ಲೋಕದರ್ಶನ ವರದಿ
ಕೊಪ್ಪಳ: ಉತ್ತರ ಕನರ್ಾಟಕ ಪ್ರತ್ಯೇಕತೆಯ ಕೂಗಿಗೆ ರಾಜ್ಯದ ಮುಂದುವರೆದ ಬೆಂಗಳೂರು, ಮಂಗಳೂರು, ಮಂಡ್ಯ ಮೈಸೂರು ಜನರು ಕಾರಣಗಳನ್ನು ನೋಡಬೇಕು ಹೊರೆತು ಕೇವಲ ಭಾವನಾತ್ಮಕ ಮಾತುಗಳಿಂದ ಪ್ರಯೋಜನವಿಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ ಒಂದು ದಿನದ ಕನರ್ಾಟಕ ನೆಲ ಜಲ ಭಾಷೆ ಸಾಂಸ್ಕೃತಿಕ ಹಬ್ಬದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿಶ್ವೇಶ್ವರಯ್ಯನವರ ಹೆಸರಲ್ಲಿ ಸಂಸ್ಥೆ ಮಾಡಿಕೊಂಡು ಒಮದು ಅಕಾಡೆಮಿ ಸರಕಾರ ಮಾಡಲು ಆಗದಷ್ಟು ಕೆಲಸಗಳನ್ನು ರಮೇಶ ಸುವರ್ೆ ಮಾಡಿದ್ದಾರೆ, ರಾಜ್ಯದುದ್ದಗಲಕ್ಕೂ ಅವರು ತಮ್ಮ ಕಾರ್ಯವನ್ನು ವಿಸ್ತರಿಸಿಕೊಂಡಿದ್ದಾರೆ, ಅವರು ಉತ್ತರ ಕನರ್ಾಟಕ ಅದರಲ್ಲೂ ಹೈದರಾಬಾದ ಕನರ್ಾಟಕದ ಕೊಪ್ಪಳದವರು ಎಂಬ ಕಾರುಣಕ್ಕೆ ಅವರನ್ನು ಉದಾಸೀನ ಮಾಡಲಾಗುತ್ತದೆ, ಅದರಂತೆ ನಮ್ಮ ಭಾಗವನ್ನು ಯಾವುದರಲ್ಲೂ ಸರಿಯಾಗಿ ಪರಿಗಣಿಸುವದಿಲ್ಲ, ಎಷ್ಟು ಅಕಾಡೆಮಿಗಳಿವೆ, ಎಷ್ಟು ಪ್ರಶಸ್ತಿ ಕೊಡುತ್ತಾರೆ, ನಮ್ಮ ಭಾಗಕ್ಕೆ ಏನು ಸಿಗುತ್ತದೆ, ಎಷ್ಟು ಸಚಿವರಾಗುತ್ತಾರೆ, ನಮ್ಮವರಿಗೆ ಎಷ್ಟು ಸಿಗುತ್ತವೆ ಎಲ್ಲವನ್ನೂ ಗಮನಿಸಬೇಕು ಅಂದಾಗ ಮಾತ್ರ ಅಖಂಡತೆಗೆ ಅರ್ಥ ಬರುತ್ತದೆ. ಕೇವಲ ಮಾತಿನಿಂದ ಒಂದಾಗಿರಿಸಲು ಆಗಲ್ಲ, ನಮಗೆ ಸಿಗಬೇಕಾದ ನ್ಯಾಯ ಕೊಡಿ ಎಂದು ಆಗ್ರಹಿಸಿದರು.
