ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ವೇತನ ಯೋಜನೆ : ಪ್ರವೇಶಕ್ಕೆ ಕಿರು ಪರೀಕ್ಷೆ ಬರೆದ 1000 ವಿದ್ಯಾರ್ಥಿಗಳು
ಕಾರಟಗಿ 23 : ಪ್ರಸ್ತುತ ಸಾಲಿನಿಂದ ಕಮ್ಮಾವಾರಿ ಶಿಕ್ಷಣ ಸಂಸ್ಥೆಯಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ವೇತನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಸಂಸ್ಥೆಯಿಂದ ರೂ.50 ಲಕ್ಷ ಮೀಸಲಿಡಲಾಗಿದೆ.ರವಿವಾರ ಬೆಳಗ್ಗೆ 10 ಗಂಟೆಗೆ ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯುಲು ಪ್ರತಿಭಾವಂತ,ಬಡ ವಿದ್ಯಾರ್ಥಿಗಳಿಗೆ 50 ಲಕ್ಷ ರೂ.ಮೀಸಲು ಪ್ರವೇಶಕ್ಕೆ ಕಿರು ಪರೀಕ್ಷೆ ಜರುಗಿದವು.
ಪರೀಕ್ಷೆಯಲ್ಲಿ ರಾಮನಗರ ಕೆಸರಹಟ್ಟಿ ಸಿದ್ದಾಪುರ್ ಕಾರಟಗಿ ಗಂಗಾವತಿ ಸಿಂಧನೂರು ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮದ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಮಾತನಾಡಿ ನಮ್ಮ ಸಂಸ್ಥೆಯ ರೆಡ್ಡಿ ವೀರಣ್ಣ ಸಂಜೀವಪ್ಪ ಶಾಲೆ ಮತ್ತು ಕಾಲೇಜ್ ಗ್ರಾಮೀಣ ವಿದ್ಯಾರ್ಥಿಗಳ ಪ್ರಗತಿಯಲ್ಲಿ ವಿಶೇಷ ಪಾತ್ರ ವಹಿಸಿದೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಮತ್ತು ಶಿಕ್ಷಣಕ್ಕೆ ಮಹತ್ವ ಕೊಡಬೇಕೆಂಬ ಭಾವನೆ ಮೂಡಿಸಲು ಸ್ಕಾಲರ್ ಶಿಪ್ ಯೋಜನೆ ಜಾರಿಗೊಳಿಸಿದ್ದೇವೆ.
ಪಟ್ಟಣ ಸೇರಿದಂತೆ ಕಾರಟಗಿ, ಕನಕಗಿರಿ ಮತ್ತು ಗಂಗಾವತಿ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿ ಹೆಚ್ಚಿಸುವಲ್ಲಿ ನಮ್ಮ ಸಂಸ್ಥೆ ಸದಾ ಶ್ರಮಿಸುತ್ತಿದೆ. 28ನೇ ವರ್ಷದಲ್ಲಿ ಪಾದಾರೆ್ಣ ಮಾಡಿರುವ ನಮ್ಮ ಶಿಕ್ಷಣ ಸಂಸ್ಥೆ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಸೌಲಭ್ಯವನ್ನು ಪಡೆದುಕೊಳ್ಳುವ ಅವಕಾಶ ನೀಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ನಾರಾಯಣ, ಪ್ರಾಚಾರ್ಯರು ಕೆಎಸ್ ಗುರುಮಠ, ಉಪ ಪ್ರಾಚಾರ್ಯರು ವಸಂತ ದೇಸಾಯಿ, ಡಾ ಎಮ್ ಡಿ ರಫೀಕ್ ಖಾನ್, ಬಾಲ ಗುರುಕುಲ ಮುಖ್ಯಸ್ಥರು ಶ್ರೀದೇವಿ ಕೊಲ್ಲಾ ಶಿಕ್ಷಕ ವೃಂದ,ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲಕರು ಉಪಸ್ಥಿತರಿದ್ದರು.