ಸ್ಕಿಜೋಫ್ರೀನಿಯಾ ತಿಳುವಳಿಕಾ ಕಾರ್ಯಾ ಗಾರ
ಬೆಳಗಾವಿ, 30: ಸ್ಕಿಜೋಫ್ರೀನಿಯಾ ಲಕ್ಷಣ ಇರುವ ವ್ಯಕ್ತಿಗಳು ಅತಿ ಬೇಗನೆ ತಮ್ಮಲ್ಲಿ ಆಗುವ ಸಮಸ್ಯೆಗಳನ್ನು ಗುರುತಿಸಿಕೊಂಡು ಬೇಗನೆ ಚಿಕಿತ್ಸೆ ಪಡೆದುಕೊಳ್ಳುವಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದು ಬೆಳಗಾವಿ ಬಿಮ್ಸ್ ಆಸ್ಪತ್ರೆ ಪ್ರಭಾರ ವೈದ್ಯಕೀಯ ಅಧಿಕ್ಷಕರಾದ ಡಾ. ದಂಡಗಿ ಅವರು ಹೇಳಿದರು.
ಜಿಲ್ಲಾ ಆಡಳಿತ ಬೆಳಗಾವಿ, ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಬೆಳಗಾವಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ ಇವರುಗಳ ಸಹಯೊಗದಲ್ಲಿ ಜಿ ಎನ್ ಎಮ್ ಕಾಲೆಜು ವಿದ್ಯಾಥರ್ಿಗಳಿಗೆ ಸ್ಕಿಜೋಫ್ರೀನಿಯಾ ದಿನಾಚರಣೆಯ ತಿಳುವಳಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಬೆಳಗಾವಿ ಬಿಮ್ಸ್ ಆಸ್ಪತ್ರೆ ಮನೊರೋಗ ವಿಭಾಗ ಮುಖ್ಯಸ್ಥರು ಡಾ. ರಾಜೇಂದ್ರ ಕಟ್ಟೆ ಅವರು ಸ್ಕಿಜೋಫ್ರೀನಿಯಾ ರೋಗಿಗಳ ನಡುವಳಿಕೆಗಳ ಬಗ್ಗೆ ಸಾಮಾನ್ಯ ಜನರಿಗಿಂತ ವಿಭಿನ್ನವಾಗಿ ಇರುವುದನ್ನು ಸ್ಕಿಜೋಫ್ರೀನಿಯಾ ರೋಗಿಗಳ ಉದಾಹರಣೆ ಸಹಿತ ವಿವರಿಸಿದರು.
ಡಾ. ಚಂದ್ರಶೇಖರ ಟಿ ಆರ್ ಮನೊವೈದ್ಯರು ಬಿಮ್ಸ್ ಆಸ್ಪತ್ರೆ ಬೆಳಗಾವಿ ಇವರು ಈ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲ ಉದ್ದೇಶವೆಂದರೆ ಈ ತೀವ್ರತರವಾದ ಮಾನಸಿಕ ಕಾಯಿಲೆಯಾದ ಸ್ಕಿಜೋಫ್ರೀನಿಯಾ ಬಗ್ಗೆ ಜನರಲ್ಲಿ ಅರಿವು ಮೂಡಿವುದು ಅತಿ ಅವಶ್ಯಕವಾಗಿದೆ ಎಂದು ತಿಳಿಸಿದರು.
ಮೇಘಾ ಕಾಂಬಳೆ ಪ್ರಾಚಾರ್ಯರು ಜಿ ಎನ್ ಎಮ್ ಕಾಲೇಜ್ ಬೆಳಗಾವಿ ತಮ್ಮ ಅಧ್ಯಕ್ಷ ಭಾಷಣದಲ್ಲಿ ಈ ರೀತಿ ಕಾರ್ಯಕ್ರಮಗಳನ್ನು ನಮ್ಮ ಕಾಲೇಜಿನಲ್ಲಿ ಆಯೋಜನೆ ಮಾಡುವುದರಿಂದ ವಿದ್ಯಾಥರ್ಿಗಳಿಗೆ ತುಂಬಾ ಅನುಕೂಲವಾಗುತ್ತಿದೆ ಎಂದು ತಿಳಿಸಿದರು ಮತ್ತು ಮನೊರೋಗ ವಿಭಾಗದಲ್ಲಿ ಬರುವಂತ ರೋಗಿಗಳ ಪ್ರಾಯೋಗಿಕ ಅಧ್ಯಯನ ಮಾಡಲು ವಿದ್ಯಾಥರ್ಿಗಳಿಗೆ ಅನುಕೂಲವಾಗುತ್ತಿದೆ ಎಂದು ಹೆಳಿದರು.ಡಾ. ಪರಮೇಶ್ವರ ಎನ್ ಎಮ್ ಮನೋವೈದ್ಯರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳು ಇವರು ತಮ್ಮ ಉಪನ್ಯಾಸದಲ್ಲಿ ಸ್ಕಿಜೋಫ್ರೀನಿಯಾ ಕಾಯಿಲೆಯ ಲಕ್ಷಣಗಳು ಚಿಕಿತ್ಸೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು.
ಡಾ. ಸರಸ್ವತಿ ಎನ್ ಮನೋವೈದ್ಯರು ಬಿಮ್ಸ್ ಆಸ್ಪತ್ರೆ ಬೆಳಗಾವಿ ಇವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಭಾಷಣ ಮತ್ತು ಸ್ವಾಗತ ಕಾರ್ಯಕ್ರಮವನ್ನು ನೇರವೆರಿಸಿದರು. ಪ್ರಾರಂಭದಲ್ಲಿ ಜಿ ಎನ್ ಎಮ್ ವಿದ್ಯಾಥರ್ಿನಿಯರು ನಾಡಗೀತೆ ಹೇಳಿದರು. ಸಿ ಜಿ ಅಗ್ನಿಹೊತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .
ಡಾ. ಚಾಂದಿನಿ ಜಿ ದೇವಡಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳು ಬೆಳಗಾವಿ ಜಿ ಎನ್ ಎಮ್ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾಥರ್ಿನಿಯರು ಮತ್ತು ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.