ಕೊಪ್ಪಳ ನಗರದ ಅಪ್ಪಟ ದೇಶಿ ಪ್ರತಿಭೆ, ಸಾಮಾಜಿಕ ಜಾಲತಾಣದ ಫೆವರಿಟ್ ಗಾನ ಕೋಗಿಲೆ ಗಂಗಮ್ಮ ಅವರಿಗೆ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿಯೊಂದಿಗೆ 7000 ರೂ. ನಗದು, ಪ್ರಶಸ್ತಿ ಫಲಕ, ಗೌರವ ಸನ್ಮಾನ ಮಾಡಲಾಯಿತು. ಇದೇ ವೇಳೆ ಗಂಗಮ್ಮ ಅವರ ಗಾಯನೋತ್ಸವ ಏರ್ಪಡಿಸಲಾಗಿತ್ತು, ರಾಜಧಾನಿಯಲ್ಲಿ ಅದು ಅವರ ಮೊದಲ ವೇದಿಕೆ ಕಾರ್ಯಕ್ರಮ ಅಗಿದ್ದು ವಿಶೇಷವಾಗಿತ್ತು, ಇದೇ ವೇಳೆ ಅವರ ಸಂಗೀತವನ್ನು ಮೆಚ್ಚಿ ನೆರೆದ ಗಣ್ಯರು ಮತ್ತು ಪ್ರೇಕ್ಷಕರು ಸುಮಾರು 30 ಸಾವಿರ ರುಪಾಯಿಗಳ ದೇಣಿಗೆ ನೀಡಿದರು.
ಸಾಂಸ್ಕೃತಿಕ ಸಂಘಟಕ ಶಿವಪ್ರಸಾದ ಮಠಪತಿ, ಗಾಯಕರಾದ ಹುಸೇನ ಭಾಷಾ ಹಾಗೂ ವಿಜಯಕುಮಾರ ಜಿ. ಗೊಂಡಬಾಳ ಅವರಿಗೆ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಿವಿಧ ವಿಷಯಗಳ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮಿಗಳು, ತುಮಕೂರಿನ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ದಾವಣಗರೆ ಜಿಲ್ಲೆ ಪಾಂಡೋಮಟ್ಟಿಯ ವಿರಕ್ತಮಠದ ಗುರುಬಸವ ಸ್ವಾಮಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವನಕಲ್ಲು ಮಠದ ಬಸವರಮಾನಂದ ಸ್ವಾಮಿಗಳು, ಬೆಳಗಾವಿ ಜಿಲ್ಲೆಯ ರಂಭಾಪುರಿ ಶಾಖಾ ಹಿರೇಮಠದ ಕಲ್ಮೇಶ್ವರ ಸ್ವಾಮಿಗಳು ದಿವ್ಯಸಾನಿಧ್ಯ ಮತ್ತು ಆಶೀರ್ವಚನ ನೀಡಿದರು. ಮಾಜಿ ಸಚಿವರಾದ ರಾಮಚಂದ್ರಗೌಡರು ಕಾರ್ಯಕ್ರಮ ಉದ್ಘಾಟಿಸಿದರು. ವಿಷಯ ಮಂಡನೆ ಮತ್ತು ಅಭಿನಂದನಾ ಭಾಷಣವನ್ನು ಮಕ್ಕಳ ಸಾಹಿತಿಯಾದ ಡಾ. ರಾಜೇಂದ್ರ ಗಡಾದರವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನರ್ಾಟಕ ಹೌಸಿಂಗ್ ಬೋಡರ್್ನ ಮಾಜಿ ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ, ಮಾಜಿ ಶಾಸಕ ಡಾ. ನೆ.ಲ. ನರೇಂದ್ರಬಾಬು, ಚಲನಚಿತ್ರ ಕಲಾವಿದರಾದ ಮೀನಾ, ಡಿ.ವಿ.ಸೌಜನ್ಯ ಮುಂತಾದವರು ಭಾಗವಹಸಿದ್ದರು. ಕಾರ್ಯಕ್ರಮ ಸಂಘಟಕರಾದ ರಮೇಶ ಸುವರ್ೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಸ್ಥೆಯ ಹೈದರಾಬಾದ ಕನರ್ಾಟಕ ಸಮಚಾಲಕ ಮಂಜುನಾಥ ಜಿ. ಗೊಂಡಬಾಳ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.