ಋತುಮಾನ ಶಾಲೆಗಳ ಅಗತ್ಯ: ಮರಿಸ್ವಾಮಿ

ಗದಗ 15: ಮಕ್ಕಳ ಶಿಕ್ಷಣ ಮತ್ತು ಪಾಲನೆ ದೃಷ್ಟಿಯಿಂದ ಗದಗ ಜಿಲ್ಲೆಯ ಉದ್ಯೋಗಕ್ಕಾಗಿ ವಲಸೆ ಹೋಗುವ ಕುಟುಂಬಗಳಿರುವ ಪ್ರದೇಶದಲ್ಲಿ ಋತುಮಾನ ಶಾಲೆಗಳನ್ನು ತೆರೆಯುವ ಅಗತ್ಯವಿದೆ ಎಂದು ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ. ಮರಿಸ್ವಾಮಿ ನುಡಿದರು.

ಗದಗ  ಪರಿವೀಕ್ಷಣಾ ಮಂದಿರದಲ್ಲಿಂದು (ದಿ.15) ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಗದಗ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗಿರುವ ಮಕ್ಕಳ ಸಂಖ್ಯೆ ಶೂನ್ಯಕ್ಕಿಳಿಸಲು ಹಾಗೂ ಮಕ್ಕಳ ರಕ್ಷಣೆ ಹಾಗೂ ವಿವಿಧ ರೀತಿಯಲ್ಲಿ ಅವರ ಹಕ್ಕುಗಳ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ತಾಲೂಕಿನ ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿಗಳು, ತಹಶೀಲ್ದಾರರು, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಪಾತ್ರ ಬಹಳ ಮಹತ್ವದ್ದಾಗಿದ್ದು ಅವರನ್ನು ಸೇರಿದಂತೆ 27 ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಇಂದು ಮಾಹಿತಿ ನೀಡಿ ಜಾಗೃತಿಯಂಟು ಮಾಡಲು ಇಂದು ಕಾರ್ಯಗಾರವನ್ನು ಗದುಗಿನಲ್ಲಿ ಜರುಗಿಸಲಾಗಿದೆ ಎಂದು ಆಯೋಗದ ಅಧ್ಯಕ್ಷರು ತಿಳಿಸಿದರು. 

ರಾಜ್ಯದಲ್ಲಿರುವ ಮಕ್ಕಳ ಪಾಲನಾ ಕೇಂದ್ರಗಳು ಬಾಲ ನ್ಯಾಯ ಕಾಯ್ದೆಯಡಿ ನೊಂದಣಿ ಆಗಿರಬೇಕಾದ್ದು ಕಡ್ಡಾಯವಾಗಿದೆ. ಶಿಕ್ಷಣದ ಹಕ್ಕು ಕಾಯ್ದೆ, ಬಾಲ ನ್ಯಾಯ ಕಾಯ್ದೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಜಾರಿಯ ಮೇಲ್ವಿಚಾರಣೆ ಸಂಸ್ಥೆಯಾಗಿ ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕಾರ್ಯ ನಿರ್ವಹಿಸುತ್ತದೆ. ಖಾಸಗೀ ಶಿಕ್ಷಣ ಸಂಸ್ಥೆಗಳಿಗೂ ಸಾಮಾಜಿಕ ಹೊಣೆಗಾರಿಕೆ ಇರುವದರಿಂದ ಶಿಕ್ಷಣದ ಹಕ್ಕಿನಡಿ ಇತರ ವರ್ಗದ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಅಂತಹ ವಿದ್ಯಾಥರ್ಿಗಳ ಪ್ರವೇಶಾತಿ ನಂತರ ಈ ಸಂಸ್ಥೆಗಳ ವಿವಿಧ ನಡೆಗಳ ಕುರಿತು ಬಹಳಷ್ಟು ದೂರುಗಳು ಆಯೋಗಕ್ಕೆ ಬರುತ್ತಿವೆ. ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವ್ಯಾಪ್ತಿಯಲ್ಲಿನ ಕೆಲವು ವಿಷಯಗಳ ವಾಸ್ತವ ಆಂಶಗಳ ಕುರಿತ ವರದಿಯನ್ನು ಶೀಘ್ರದಲ್ಲಿ ರಾಜ್ಯ ಸಕರ್ಾರಕ್ಕೆ ಸಲ್ಲಿಸುವುದಾಗಿ ಆಯೋಗದ ಅಧ್ಯಕ್ಷ ವೈ. ಮರಿಸ್ವಾಮಿ ನುಡಿದರು.

     ಕನರ್ಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ  ಹಾಗೂ ಗದಗ ಜಿಲ್ಲಾ ಉಸ್ತುವಾರಿ  ಸದಸ್ಯ ಕೆ.ಬಿ. ರೂಪನಾಯ್ಕ ನಾಯ್ಕ ಮಾತನಾಡಿ ಕನರ್ಾಟಕ ರಾಜ್ಯ ಬಾಲ್ಯ ವಿವಾಹ ಕುರಿತಂತೆ ದೇಶಕ್ಕೆ 6ನೇ ಸ್ಥಾನದಲ್ಲಿದೆ. ರಾಜ್ಯದ ಬಹುತೇಕ ಶಾಲೆಗಳಲ್ಲಿನ ಹಾಜರಾತಿ ದಾಖಲೆಗೂ ವಾಸ್ತವದಲ್ಲಿ ಹಾಜರಿರುವ ಮಕ್ಕಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದು ಶಾಲೆಗೆ ಸತತ 7 ದಿನ ಗೈರಾದ ಮಗುವನ್ನು ಶಾಲೆಯಿಂದ ಹೊರಗುಳಿದ ಮಗುವಾಗಿ ಗುರುತಿಸುವ ಹಾಗೂ ಮಗುವಿನ ಹಾಜರಾತಿಗೆ ನಿಗಾ ವಹಿಸುವ ಶಿಕ್ಷಣ ಇಲಾಖೆ ಕ್ರಮಕ್ಕೆ ಹಿನ್ನಡೆಯಾಗಿದೆ. ಸಕರ್ಾರಿ ಶಾಲೆಗಳನ್ನು ಖಾಸಗೀ ಶಾಲಾ ಸೌಲಭ್ಯಗಳಂತೆ ಪರಿವರ್ತನೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ಅವಕಾಶವಿದ್ದರು ಅದರ ಬಳಕೆ ಸಮನ್ವಯತೆ ಸರಿಯಾಗಿ ಆಗುತ್ತಿಲ್ಲ, ಗ್ರಾ.ಪಂ. ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಕಾವಲು ಸಮಿತಿಗಳ ರಚನೆಯಾಗಿಲ್ಲ. ರಚನೆಯಾಗಿದ್ದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಜಿಲ್ಲಾ ಮತ್ತು ತಾಲೂಕಾ ಮಟ್ಟದ ಮಕ್ಕಳ ಸಲಹಾ ಸಮಿತಿಗಳು ಈ ಕುರಿತು ಗಮನ ಹರಿಸಬೇಕಿದೆ ಎಂದರು.

     ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆಯ ಉಪನಿದರ್ೇಶಕ ರಾಮಕೃಷ್ಣ ಪಡಗಣ್ಣವರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರತಿ ಶೆಟ್ಟರ ಪತ್ರಿಕಾಗೋಷ್ಟಿಯಲ್ಲಿದ್ದರು.