ಡ್ರೀಮ್ ಸ್ಕೂಲ್ ಫೌಂಡೇಶನ್ ವತಿಯಿಂದ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮ
ರಾಣೇಬೆನ್ನೂರ 03 : ಮಾ 3ನಗರದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಭವನದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಡ್ರೀಮ್ ಸ್ಕೂಲ್ ಫೌಂಡೇಶನ್ ವತಿಯಿಂದ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮ ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮ್ ಸುಂದರ್ ಅಡಿಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ದಿನದ ಮಹತ್ವ ಹಾಗೂ ವಿಜ್ಞಾನ ಕಲಿಕೆಯ ಮಹತ್ವ ವನ್ನು ವಿದ್ಯಾರ್ಥಿಗಳಿಗಳು ತಮ್ಮ ಕಲಿಕಾ ಹಂತದಿಂದಲೇ ನಿಖರವಾಗಿ ತಿಳಿದುಕೊಂಡು ಪ್ರಯೋಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮುಂದಿನ ಶಿಕ್ಷಣಕ್ಕೆ ನಿಮಗೆ ಪ್ರಯೋಗ ಮತ್ತು ಕಲಿಕೆಗೆ ಸಾಕಷ್ಟು ಪ್ರಯೋಜನ ಆಗುತ್ತದೆ ಎಂದು ಮಾಹಿತಿ ನೀಡಿದರು. ಡ್ರಿಮ್ ಸ್ಕೊಲ್ ಪೌಂಡೇಶನ್ನ ರಾಸಾಯನಿಕ ವಿಷಯ ತಜ್ಞರಾದ ರವೀಂದ್ರ ರಮೇಶ್ ಅವರು ಮಾತನಾಡಿ, ಸಿ ವಿ ರಾಮನ್ ಅವರಿಗಿದ್ದ ಆಸಕ್ತಿ ಹಾಗೂ ವೈಜ್ಞಾನಿಕ ಮನೋಭಾವವೆ ಅವರ ಸಂಶೋಧನೆಗೆ ಸಹಕರಿಯಾಯಿತು ಹಾಗೂ ಸಮುದ್ರದ ನೀರಿನ ಬಣ್ಣ ಹಾಗೂ ಆಕಾಶದ ಬಣ್ಣ ಒಂದೇ ಆಗಿರಲು ಹೇಗೆ ಎಂಬುದನ್ನು ಪತ್ತೆ ಹಚ್ಚಿ ನೊಬೆಲ್ ಪುರಸ್ಕಾರ ಪಡೆದುಕೊಂಡು ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಜರ್ಮನ್ ದೇಶದ ಪ್ರತಿನಿಧಿ ಸೈಮನ್ ಮಾತನಾಡಿದರು ಎ ಇ ಓ ಗುಂಜಾಳ್ ರಾಷ್ಟೀಯ ವಿಜ್ಞಾನ ದಿನದ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಮಂಜುನಾಥ್ ಎಲ್ ಹಾಗೂ ವಸ್ತುಪ್ರದರ್ಶನದ ತೀಪುಗಾರರಾಗಿ ಆಗಮಿಸಿದ ನಿವೃತ್ತ ವಿಜ್ಞಾನ ಶಿಕ್ಷಕ ಆರ್ ಬಿ ಪಾಟೀಲ್ ಹಾಗೂ ಮಾರುತಿ ಪ್ರೌಢ ಶಾಲೆ ನದಿರಹರಳಹಳ್ಳಿ ಶಾಲೆಯ ವಿಜ್ಞಾನ ಶಿಕ್ಷಕರಾದ ಮೃತ್ಯುಂಜಯ ಪಿ ಅಂಗಡಿ, ಡ್ರೀಮ್ ಸ್ಕೂಲ್ ಫೌಂಡೇಶನ್ ಸಂಸ್ಥೆಯ ಆಡಳಿತಾ ಧಿಕಾರಿಗಳದ ಸಗಾಯ್ ರಾಜ್, ಡ್ರೀಮ್ ಸ್ಕೂಲ್ ಫೌಂಡೇಶನ್ ಗ್ರಾಮೀಣ ಘಟಕದ ಪದಾಧಿಕಾರಿಗಳಾದ ಅರುಣ್ ಕುಮಾರ್ ಬಾರ್ಕಿ ಹಾಗೂ ಮಂಗಳಾ ಎಮ್, ಪ್ರಶಾಂತ್ ಸರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..ಊ3-ಖಓಖ04-ಓಇಘಖ. ಂಓಆ. ಕಊಓಖಿಓ.