ಲೋಕದರ್ಶನ ವರದಿ
ಬೆಳಗಾವಿ, 29: ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ. ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 'ವಿಜ್ಞಾನ ವಸ್ತು ಪ್ರದರ್ಶನ'ದ ಉಧ್ಘಾಟನಾ ಕಾರ್ಯಕ್ರಮವನ್ನು ಮಂಗೇಶ ಹೊಂಡಾ ದ್ವಿಚಕ್ರ ಹಾಗೂ ಕಾರಗಳ ವಿತರಕರಾದ ರೋಹಿತ ದೇಶಪಾಂಡೆ ಉಧ್ಘಾಟಿಸಿ, ಪ್ರದರ್ಶನಕ್ಕೆ ಸಂಬಂಧಿಸಿದಂತೆ 'ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳು ಉತ್ತಮ ಶಾಲೆಯ ಸ್ಥಂಬಗಳಿದ್ದಂತೆ ಮತ್ತು ಸಹಪಠ್ಯ ಚಟುವಟಿಕೆಗಳು ವಿದ್ಯಾಥರ್ಿನಿಯರ ಕ್ರೀಯಾಶೀಲ, ಬೌದ್ಧಿಕ ಹಾಗೂ ವೈಜ್ಞಾನಿಕ ಮಟ್ಟವನ್ನು ಅಳೆಯುವ ಸಾಧನವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ವಸಂತರಾವ ಪೊತದಾರ ಪಾಲಿಟೆಕನಿಕ ಕಾಲೇಜಿನ ಪ್ರಾಚಾರ್ಯರಾದ ಡಾ. ಶ್ರೀಕಾಂತ ಅಂಬೇಕರ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಬೆಳಗಾವಿ ಶಿಕ್ಷಣ ಸಂಸ್ಥೆಯ ಉಪಾದ್ಯಕ್ಷರಾದ ಅವಿನಾಶ ಪೊತದಾರ ಉಪಸ್ಥಿತರಿದ್ದರು. ವಿಜ್ಞಾನ ವಸ್ತು ಪ್ರದರ್ಶನದ ನಿಣರ್ಾಯಕರಾಗಿ ರಾಜೇಂದ್ರ ಭಂಡಾರಿ ಹಾಗೂ ಶ್ರೀಮತಿ. ಎ. ಎ. ಪ್ರಯಾಗ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಥರ್ಿನಿಯರು "ವಿಜ್ಞಾನ ವಿಷಯಕ್ಕೆ" ಸಂಬಂಧಿಸಿದಂತೆ ಮಾದರಿಗಳನ್ನು ಪ್ರಸ್ತುತಪಡಿಸಿದರು. 8, 9 ಹಾಗೂ 10ನೇ ತರಗತಿಯ ಕನ್ನಡ ಮತ್ತು ಮರಾಠಿ ಮಾಧ್ಯಮದ ಸುಮಾರು 210 ವಿದ್ಯಾಥರ್ಿನಿಯರು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಗಣಿತಕ್ಕೆ ಸಂಬಂಧಿಸಿದಂತೆ 100 ಕ್ಕಿಂತ ಹೆಚ್ಚು ಮಾದರಿಗಳನ್ನು ತಯಾರಿಸಿ ಪ್ರದಶರ್ಿಸಿದರು. ಮುಖ್ಯೋಪಾದ್ಯಾಯ ಎಮ. ಕೆ. ಮಾದಾರ ಪ್ರಾಸ್ತಾವಿಕ ಮಾತನಾಡಿ 'ವಿಜ್ಞಾನ ವಸ್ತು ಪ್ರದರ್ಶನ'ದ ಮಹತ್ವ ತಿಳಿಸಿದರು. ಕಾರ್ಯಕ್ರಮವನ್ನು ಶ್ರಿದೇವಿ ಇಟಗಿಕರ ನಿರೂಪಿಸಿ, ಸರಸ್ವತಿ ದೇಸಾಯಿ ವಂದಿಸಿದರು.
ಕಾರ್ಯಕ್ರಮಕ್ಕೆ ಇನ್ನಿತರ ಶಿಕ್ಷಕರು ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ವಿಜ್ಞಾನ ಹಾಗೂ ಗಣಿತ ಶಿಕ್ಷಕರಾದ ವಾಯ. ಹೆಚ್. ಕಾಂಬಳೆ, ಪಿ. ಕೆ. ಪಾಟೀಲ, ವ್ಹಿ. ಜಿ. ಕುಲಕಣರ್ಿ ಹಾಗೂ ಶ್ರೀಮತಿ. ಎಸ್. ಎಸ್. ಕುಲಕಣರ್ಿ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಮಾದರಿಗಳನ್ನು ತಯಾರಿಸಲು ಉತ್ತಮ ಮಾರ್ಗದರ್ಶನ ನೀಡಿದರು. ವಿಜ್ಞಾನ ವಸ್ತು ಪ್ರದರ್ಶನವನ್ನು ದಿ: 30-11-2018 ರಂದು ಬೆಳಿಗ್ಗೆ 11:00 ಗಂಟೆಯಂದ 4:00 ಗಂಟೆಯವರೆಗೆ ಎಲ್ಲ ಶಾಲೆಗಳ ವಿದ್ಯಾಥರ್ಿಗಳಿಗೆ, ಶಿಕ್ಷಕರಿಗೆ ಹಾಗೂ ಪಾಲಕರಿಗೆ ವಿಕ್ಷೀಸಲು ಅವಕಾಶ
ನೀಡಲಾಗಿದೆ.