ಬೆಳಗಾವಿ16: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಅಧೀನದ ವಿದ್ಯಾಲಯದ ಅಂತರ ಕಾಲೇಜು ಮಟ್ಟದ ಹಾಕಿ ಪಂದ್ಯಾವಳಿಯನ್ನು ಇದೇ ದಿ. 15ಮತ್ತು 16ರಂದು ಎಸ್.ಜಿ.ಬಿ.ಆಯ್.ಟಿ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಎಸ್.ಜಿ.ಬಿ.ಆಯ್.ಟಿ ಕಾಲೇಜು ದ್ವೀತಿಯ ಸ್ಥಾನವನ್ನು ಪಡೆದು ಕೊಂಡಿತು. ಪ್ರಥಮ ಸ್ಥಾನವನ್ನು ಕೆಎಲ್ಇ ಎಂ.ಎಸ್ ಶೇಷಗಿರಿ ಮಹಾವಿದ್ಯಾಲಯವು ಪಡೆಯಿತು. ಕಾಲೇಜಿನ ಈ ಸಾಧನೆಗೆ ಪ್ರಾಂಶುಪಾಲರಾದ ಪ್ರೋ ಸಿದ್ದರಾಮಪ್ಪಾ ಇಟ್ಟಿ, ಹಾಗೂ ಡಾ ಬಿ ಆರ್ ಪೆಟಗುಂಡಿ ವಿಜೇತ ತಂಡಗಳಿಗೆ. ಪ್ರಶಸ್ತಿಯನ್ನು ವಿತರಿಸಿದರು.