ರಾಣೇಬೆನ್ನೂರು ಕೆವಿ ಸೆಂಟ್ರಲ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ರಾಣೇಬೆನ್ನೂರ 1 : ಮಾ 1ನಗರದ ಕೆ.ವಿ.ಸೆಂಟ್ರಲ್ ಇಂಗ್ಲಿಷ್ ಶಾಲೆಯಲ್ಲಿ ಮಕ್ಕಳೇ ತಯಾರಿಸಿದ ವಿಜ್ಞಾನದ ವಸ್ತು ಪ್ರದರ್ಶನ ಜನಾಕರ್ಷಿಸಿತು. ಇದೇ ಸಂದರ್ಭದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರ ವಿತರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಅಭಿಲಾಷ್ ಕೆ ಬ್ಯಾಡಗಿ ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ ಇಂದಿನ ಮಕ್ಕಳು ಸ್ಪರ್ಧಾತ್ಮಕ ಮತ್ತು ವಿಜ್ಞಾನದ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಇದರಿಂದ ಶಿಕ್ಷಣಕ್ಕೂ ಹಾಗೂ ತಮ್ಮ ಉಜ್ವಲ ಭವಿಷ್ಯಕ್ಕೂ ನಾಂದಿಯಾಗುವುದು ಎಂದರು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಿ. ವಿ. ರಾಮನ್ ಕುರಿತು ಕೆ. ವಿ. ಪಾಲಿಟೆಕ್ನಿಕ್ ಪ್ರಾಚಾರ್ಯ ಚಿದಂಬರ್ ನಾಡಿಗೇರ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯ ಲಾವಣ್ಯ ಬ್ಯಾಡಗಿ ಶ್ರೀಕಾಂತ್ ಪಾಟೀಲ್, ಜೆ. ಎ. ಕೋಳಿ ಸೇರಿದಂತೆ ಶಾಲಾ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.