ರಿಯಾಯಿತಿ ದರದಲ್ಲಿ ಬೀಜ ವಿತರಣೆಗೆ ಆರಂಭ
Seed distribution begins at discounted rates
ಸಂಬರಗಿ 26: ಕೃಷಿ ಇಲಾಖೆ ವತಿಯಿಂದ ಮುಂಗಾರು ಬಿತ್ತನೆ ಮಾಡಲು ಸರ್ಕಾರದಿಂದ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ರವಿ ಬಾಂಗಾರಿ ಹೇಳಿದರು.
ಮದಭಾವಿ ಗ್ರಾಮದ ಪಿಕೆಪಿಎಸ್ ಸಂಘದಲ್ಲಿ ಬೀಜ ವಿತರಿಸಿ ಮಾತನಾಡಿದ ಅವರು ಗಡಿಭಾಗದಲ್ಲಿ ನಿಗದಿತ ಅವಧಿಯಲ್ಲಿ ಮಳೆಯಾದ ಕಾರಣ ರೈತರಿಗೆ ಬಿತ್ತನೆ ಮಾಡಲು ಅನುಕೂಲವಾಗಿದೆ. ಕೃಷಿ ಇಲಾಖೆಯಿಂದ ಉದ್ದು, ಹೆಸರು, ಗೋವಿನ ಜೋಳ, ತೊಗರೆ ಬೀಜ ಲಭ್ಯವಿದ್ದು ರೈತರು ತಮ್ಮ ಪಹಣಿ, ಆಧಾರ ಕಾರ್ಡ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿದ್ದರೆ ಜಾತಿ ಪ್ರಮಾಣ ಪತ್ರ, ರೈತರ ಗುರುತಿನ ಚೀಟಿ ತೆಗೆದುಕೊಂಡು ಬೀಜ ವಿತರಣೆ ಕೇಂದ್ರಕ್ಕೆ ಸಂಪರ್ಕಿಸಿ ತಮಗೆ ಬೇಕಾದ ಬೀಜವನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿದರು.
ಅಪ್ಪಣ್ಣ ಮಗದುಮ್ಮ, ತುಕಾರಾಮ ಮಾಳಿ, ಮಹಾಂತೇಶ ನೇಜ, ಸಹಕಾರಿ ಸಂಘದ ವ್ಯವಸ್ಥಾಪಕ ಅಣ್ಣಾಸಾಬ ಮೆಂಡಿಗೇರಿ, ಕೃಷಿ ಸಖಿಯರಾದ ರೇಣುಕಾ ಕೋಲೆ, ಅನಿತಾ ಅವಳೆ, ವಿಜಯಕುಮಾರ ಮಾಳಿ, ಖಂಡು ಗಾಯಕವಾಡ ಇನ್ನಿತರರು ಉಪಸ್ಥಿತರಿದ್ದರು.
ಲೋಕದರ್ಶನ ವರದಿ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 