ಲೋಕದರ್ಶನ ವರದಿ
ಶೇಡಬಾಳ 23: ಜಗತ್ತಿನಲ್ಲಿಯೇ ಶಿಸ್ತು, ತ್ಯಾಗ, ಸೇವೆ ಮಾಡುವದರಲ್ಲಿ ಭಾರತ ಸ್ಕೌಟ ಮತ್ತು ಗೌಡ್ಸ ಸಂಸ್ಥೆಯು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಹಾಯಕ ಜಿಲ್ಲಾ ಆಯುಕ್ತರು ಭಾರತ ಸ್ಕೌಟ್ಸ ಮತ್ತು ಗೌಡ್ಸ ಸಹಾಯಕ ಜಿಲ್ಲಾ ಆಯುಕ್ತರಾದ ಎ.ಎಸ್.ಜೋಡಗೇರಿ ಹೇಳಿದರು.
ಅವರು ಶನಿವಾರ ದಿ. 22 ರಂದು ಕಾಗವಾಡ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾಗವಾಡ, ಭಾರತ ಸ್ಕೌಟ್ಸ ಮತ್ತು ಗೌಡ್ಸ ಕಾಗವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ತಾಲೂಕಾ ಮಟ್ಟದ ಮಕ್ಕಳ ಮೇಳ ಮತ್ತು ಸೈಕಲ್ ಜಾಥಾ ಹಾಗೂ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಮಕ್ಕಳಲ್ಲಿ ಸೇವಾ ಮನೋಭಾವನೆ ವೃದ್ಧಿಸುವಗೋಸ್ಕರ ಲಾಲ ಬೇಡೆನ್ ಹಡೇಲ್ ಇವರು 20 ಮಕ್ಕಳೊಂದಿಗೆ ಪ್ರಾರಂಭಿಸಲಾದ ಈ ಸಂಸ್ಥೆಯು ಇಂದು ಜಗತ್ತಿನಾದ್ಯಂತ 3 ಮಿಲಿಯನ್ ವಿದ್ಯಾರ್ಥಿಗಳನ್ನು ಒಳಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಮಾನಗಳಲ್ಲಿಯೂ ಕೂಡ ಈ ಸಂಸ್ಥೆಯ ವತಿಯಿಂದ ಇನ್ನು ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಗಳು ಜರುಗಲಿ ಎಂದು ಶುಭಹಾರೈಸಿದರು. ಸ್ಕೌಟ ಮತ್ತು ಗೌಡ್ಸ್ನ ಮುಖ್ಯಸ್ಥರಾದ ಆರ್.ಎನ್.ನಿಂಬಾಳಕರ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸಿ.ಎಂ.ಸಾಂಗಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೇ ಸಮಯದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕತರಾದ ಕಾಗವಾಡ ವಲಯದ 22 ಸ್ಕೌಟ ಮತ್ತು ಗೌಡ್ಸ್ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಗ್ರಾಮದಲ್ಲಿ ರ್ಯಾಲಿ ತಾಲೂಕಾ ಮಟ್ಟದ ಮಕ್ಕಳ ಮೇಳ ಮತ್ತು ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ, ಬಿ.ಬಿ. ಅತ್ತಾರ, ಸಿ.ಎಂ. ಸಾಂಗಲಿ, ಆರ್.ಎನ್. ನಿಂಬಾಳಕರ, ಕಾಗವಾಡ ಭಾರತ ಸ್ಕೌಟ್ಸ ಮತ್ತು ಗೌಡ್ಸ ಕಾರ್ಯದರ್ಶಿ ಎಂ.ಕೆ.ಕಾಂಬಳೆ ಸೇರಿದಂತೆ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.