ಎರಡನೇ ಟೆಸ್ಟ್: ಭಾರತಕ್ಕೆ ಮಯಾಂಕ್, ಕೊಹ್ಲಿ ಅರ್ಧ ಶತಕಗಳ ಆಸರೆ

ಜಮೈಕಾ, ಆ 31      ಜೇಸನ್ ಹೋಲ್ಡರ್ (39 ಕ್ಕೆ 3 ) ಅವರ ಶಿಸ್ತುಬದ್ಧ ದಾಳಿಯ ನಡುವೆಯೂ ಮಯಾಂಕ್  ಅರ್ಗವಾಲ್ (55 ರನ್, 127 ಎಸೆತಗಳು) ಹಾಗೂ ನಾಯಕ ವಿರಾಟ್ ಕೊಹ್ಲಿ (76 ರನ್, 163 ಎಸೆತಗಳು) ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಮೊದಲ ದಿನದ ಗೌರವ ಸಂಪಾದಿಸಿದೆ.  

ಇಲ್ಲಿನ ಕಿಂಗ್ಸ್ಸ್ಟನ್ನ ಸಬೀನಾ ಪಾಕರ್್ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪ್ರಥಮ ಇನಿಂಗ್ಸ್ನಲ್ಲಿ ಮೊದಲ ದಿನದ ಮುಕ್ತಾಯಕ್ಕೆ 90 ಓವರ್ಗಳಿಗೆ ಐದು ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ.  

ಆರಂಭಿಕರಾಗಿ ಕಣಕ್ಕೆ ಇಳಿದ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅರ್ಗವಾಲ್ ಜೋಡಿಯು ಹೆಚ್ಚು ಹೊತ್ತು ಕ್ರಿಸ್ನಲ್ಲಿ ಉಳಿಯಲಿಲ್ಲ. 26 ಎಸೆತಗಳಲ್ಲಿ 13 ರನ್ ಗಳಿಸಿ ಆಡುತ್ತಿದ್ದ ರಾಹುಲ್ ಅವರನ್ನು ಜೇಸನ್ ಹೋಲ್ಡರ್ ಔಟ್ ಮಾಡಿದರು.  ನಂತರ ಕ್ರೀಸ್ಗೆ ಬಂದ ಚೇತೇಶ್ವರ ಪೂಜಾರ (6) ಅವರು ರಕೀಮ್ ಕಾರ್ನವಾಲ್ ಚೊಚ್ಚಲ ವಿಕೆಟ್ಗೆ ಬಲಿಯಾದರು. ಆ ಮೂಲಕ ಮತ್ತೊಮ್ಮೆ ನಿರಾಸೆ ಮೂಡಿಸಿದರು. 

ಮಯಾಂಕ್-ಕೊಹ್ಲಿ ಜುಗಲ್ಬಂದಿ:  

ತಂಡದ ಮೊತ್ತ 46 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಜತೆಯಾದ ಮಯಾಂಕ್  ಅರ್ಗವಾಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೋಡಿಯು ಕೆರಿಬಿಯನ್ ಬೌಲಿಂಗ್ ದಾಳಿಯನ್ನು ಸಮಯೋಜಿತವಾಗಿ ಎದುರಿಸಿತು. ಈ ಜೋಡಿ ಮುರಿಯದ ಮೂರನೇ ವಿಕೆಟ್ಗೆ 69 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿತು. 

ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಕನ್ನಡಿಗೆ ಮಯಾಂಕ್  ಅರ್ಗವಾಲ್ ಅವರು ಆರಂಭದಿಂದಲೂ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. 127 ಎಸೆತಗಳನ್ನು ಎದುರಿಸಿದ ಅವರು ಏಳು ಬೌಂಡರಿಯೊಂದಿಗೆ 55 ರನ್ ಗಳಿಸಿ ತಂಡ ಅರ್ಧ ಶತಕದ ಕಾಣಿಕೆ ನೀಡಿದರು. 

ಕಳೆದ ಪಂದ್ಯದಲ್ಲಿ ಮಿಂಚಿದ್ದ ಉಪ ನಾಯಕ ಅಜಿಂಕ್ಯಾ ರಹಾನೆ 55 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ 24 ರನ್ ಗಳಿಸಿ ಕೇಮರ್ ರೋಚ್ಗೆ ವಿಕೆಟ್ ಒಪ್ಪಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ ತಮ್ಮ ಅಮೋಘ ಬ್ಯಾಟಿಂಗ್ನಿಂದ ನೆರೆದಿದ್ದ ಎಲ್ಲರ ಪ್ರೀತಿಗೆ ಭಾಜನರಾದರು. ಸೊಗಸಾಗಿ ಬ್ಯಾಟಿಂಗ್ ಮಾಡಿದ ಕೊಹ್ಲಿ 163 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ 76 ರನ್ ಗಳಿಸಿದರು. ತಂಡದ ಮೊತ್ತ 200ರ ಗಡಿ ದಾಟಿಸಿ ದೊಡ್ಡ ಇನಿಂಗ್ಸ್ ಕಟ್ಟುವತ್ತ ಮುನ್ನುಗ್ಗುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಅವರನ್ನು ಜೇಸನ್ ಹೋಲ್ಡರ್ ನಿಯಂತ್ರಿಸಿದರು.  

ಕೊಹ್ಲಿ ಔಟಾಗುತ್ತಿದ್ದಂತೆ ಜತೆಯಾದ ಹನುಮ ವಿಹಾರಿ ಹಾಗೂ ರಿಷಭ್ ಪಂತ್ ವೆಸ್ಟ್ ಇಂಡೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. 80 ಎಸೆತಗಳಲ್ಲಿ ಎಂಟು ಬೌಂಡರಿಯೊಂದಿಗೆ ಹನುಮ ವಿಹಾರಿ ಅಜೇಯ 42 ರನ್ ಹಾಗೂ 64 ಎಸೆತಗಳಲ್ಲಿ  ರಿಷಭ್ ಪಂತ್ ಅಜೇಯ 27 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.  

ವೆಸ್ಟ್ ಇಂಡೀಸ್ ಪರ ಅತ್ಯುತ್ತಮ ದಾಳಿ ನಡೆಸಿದ ನಾಯಕ ಜೇಸನ್ ಹೋಲ್ಡರ್ 39 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತರು. ಇವರ ಜತೆ ಕೇಮರ್ ರೋಚ್ ಹಾಗೂ ರಕೀಮ್ ಕಾರ್ನವಾಲ್ ತಲಾ ಒಂದು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್ 

ಭಾರತ 

ಪ್ರಥಮ ಇನಿಂಗ್ಸ್: 90 ಓವರ್ಗಳಲ್ಲಿ 264/5 (ವಿರಾಟ್ ಕೊಹ್ಲಿ 76, ಮಯಾಂಕ್  ಅರ್ಗವಾಲ್ 55, ಹನುಮ ವಿಹಾರಿ ಔಟಾಗದೆ 42, ರಿಷಭ್ ಪಂತ್ ಔಟಾಗದೆ 27; ಜೇಸನ್ ಹೋಲ್ಡರ್ 39 ಕ್ಕೆ 3, ರಕೀಮ್ ಕಾರ್ನವಾಲ್ 69 ಕ್ಕೆ 1, ಕೇಮರ್ ರೋಚ್ 47 ಕ್ಕೆ 1)