನೀರನ್ನು ಸಿಂಪಡಿಸಿ ನೆನೆಸಿದ ಇನ್ನೊಂದು ದಿನಪತ್ರಿಕೆಯನ್ನು ಅದರ ಮೇಲೆ ಹರಡಬೇಕು. ನಂತರ ಒಟ್ಟುಗೂಡಿಸಿಕೊಂಡು ಸುರಳಿಯಾಗಿ ಸುತ್ತಿ ತಂಪಾಗಿರುವ ಸ್ಥಳದಲ್ಲಿ ನೇರವಾಗಿ ಮತ್ತು ಒರೆಯಾಗಿ ಇಡಬೇಕು. ಒಂದು ವಾರ ನಂತರ ಸುರಳಿಯಾಗಿ ಸುತ್ತಿಟ್ಟಿರುವ ಹಾಳೆಗಳನ್ನು ನಿಧಾನವಾಗಿ ಬಿಡಿಸಿ, ತೆಗೆದು ನೋಡಿದಾಗ ಬೀಜಗಳು ಮೊಳಕೆ ಬಂದಿರುವುದು ಕಂಡು ಬರುತ್ತದೆ. ಚೆನ್ನಾಗಿ ಬೇರು ಮತ್ತು ಕಾಂಡಗಳೆರಡೂ ಬೆಳೆದಿರುವ ಸಸಿಗಳನ್ನು ಲೆಕ್ಕ ಮಾಡಿ ಶೇ. ಪ್ರಮಾಣವನ್ನು ಕಂಡುಕೊಳ್ಳಬಹುದು (ಉದಾ: 100 ಬೀಜಗಳಲ್ಲಿ 80 ಬೀಜಗಳು ಚೆನ್ನಾಗಿ ಮೊಳಕೆಯಾಗಿದ್ದಲ್ಲಿ ಆ ಬೀಜಗಳ ಮೊಳಕೆ ಶೇ. 80 ರಷ್ಟಾಗಿರುತ್ತದೆ)
ಭತ್ತ:
ಬೀಜೋಪಚಾರ
ಭತ್ತದ ಬೆಂಕಿರೋಗದ ನಿರ್ವಹಣೆಗಾಗಿ ಪ್ರತಿ ಲೀ. ನೀರಿಗೆ 10 ಗ್ರಾಂ. ಸೂಡೋಮೊನಾಸ್ ಪ್ಲೂರೋಸೆನ್ಸ್ ಬೆರೆಸಿದ ದ್ರಾವಣದಲ್ಲಿ 30 ನಿಮಿಷ ಬೀಜಗಳನ್ನು ನೆನೆಸಿ ಬಿತ್ತಬೇಕು. ನಾಟಿಗೆ ಮುಂಚೆ ಪ್ರತಿ ಲೀ. ನೀರಿಗೆ 4 ಗ್ರಾಂ. ಸೂಡೊಮೊನಾಸ್ ಪ್ಲೂರೋಸೆನ್ಸ್ ಬೆರೆಸಿದ್ ದ್ರಾವಣದಲ್ಲಿ ಬೇರುಗಳನ್ನು 20 ನಿಮಿಷ ಅದ್ದಬೇಕು. 20-25 ದಿನಗಳ ನಂತರ ಪ್ರತಿ ಲೀ. ನೀರಿಗೆ 4 ಗ್ರಾಂ. ಸುಡೊಮೊನಾಸ್ ಪ್ಲೂರೊಸೆನ್ಸ್ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು.
ಕಾಂಡ ಕೊರೆಯುವ ಹುಳುವಿನ ನಿರ್ವಹಣೆಗಾಗಿ ಸಸಿಗಳನ್ನು ನಾಟಿ ಮಾಡುವ ಮುಂಚೆ ಕ್ಲೋರ್ಪೈರಿಪಾಸ್ 20 ಇಸಿ ಕೀಟನಾಶಕ 2 ಮಿಲೀ ಪ್ರತಿ ಲೀ. ನೀರಿನ ದ್ರಾವಣದಲ್ಲಿ ಬೇರುಗಳನ್ನು ಅದ್ದಿ ನಾಟಿ ಮಾಡಬೇಕು.
