ಗ್ರಾಮ ಸಭೆಯಲ್ಲಿ ಸಮಸ್ಯೆ ಹೇಳಿಕೊಂಡ ಶಾಲಾ ಮಕ್ಕಳು

ಬೆಳಗಾವಿ:  20 : ಮಕ್ಕಳು ದೇಶದ ಆಸ್ತಿ. ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಕುಂದುಕೊರತೆ ಅರಿತು ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ವಿಶೇಷ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕದ ಸಂರಕ್ಷಣಾಧಿಕಾರಿ ಎಫ್.ಬಿ. ನದಾಫ್ ಅವರು ಹೇಳಿದರು.

ಗ್ರಾಮ ಪಂಚಾಯಿತಿ ಕಲಕಾಂಬ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಚೈಲ್ಡ್ಲೈನ್ 1098 ಹಾಗೂ ವಿಜಯ ಕನರ್ಾಟಕ ಸಹಯೋಗದಲ್ಲಿ ಬುಧವಾರ ಕಲಕಾಂಬ ಗ್ರಾಮದ ಸರಕಾರಿ ಮರಾಠಿ ಶಾಲೆಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ಜರುಗಿತು. ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಮಕ್ಕಳ ಸಹಾಯವಾಣಿ ಸಂಯೋಜಕ ಮಲ್ಲಪ್ಪಾ ಕುಂದರಗಿ ಮಾತನಾಡಿ, ಚೈಲ್ಡ್ಲೈನ್ ಸೇ ದೋಸ್ತಿ ನಿಮಿತ್ತ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ. ಮಕ್ಕಳು ನಿರ್ಭಯವಾಗಿ ತಮ್ಮ ಅನಾನುಕೂಲತೆಯನ್ನು ಹಂಚಿಕೊಳ್ಳಬೇಕು. ಇದಕ್ಕಾಗಿ ಗ್ರಾಮ ಸಭೆ ಆಯೋಜಿಸಲಾಗಿದೆ. ಇದರ ಲಾಭ ಪಡೆಯಬೇಕು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ಮೇತ್ರಿ, ಸದಸ್ಯರಾದ ರಾಜು ಪಾಟೀಲ, ಲಕ್ಷ್ಮಣ ಪೂಜಾರಿ, ಉಪಾಧ್ಯಕ್ಷೆ ಅಲ್ಕಾ ಲೋಹಾರ, ಅಂಗನವಾಡಿ ಮೇಲ್ವಿಚಾರಕಿ ಲೀಲಾವತಿ ಕುರಿ, ಸಿಆರ್ಪಿ ಆರ್.ಐ. ಮೇಟ್ಯಾಳಮಠ, ಮಾರಿಹಾಳ ಠಾಣೆಯ ಎಎಸ್ಐ ಶಂಕರ ಗೌರಿ, ಪಿಡಿಓ ನಾಗಟಾಣ, ಕನ್ನಡ, ಮರಾಠಿ ಶಾಲೆಯ ಶಿಕ್ಷಕರು, ಮಕ್ಕಳು ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಾಲೆಯಲ್ಲಿ ಗ್ರಂಥಾಲಯ ಆರಂಭ, ಕೊಠಡಿ ಮೇಲ್ಚಾವಣೆ ದುರಸ್ತಿ, ಕಂಪ್ಯೂಟರ್ ವ್ಯವಸ್ಥೆ, ವಿಜ್ಞಾನ ಸಲಕರಣೆಗಳು, ಶೌಚಾಲಯ ಸ್ವಚ್ಚತೆ ಇಲ್ಲದಿರುವ, ನೀರಿನ ಸೌಕರ್ಯ ಇಲ್ಲದಿರುವುದು, ಶಾಲಾ ಕಿಟಕಿ ಬಳಿ ಹಾದು ಹೋಗಿರುವ ವಿದ್ಯುತ್ ತಂತಿ ತೆರವುಗೊಳಿಸುವ, ಶಾಲಾ ಗೇಟ್ ಬಳಿ ಪುಂಡಪೋಕರಿಗಳಿಂದ ಆಗುವ ತೊಂದರೆಯನ್ನು ಗ್ರಾಮ ಸಭೆಯಲ್ಲಿ ವಿದ್ಯಾಥರ್ಿಗಳು ಹೇಳಿಕೊಂಡರು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಓ ಅವರು ಮಕ್ಕಳ ಸಮಸ್ಯೆ ನಿವಾರಿಸುವ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾಥರ್ಿಗಳು ಕಾರ್ಯಕ್ರಮ ಉದ್ಘಾಟಿಸುವ ಮೂಲಕ ಗ್ರಾಮ ಸಭೆಗೆ ಚಾಲನೆ ನೀಡಿದರು.

ಅಂಗನವಾಡಿ ಮೇಲ್ವಿಚಾರಕಿ ಲೀಲಾವತಿ ಕುರಿ ಸ್ವಾಗತಿಸಿದರು. ವಿ.ಎನ್. ಜೋಶಿ ವಂದಿಸಿದರು. ಮರಾಠಿ ಶಾಲೆ ಮಕ್ಕಳು ಪ್ರಾಥರ್ಿಸಿದರು. ಶಿಕ್ಷಕಿ ಜೆ ಎಸ್ ರಾಜಮಾನೆ ನಿರೂಪಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಎ ಬಿ ಇಂಡಿ ವಿ ಎಸ್ ನಂದೇನ್ನವರೆ,ವಿ ಎನ್ ಜéೋಷಿ ಹಾಗು ಮಕ್ಕಳ ಸಹಾಯವಾಣಿ ಸದಸ್ಯರಾದ ರಾಜು ಬೋಜಪ್ಪಗೋಳ, ಶಿವಲೀಲಾ ಹಿರೇಮಠ, ಬಸವರಾಜ ನಿವರ್ಾಣಿ, ನಿಂಗಪ್ಪ ಮರಕಟ್ಟಿ, ರಮೇಶ ಬೂಮ್ಮನ್ನವರ 200 ಕ್ಕೂ ಹೆಚ್ಚು ಮಕ್ಕಳು ಉಪಸ್ಥಿತರಿದ್ದರು.