ದ್ವಿತೀಯ ಪಿಯುಸಿ ಪರೀಕ್ಷೆ : ಡಿಸಿ ಭೇಟಿ ಪರೀಶೀಲನೆ
ಬಾಗಲಕೋಟೆ : ಜಿಲ್ಲೆಯಾದ್ಯಂತ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನ ಶನಿವಾರದಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಬಾಗಲಕೋಟೆ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಜಾನಕಿ ಭೇಟಿ ನೀಡಿ ಪರೀಶೀಲನೆ ಮಾಡಿದರು. ಮುಖ್ಯ ಅಧೀಕ್ಷಕರಿಂದ ಪರೀಕ್ಷಾ ಕೇಂದ್ರದಲ್ಲಿರುವ ಮಕ್ಕಳ ಹಾಜರಾತಿ, ಪರೀಕ್ಷೆ ಸುಸೂತ್ರವಾಗಿ ನಡೆಸಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಪರೀಕ್ಷಾ ಮೊದಲ ದಿನ ಶನಿವಾರ ಕನ್ನಡ ವಿಷಯ ಪರೀಕ್ಷೆಗೆ ನೋಂದಣಿಯಾದ 528600 ವಿದ್ಯಾರ್ಥಿಗಳ ಪೈಕಿ 22468 ವಿದ್ಯಾರ್ಥಿಗಳು ಹಾಜರಾಗಿ 483 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಟ್ಟಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.