ಲೋಕದರ್ಶನ ವರದಿ
ಬೈಲಹೊಂಗಲ, 26: ರಾಜ್ಯದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೊಂದಿ ಕಲಿಯುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಸರಕಾರದಿಂದ ನೀಡಲಾಗುವ ಉಚಿತ ಪಠ್ಯ ಪುಸ್ತಕ, ಮಧ್ಯಾಹ್ನದ ಬಿಸಿಊಟ, ಕ್ಷೀರ ಭಾಗ್ಯ, ಶೂ ಸಾಕ್ಸ್, ಸಮವಸ್ತ್ರ, ವಿದ್ಯಾಥರ್ಿ ವೇತನ ಸೇರಿದಂತೆ ಅನೇಕ ಸೌಲತ್ತುಗಳ ಬಗ್ಗೆ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ಪಾಲಕರಿಗೆ ಕರ ಪತ್ರ ಹಂಚಿ ತಿಳಿಸಿ ಹೇಳಿ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಾಲಾತಿ ಹೆಚ್ಚಾಗುವಂತೆ ಶ್ರಮಿಸಬೇಕು ಎಂದು ಸವದತ್ತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರು ಹೇಳಿದರು.
ಅವರು ತಾಲೂಕಿನ ಕೆಂಚರಾಮನಹಾಳ ಹಾಗೂ ಯಡಹಳ್ಳಿ ಗ್ರಾಮಗಳಲ್ಲಿ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ, ಉದರ್ು ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ನಡೆದ ವಿಶೇಷ ದಾಖಾತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ,ಗುಣ ಮಟ್ಟದ ಶಿಕ್ಷಣ ಒದಗಿಸುವಲ್ಲಿ ಶಿಕ್ಷಕರ ಸೇವಾ ಮನೋಭಾವ ಅಗತ್ಯವಾಗಿದೆ ಎಂದರು.
ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ವೈ.ಎಮ್.ಶಿಂಧೆ, ಬಿಆರ್ಪಿ ಬಿ.ಐ.ಚಿನಗುಡಿ, ಸಿಆರ್ಪಿ ವಿ.ಜಿ.ಚಂದರಗಿ, ಮುಖ್ಯ ಶಿಕ್ಷಕ ಎಮ್.ಜಿ.ಕಮ್ಮಾರ, ಡಿ.ಎಮ್.ದಾಮನೇಮಠ, ಎಸ್.ಐ.ಕಮತಗಿ ಹಾಗೂ ಮೂರು ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು. ಶಾಲಾ ಮಕ್ಕಳು ಜಾಗೃತಿ ಮೂಡಿಸುವ ಘೋಷಣಾ ಫಲಕಗಳನ್ನು ಪ್ರದಶರ್ಿಸುತ್ತ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂದು ಘೋಷಣೆಗಳನ್ನು ಕೂಗುತ್ತ ಆಂದೋಲನದಲ್ಲಿ ಸಾಗಿ ಗಮನ ಸೆಳೆದರು.