ಮಹಾಲಿಂಗಪುರ 02 : ಶುಕ್ರವಾರ ಬಸವಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ಸ್ರ್ಧೆಗಳೇರ್ಪಟಟು ವಿಧ್ಯಾರ್ಥಿಗಳು ವಿಜ್ಞಾನ ಒಂದು ವಿಶೇಷ ಜ್ಞಾನ ಎಂಬಂತೆ ವಿವಿಧ ವಸ್ತುಗಳನ್ನು ತಯಾರಿಸಿ ಅವುಗಳ ಪ್ರಾತ್ಯಕ್ಷಿಕೆಗಳನ್ನು ಅತಿಥಿಗಳು ಮತ್ತು ಸಹಪಾಠಿಗಳ ಮುಂದೆ ಪ್ರಚುರಪಡಿಸಿ ವೈಜ್ಞಾನಿಕ ಮನೋಭಾವ ಮೆರೆದರು.
ಸರಕಾರದ ಆದೇಶದನ್ವಯ ಪ್ರಾರ್ಥನಾ ಸಮಯದಲ್ಲಿ ವಿಜ್ಞಾನದ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಬೆಂಕಿ ರಹಿತ ಅಡುಗೆ ಮಾಡುವ ಸ್ಪರ್ಧೆ, ವಿಜ್ಞಾನ ರಂಗೋಲಿ ಬಿಡಿಸುವ ಸ್ಪರ್ಧೆ, ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನದ ಭಾಷಣ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.
ಇದರಿಂದ ಪ್ರಾಥಮಿಕ ಮತ್ತು ಪ್ರೌಢಾವಸ್ಥೆಯಲ್ಲಿರುವ ಮಕ್ಕಳು ವೈಜ್ಞಾನಿಕ ಸತ್ಯಗಳ ಅರಿವು ಮೂಡಿಸಿಕ್ಕೊಳ್ಳಲು ಯಶಸ್ವಿಯಾಗಿ, ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನಗಳನ್ನು ಪಡೆದುಕ್ಕೊಂಡರು.ಈ ಸಂದರ್ಭದಲ್ಲಿ ಅಂತರಿಕ್ಷ ಯಾನಕ್ಕೆ ಪಯಣಿಸಿ ಸಾಧನೆ ಮಾಡಿದ ದಿ.ಕಲ್ಪನಾ ಚಾವ್ಲಾ ಹಾವಭಾವ ಮತ್ತು ನಿರರ್ಗಳ ಆಂಗ್ಲ ಭಾಷೆಯನ್ನು ಅವರ ಶೈಲಿಯಲ್ಲಿಯೇ ಮಾತನಾಡುವ ಮೂಲಕ ಶಾಲೆಯ 9 ನೇ ತರಗತಿ ತನುಜಾ ಸುತಾರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಚಪ್ಪಾಳೆ ಗಿಟ್ಟಿಸಿದರು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ವಿದ್ಯಾರ್ಥಿ/ನಿಯರು ತುಂಬಾ ಉತ್ಸಾಹದಿಂದ ಭಾಗವಹಿಸಿದರು. ಕೆಸರಗೊಪ್ಪ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಎಸ್ ಎನ್ ಬ್ಯಾಳಿ? ಬಿಸನಾಳ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸಿ ಕೆ ಮುರಗೋಡ ಹಾಗೂ ಮದಭಾವಿ ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಕೆ ಆರ್ ಮಾಚಕನೂರ ನಿರ್ಣಾಯಕರಾಗಿ ಆಗಮಿಸಿದ್ದರು.ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಶೋಭೆ ತಂದರು.