ಸೋಯಾಅವರೆ:
ಪ್ರತಿ ಕಿ.ಗ್ರಾಂ. ಬೀಜಕ್ಕೆ 3.0 ಗ್ರಾಂ ಥೈರಾಮ್ 75 ಡಬ್ಲೂಪಿ ಅಥವಾ 2 ಗ್ರಾಂ ಕಾಬರ್ಾಕ್ಸಿನ್ 75 ಡಬ್ಲೂಪಿನಿಂದ ಬೀಜೋಪಚಾರ ಮಾಡುವುದರಿಂದ ಬೀಜ ಮತ್ತು ಸಸಿಕೊಳೆ ಹಾಗೂ ಬುಡಕೊಳೆ ರೋಗವನ್ನು ನಿಯಂತ್ರಿಸಬಹುದು. ನೇರಳೆ ಬಣ್ಣದ ಬೀಜದ ರೋಗ ಹತೋಟಿಗಾಗಿ ಬಿತ್ತಿಸಿ ಬೀಜದಲ್ಲಿ ನೇರಳೆ ಬಣ್ಣಕ್ಕೆ ತಿರುಗಿದ ಬೀಜಗಳೆನಾದರೂ ಇದ್ದಲ್ಲಿ ಆರಿಸಿ ತೆಗೆಯಬೇಕು ಹಾಗೂ ಪ್ರತಿ ಕಿ.ಗ್ರಾಂ. ಬೀಜಕ್ಕೆ 3 ಗ್ರಾಂ. ಥೈರಾಮ್ನಿಂದ ಬೀಜೋಪಚಾರ ಮಾಡಿ ಬಿತ್ತಬೇಕು.
ಹೆಸರು:
ಪ್ರತಿ ಕಿ.ಗ್ರಾಂ. ಬೀಜಕ್ಕೆ 10 ಗ್ರಾಂ ಟ್ರೈಕೊಡಮರ್ಾ ಜೈವಿಕ ಶಿಲೀಂದ್ರನಾಶಕವನ್ನು ಲೇಪಿಸಿ ಬಿತ್ತುವುದರಿಂದ ಸಕರ್ೊಸ್ಪೊರಾ ಎಲೆಚುಕ್ಕೆ ರೋಗವನ್ನು ನಿಯಂತ್ರಣದಲ್ಲಿಡಬಹುದು. ಅದೇರೀತಿ, ಚಿಬ್ಬುರೋಗದ ನಿರ್ವಹಣೆಗಾಗಿ ಪ್ರತಿ. ಕಿ.ಗ್ರಾಂ. ಬೀಜಕ್ಕೆ 2 ಗ್ರಾಂ. ಕಾರ್ಬನ್ಡೈಜಿಮ್ 50 ಡಬ್ಲೂಪಿ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಬೇಕು.
ಗೋವಿನ ಜೋಳ:
ಸಯಾಂಟ್ರಾನೊರಿಪ್ರೊಲ್ 19.8% + ಥಯಾಮಿಥಾಕ್ಸಾಮ್ 19.8 ಔಷಧಿಯನ್ನು 4 ಮಿ.ಲೀ. ಪ್ರತಿ ಕೆ.ಜಿ ಬೀಜಕ್ಕೆ ಲೇಪನ ಮಾಡಿ ಬಿತ್ತುವುದರಿಂದ 35-40 ದಿನವಗಳವರೆಗೆ ಲದ್ದಿಹುಳುವಿನ (ಸೈನಿಕ) ಬಾಧೆ ತಡೆಗಟ್ಟಬಹುದು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೈವಿಕ ಶಿಲೀಂದ್ರನಾಶಕಗಳು ಹಾಗೂ ಜೈವಿಕ ಗೊಬ್ಬರಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ, ಮೊ.9535604747, ಸಂಪರ್ಕಿಸಿ.