ವಿದ್ಯಾರ್ಥಿ ಗಳಲ್ಲಿ ಸೇವಾ ಮನೋಭಾವನೆ ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ

ಲೋಕದರ್ಶನ ವರದಿ

ರಾಮದುರ್ಗ, 26: ವಿದ್ಯಾರ್ಥಿ ಗಳಲ್ಲಿ ದೇಶಪ್ರೇಮ, ಶಿಸ್ತು, ಸೇವಾ ಮನೋಭಾವನೆ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ಗಳ ಪಾತ್ರ ಮರೆಯುವಂತಿಲ್ಲ. ಶಿಬಿರದಲ್ಲಿ ಪಾಲ್ಗೊಂಡು ವಿದ್ಯಾಥರ್ಿಗಳ ಅದರ ಧ್ಯೇಯ ಅರಿತುಕೊಳ್ಳಬೇಕೆಂದು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಪಿ.ಡಿ. ಕಾಲವಾಡ ಹೇಳಿದರು.

ತಾಲೂಕಿನ ಚಿಕ್ಕೋಪ್ಪ(ಎಸ್.ಕೆ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾಥರ್ಿಗಳು ಪಾಲ್ಗೊಳ್ಳುವಂತೆ ಪ್ರೇರಪಣೆ ನೀಡಿದಲ್ಲಿ ಅವರ ಸರ್ವತೋಮುಖ ವ್ಯಕ್ತಿತ್ವ ವಿಕಸನ ಸಾಧ್ಯವಿದೆ. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರದ ಮೂಲಕ ವಿದ್ಯಾರ್ಥಿ ಗಳಲ್ಲಿ ಆರೋಗ್ಯಕರ ಜ್ಞಾನಾಭಿವೃದ್ಧಿಗೆ ಸಂಸ್ಥೆಯ ಪದಾಧಿಕಾರಿಗಳು ಶ್ರಮಿಸಬೇಕೆಂದು ಕರೆ ನೀಡಿದರು.

ವ್ಯಕ್ತಿತ್ವ ವಿಕಸನದ ಬಗ್ಗೆ ಶಿಕ್ಷಕ ವೈ.ಐ. ಯಾವಗಲ್, ಯೋಗ ಶಿಕ್ಷಣದ ಬಗ್ಗೆ ಮುದೇನೂರ ದೈಹಿಕ ಶಿಕ್ಷಕ ಆರ್.ಎನ್.ಕೊಳದೂರ, ಗಣಕಯಂತ್ರದ ಬಗ್ಗೆ ಶಿಕ್ಷಕ ಶಿವಾನಂದ ಬೆಳವಣಿಕೆ, ಕ್ರಾಪ್ಟ ಬಗ್ಗೆ ಸುರೇಬಾನ ಆತ್ಮಾನಂದ ಬಾಲಿಕೆಯರ ಪ್ರೌಢ ಶಾಲೆ ಶಿಕ್ಷಕಿ ಎಸ್.ಎಸ್. ಪಾಟೀಲ, ಸ್ಕೌಟ್ಸ್ ಚಟುವಟಿಕೆ ಬಗ್ಗೆ ಶಿಕ್ಷಕ ವೈ.ಎ. ಗೊರವನಕೊಳ್ಳ, ಚಿತ್ರಕಲೆ ಬಗ್ಗೆ ಡಿ.ಎಂ. ಪತ್ತಾರ ತರಬೇತಿ ನೀಡಿದರು.

ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಎಸ್.ಎಸ್. ಕೇರಿ ವಹಿಸಿದ್ದರು. ಅವಣ್ಣೇಪ್ಪ ಕಳಸದ, ಸಂಗಳ ಗ್ರಾ.ಪಂ ಕಾರ್ಯದಶರ್ಿ ಬಿ.ಎಫ್. ಬಡಿಗೇರ, ಈರಪ್ಪ ಯಾವಗಲ್, ಬಿ.ಎಸ್. ಕೊಣ್ಣುರ ಉಪಸ್ಥಿತರಿದ್ದರು. ಎಂ.ಎನ್ ಗವನ್ನವರ ಸ್ವಾಗತಿಸಿದರು. ಯಲ್ಲಾಲಿಂಗ ಯಾವಗಲ್ ನಿರೂಪಿಸಿ, ವಂದಿಸಿದರು.