ಲೋಕದರ್ಶನ ವರದಿ
ಮೂಡಲಗಿ 16: ಮಕ್ಕಳಲ್ಲಿ ಸೃಜನಾತ್ಮಕ ಕಲಿಕೆಗೆ ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಿವೆ. ವಿವಿಧ ಯಂತ್ರಗಳ ರಚನೆ, ಜೀವಿಗಳ ಜೀವ ವಿಕಾಸ ಮತ್ತು ಸಸ್ಯಸಂಪತ್ತು, ಭೌಗೋಳಿಕ ಸಂಪನ್ಮೂಲಗಳ ರಚನೆ, ಉಪಯೋಗ ಮತ್ತು ಅವುಗಳ ಮಹತ್ವವನ್ನು ವಿದ್ಯಾಥರ್ಿಗಳು ಸ್ವ ಅನುಭವದ ಮೂಲಕ ಅನುಭವಿಸಲು ವಿಜ್ಞಾನದಿಂದ ರಚಿತಗೊಂಡ ಸಾಧನಗಳ ರಚನೆಯಲಿ ತೊಡಗಿಕೊಳ್ಳುವುದರಿಂದ ಉತ್ತಮ ಕಲಿಕಾ ಸ್ವ-ಅನುಭವ ಉಂಟಾಗುವುದು ಎಂದು ಮೂಡಲಗಿಯ ಸುರಕ್ಷಾ ಪ್ಯಾರಾ ಮೆಡಿಕಲ್ ಕಾಲೇಜಿನ ಆಡಳಿತಗಾರ ಸೊಮೇಶ ಹಿರೇಮಠ ಹೇಳಿದರು.
ಸ್ಥಳೀಯ ಆರ್ಡಿಎಸ್ ಸಿಬಿಎಸ್ಇ ಶಾಲೆಯಲ್ಲಿ ಶಾಲಾ ಮಕ್ಕಳಿಂದ ಆಯೋಜಿಸಿದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಲಿಕೆ ಮಕ್ಕಳಲ್ಲಿ ನಡೆಯ ಬೇಕಾದರೆ ಅವರಲ್ಲಿ ಅಡಗಿರುವ ಸೃಜನಶೀಲ ಸುಪ್ತ ಪ್ರತಿಭೆಗಳನ್ನು ಇಂತಹ ಚಟುವಟಿಕೆ ನೀಡುವುದರಿಂದ ಮೂಲಕ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಬಹುದು ಎಂದರು.
ಸಿಬಿಎಸ್ಇ ಶಾಲೆಯ ಪ್ರಾಚಾರ್ಯ ನಾಗರಾಜ ಬಾವಿ ಮಾತನಾಡಿ, ಮಕ್ಕಳಲ್ಲಿ ಕ್ರಿಯಾತ್ಮಕ ಚಟುವಟಿಕೆಯ ಮೂಲಕ ವಿವಿಧ ರಂಗದಲ್ಲಿ ಹೊಂದಿರುವ ವಿಶೇಷ ಸಾಮಥ್ರ್ಯಗಳನ್ನು ವಿಜ್ಞಾನ ವಸ್ತು ಪ್ರದರ್ಶನದ ಚಟುವಟಿಕೆಯಿಂದ ಮಕ್ಕಳ ಪ್ರತಿಭಾವಂತಿಕೆ ಮತ್ತು ಸೃಜನಾತ್ಮಕತೆ ಹಾಗೂ ಏಕಾಗ್ರತೆ ಸಾಮಥ್ರ್ಯಗಳನ್ನು ವಿಕಾಸ ಮಾಡಲು ಸಾಧ್ಯವಿದೆ ಎಂದರು.
ಆರ್ಡಿಎಸ್ ಸಂಸ್ಥೆಯ ನಿದರ್ೇಶಕರಾದ ಪೂಜಾ ಪಾಶರ್ಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ವಿದ್ಯಾಥರ್ಿಗಳಲ್ಲಿ ಕಲಿಯುವ ಶೃದ್ಧೆ, ಭಕ್ತಿ, ನಿಷ್ಟೆ, ಪ್ರಾಮಾಣಿಕತೆ, ಶಿಸ್ತು, ಸಮಯಪಾಲನೆ ಮತ್ತು ಗುರುಭಕ್ತಿಯಿಂದ ಕಲಿತ ಜ್ಞಾನ ಮಕ್ಕಳ ಬದುಕಿಗೆ ಸ್ಪೂತರ್ಿಯಾಗುತ್ತದೆ ಇಂತಹ ಚಟುವಟಿಕೆಯಲ್ಲಿ ಮಕ್ಕಳ ಭಾಗವಹಿಸುವದರಿಂದ ಮನಸ್ಥೈರ್ಯ ಹೆಚ್ಚಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪಾಲಕರಾದ ಸುಷ್ಮಾ ಹಿರೇಮಠ, ಜಯಶ್ರೀ ಸತ್ತಿಗೇರಿ, ಶಿವಾನಂದ ಸತ್ತಿಗೇರಿ, ಅಶೋಕ ಬಸಳಿಗುಂದಿ, ಸಂಗಮೇಶ ಕುಂಬಾರ, ಸುಭಾಸ ಮಾಲೋಜಿ, ಶಂಕರ ಶಿವಶಿಂಪರ ಮತ್ತತರರು ಹಾಜರಿದ್ದರು.