ವಿದ್ಯಾರ್ಥಿಗಳಿಗೆ ಉಚಿತ ವಾಗಿ ಸ್ಕೂಲ್ ಬ್ಯಾಗ್ ವಿತರಣೆ

ಲೋಕದರ್ಶನವರದಿ

ಬ್ಯಾಡಗಿ: ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳ ಭವಿಷ್ಯಕ್ಕೆ   ಪೂರಕವಾಗಿರುವ ಸಕರ್ಾರಿ ಶಾಲೆಗಳಿಗೆ ಸಾರ್ವಜನಿಕರ ಸಹಭಾಗಿತ್ವವಿಲ್ಲದೇ ಉಳಿಗಾಲವಿಲ್ಲ, ನಗರ ಪ್ರದೇಶದಲ್ಲಿನ ಸಕರ್ಾರಿ ಶಾಲೆಗಳು ಈಗಾಗಲೇ ಮುಚ್ಚುವ ಹಂತಕ್ಕೆ ತಲುಪಿವೆ, ಒಂದು ವೇಳೆ ಇದೇ ಸ್ಥಿತಿ ಮುಂದುವರಿದಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ಮಕ್ಕಳಿಲ್ಲದೇ ಶಾಲೆಗಳು ಭಣಗುಡುವ ಸ್ಥಿತಿ ಎದುರಾಗಬಹುದು ಎಂದು ಎಕ್ಸೀಡ್ ಕ್ರಾಪ್ ಸೈನ್ಸ್ ಕಂಪನಿ ನಿದರ್ೇಶಕ ಚಂದ್ರಶೇಖರ ಬಾಗೇವಾಡಿ ಆತಂಕ ವ್ಯಕ್ತಪಡಿಸಿದರು.

 ತಾಲೂಕಿನ ಕುಮ್ಮೂರ ಗ್ರಾಮದ ಸಕರ್ಾರಿ ಪ್ರೌಢಶಾಲೆ ಹಾಗೂ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾಥರ್ಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ವಿತರಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳೊಂದಿಗೆ ಸಕರ್ಾರಿ ಶಾಲೆಗಳು ಪೈಪೋಟಿ ಅನಿವಾರ್ಯವಾಗಿದೆ.

     ಶಿಕ್ಷಣಕ್ಕಿಂತ ಅಲ್ಲಿ ಸಿಗುವಂತಹ ಸೌಲಭ್ಯಗಳೇ ಮಕ್ಕಳನ್ನು ಮತ್ತು ಪಾಲಕರನ್ನು ಆಕಷರ್ಿಸುವಂತೆ ಮಾಡಿವೆ, ಹೀಗಿರುವಾಗಿ ಸಕರ್ಾರ ಉಚಿತ ಸೌಲಭ್ಯಗಳು ಸಮರ್ಪಕವಾಗಿ ಗುಣಮಟ್ಟದಿಂದ ಕೂಡಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿದ್ದು ಹೀಗಾಗಿ ಸಕರ್ಾರಿ ಶಾಲೆಗಳೆಂದರೆ ಮೂಗು ಮುರಿಯುವಂತಹ ಸ್ಥಿತಿ ಎದುರಾಗಿದೆ ಎಂದರು.

       ಸೌಲಭ್ಯಗಳ ಬಗ್ಗೆ ಗೌರವವಿರಲಿ:ಟೇಬಲ್ ವಿತರಿಸಿ ಮಾತನಾಡಿದ ಮಾಜಿ ಸೈನಿಕ ಪರಮೇಶಪ್ಪ ಬಾರಂಗಿ, ಖಾಸಗಿ ಸಂಸ್ಥೆಗಳದ್ದೇ ಇರಲಿ ಅಥವಾ ಸಕರ್ಾರದ್ದೇ ಇರಲಿ, ಅವರು ನೀಡುವಂತಹ ಉಚಿತ ಸೌಲಭ್ಯಗಳ ಬಗ್ಗೆ ಮಕ್ಕಳಿಗೆ ಗೌರವವಿರಬೇಕು, ಅವುಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ದೇಶದ ಭವಿಷ್ಯದ ವ್ಯಕ್ತಿಗಳಾಗಿ ಹೊರ ಹೊಮ್ಮಬೇಕು ಅಂದಾಗ ಮಾತ್ರ ಸಕರ್ಾರದ ಉದ್ದೇಶಗಳು ಕೂಡ ಈಡೇರಲಿವೆ ಎಂದರು.

      ಇದೇ ಸಂದರ್ಭದಲ್ಲಿ ಎಕ್ಸೀಡ್ ಕ್ರಾಪ್ ಸೈನ್ಸ್ ಕಂಪನಿ ವತಿಯಿಂದ ಸಕರ್ಾರಿ ಪ್ರೌಢಶಾಲೆ ಹಾಗೂ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗಳ ಒಟ್ಟು 250 ಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ಸ್ಕೂಲ್ಬ್ಯಾಗ್ ಹಾಗೂ ಮಾಜಿ ಸೈನಿಕ ಪರಮೇಶಪ್ಪ ಅವರು ಕೊಡಮಾಡಿದ 5 ಟೇಬಲ್ಗಳನ್ನು ವಿತರಿಸಲಾಯಿತು. 

 ಎಸ್ಡಿಎಂಸಿ ಅಧ್ಯಕ್ಷ ವಿರೇಶ ಫಾಸಿ, ರಾಜ್ಯ ಸಹಕಾರ ಮಾರಾಟ ಮಂಡಳ ಧಾರವಾಡ ವಿಭಾಗದ ವ್ಯವಸ್ಥಾಪಕ ಮಲ್ಲಿಕಾಜರ್ುನ ಮಲ್ಲಮ್ಮನವರ, ಹಾವೇರಿ ವ್ಯವಸ್ಥಾಪಕ ಧರ್ಮ ಡೊಕ್ಕಣ್ಣನವರ, ಜಿಲ್ಲಾ ಮಾಕೆಚರ್ಿಟಿಂಗ್ ಅಧಿಕಾರಿ ರವಿಕುಮಾರ ತಾಳಿಕೋಟಿ, ಕಾಗಿನೆಲೆ ಸಿಆರ್ಪಿ ಗುರುರಾಜ ಚಂದ್ರಿಕೇರ, ಮುಖ್ಯಶಿಕ್ಷಕಿ ರೇಣುಕಾ ಶ್ವಾಗ್ಯಾಳ ಸಿಬ್ಬಂದಿಗಳಾದ ಕೃಷ್ಣಮೂತರ್ಿ, ಶೈಲಾ, ಚಂದ್ರಯ್ಯ, ಮಾಲತೇಶ ಗುಡಗೂರ, ಎಚ್.ಎಚ್.ಜಾಲಮ್ಮನವರ ಮಳೇಶಂಕರಮಠ ಹಾಗೂ ಇನ್ನಿತರರು ಉಪಸ್ಥಿತಿರದ್ದರು.