ಹೊಸದಿಲ್ಲಿ : ಇಲ್ಲಿನ ಗೋಲೆ ಮಾಕರ್ೆಟ್ ಪ್ರದೇಶದಲ್ಲಿರುವ ನ್ಯೂಡೆಲ್ಲಿ ಮುನಿಸಿಪಲ್ ಕೌನ್ಸಿಲ್ (ಎನ್ಎಂಡಿಸಿ) ಶಾಲೆಯ ಎರಡನೇ ತರಗತಿಯ ವಿದ್ಯಾಥರ್ಿಯ ಮೇಲೆ ನಿನ್ನೆ ಗುರುವಾರ ನಡೆದಿದ್ದ ಅಮಾನುಷ ಅತ್ಯಾಚಾರವನ್ನು ಖಂಡಿಸಿ ವಿದ್ಯಾಥರ್ಿಗಳ ಹೆತ್ತವರನೇಕರು ಇಂದು ಶಾಲೆಯ ಆವರಣದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಮಹಿಳೆಯರು ಕೂಡ ತಮ್ಮ ಹೆಸರನ್ನು ರಿಜಿಸ್ಟರ್ ಮಾಡಿ ಶಾಲಾ ಆವರಣವನ್ನು ಪ್ರವೇಶಿಸುವಷ್ಟು ಖಡಕ್ ಭದ್ರತೆ ಇರುವಾಗ ಒಬ್ಬ ಅತ್ಯಾಚಾರಿ ಶಾಲಾ ಆವರಣ ಪ್ರವೇಶಿಸಿದ್ದು ಹೇಗೆ ಎಂದು ಕೋಪೋದ್ರಿಕ್ತ ಹೆತ್ತವರು ಶಾಲಾಡಳಿತೆಯನ್ನು ಪ್ರಶ್ನಿಸಿದರು. ನ್ಡಿಎಂಸಿ ನೇಮಿಸಿಕೊಂಡಿದ್ದ ಕಾಯಂ ಇಲೆಕ್ಟ್ರೀಶಿಯನ್, 37ರ ಹರೆಯದ ರಾಮ್ ಆಸರೆ ಎಂಬಾತ ಆರು ವರ್ಷ ಪ್ರಾಯದ ಎರಡನೇ ತರಗತಿಯ ಬಾಲಕಿಯನ್ನು ಪಂಪ್ ಹೌಸ್ ಗೆ ಒಯ್ದು ಅಲ್ಲಿ ಅತ್ಯಾಚಾರ ಮಾಡಿದ್ದ.
ಮನೆಗೆ ಅಳುತ್ತಾ ಬಂದ ಮಗಳನ್ನು ತಾಯಿ ಪ್ರಶ್ನಿಸಿದಾಗ ತನ್ನ ಮೇಲಾದ ಅತ್ಯಾಚಾರವನ್ನು ಆಕೆ ತಾಯಿಗೆ ತಿಳಿಸಿದಳು. ಮಗಳ ಗುಪ್ತಾಂಗದಿಂದ ರಕ್ತ ಸುರಿಯುತ್ತಿದ್ದುದನ್ನು ಕಂಡ ತಾಯಿ ಹೌಹಾರಿದ್ದಳು.
ಬಾಲಕಿಯ ತಾಯಿ ಕೊಟ್ಟಿರುವ ದೂರಿನ ಪ್ರಕಾರ ಪೊಲೀಸರು ಐಪಿಸಿ ಮತ್ತು ಪೋಕ್ಸೋ ಕಾಯಿದೆಯಡಿ ಕೇಸು ದಾಖಲಿಸಿಕೊಂಡು ಅತ್ಯಾಚಾರಿ ರಾಮ್ ಆಸರೆಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. `ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂಬ ಕಾನೂನು ಆದಷ್ಟು ಬೇಗನೆ ಜಾರಿಗೆ ಬರಬೇಕೆಂಬ ಕೂಗಿಗೆ ಈ ಘಟನೆ ಇನ್ನಷ್ಟು ಧ್ವನಿ ತುಂಬಿದೆ.