ಲೋಕದರ್ಶನ ವರದಿ
ರಾಮದುರ್ಗ 02: ಗ್ರಾಮೀಣ ಪ್ರದೇಶದ ಹಲವು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನತೆಯ ಮನೆಯ ಮೇಲೆ ಹೆಸ್ಕಾಂ ವಿದ್ಯುತ್ ತಂತಿಗಳನ್ನು ಹಾಕಲಾಗಿದೆ. ಇದರಿಂದ ಮನೆ ನವೀಕರಣ ಸಂದರ್ಭದಲ್ಲಿ ಸಮುದಾಯದ ಜನತೆ ಪರಿತಪಿಸುವಂತಾಗಿದ್ದು, ಈ ಕುರಿತು ಹೆಸ್ಕಾಂ ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಿದರು ಸರಿಪಡಿಸುವ ಗೋಜಿಗೆ ಹೋಗಿಲ್ಲವೆಂದು ಸಮುದಾಯದ ಜನತೆ ಆರೋಪಿಸಿದರು.
ಪಟ್ಟಣದ ಮಿನಿವಿಧಾನ ಸೌಧದಲ್ಲಿ ದಿ.1ರಂದು ನಡೆದ ಪರಿಶಿಷ್ಟರ ಹಕ್ಕು ಬಾಧ್ಯತಾ ಸಭೆಯಲ್ಲಿ ಸಮುದಾಯದ ಜನತೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಮಧ್ಯ ಪ್ರವೇಶಿಸಿದ ಶಾಸಕರು ಕೂಡಲೇ ಸಮಸ್ಯೆ ಉಂಟಾಗುವ ಪ್ರದೇಶದಲ್ಲಿರುವ ವಿದ್ಯುತ್ ತಂತಿಗಳ ತೆರವಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳದಲ್ಲಿದ್ದ ಹೆಸ್ಕಾಂ ಎಇಇ ರಾಮಕೃಷ್ಣ ಗುಣಗಾ ಅವರಿಗೆ ಸೂಚನೆ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆಗೆ ಸರಕಾರ ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಹಲವು ಸಾಲ ಸೌಲಭ್ಯಗಳನ್ನು ಒದಗಿಸಿದ್ದು, ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲು ಸಾಲ ನೀಡಲು ಬ್ಯಾಂಕ ಅಧಿಕಾರಿಗಳು ಮುಂದಾಗುತ್ತಿಲ್ಲ. ಬ್ಯಾಂಕ್ಗೆ ಅಲೆದಾಡಿ ಸುಸ್ತಾಗುವಂತಾಗಿದೆ ಇದಕ್ಕೆ ಪರಿಹಾರ ಕಲ್ಪಿಸಿ ಎಂದು ಸಮುದಾಯದ ಜನತೆ ಒತ್ತಾಯಿಸುತ್ತಿದ್ದಂತೆ ಸ್ಥಳದಲ್ಲಿದ್ದ ಬ್ಯಾಂಕ ಅಧಿಕಾರಿಗಳಿಗೆ ಸರಕಾರದ ಸೌಲಭ್ಯಗಳ ಬ್ಯಾಂಕ ವ್ಯವಹಾರಕ್ಕೆ ಅನುಕೂಲ ಒದಗಿಸುವಂತೆ ಆಗ್ರಹಿಸಲಾಯಿತು. ಬ್ಯಾಂಕ ನೀತಿ ನಿಬಂಧನೆಗೊಳಪಟ್ಟು ಸೌಲಭ್ಯ ಸಮುದಾಯದ ಜನತೆ ತಲುಪುವಂತಾಗಲು ಶ್ರಮಿಸುವುದಾಗಿ ಭರವಸೆ ನೀಡಿದರು.
ದಲಿತ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ನೀಡಲು ದಾಖಲಾತಿಗಳಿಗೆ ಅಲೆದಾಡಿಸದೇ ಅವಶ್ಯಕ ದಾಖಲಾತಿಗಳನ್ನು ಮಾತ್ರ ಪಡೆದು ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಬೇರೆ ಬೇರೆಡೆ ಕೂಲಿಗಾಗಿ ಹೋದ ಪಾಲಕರು ಮಕ್ಕಳ ವಿದ್ಯಾಥರ್ಿ ವೇತನದ ಸಲುವಾಗಿ ಅಲೆದಾಡುವುದು ಸರಿಯಲ್ಲ. ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಕೆ.ಎಸ್. ಕಕರ್ಿ ಪಾಲಕರಿಗೆ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳವುದಾಗಿ ತಿಳಿಸಿದರು.
ನಂತರ ಮಾತನಾಡಿದ ಶಾಸಕ ಮಹಾದೇವಪ್ಪ ಯಾದವಾಡ ಸಮುದಾಯದ ಜನತೆಯ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶೀಘ್ರ ಪರಿಹಾರ ಒದಿಸಬೇಕು. ಇಲ್ಲವಾದಲ್ಲಿ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.
ಅಂಬೇಡ್ಕರ ಸ್ಟ್ಯಾಚು ನಿಮರ್ಾಣಕ್ಕೆ ಒತ್ತಾಯ:
ಪಟ್ಟಣದ ಮಿನಿ ವಿಧಾನಸೌಧದ ಹತ್ತಿರ ಅಂಬೇಡ್ಕರ ಸ್ಟ್ಯಾಚು ನಿಮರ್ಾಣ ಮಾಡುವಂತೆ ಹಲವು ಸಭೆಗಳಲ್ಲಿ ಸಚರ್ಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದಲಿತ ಮುಖಂಡ ದ್ಯಾಮಣ್ಣ ದೊಡಮನಿ ಒತ್ತಾಯಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಶಾಸಕ ಮಹಾದೇವಪ್ಪ ಯಾದವಾಡ ಹಿಂದೆ 10 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಏಕೆ ಇಷ್ಟೊಂದು ಒತ್ತಾಯ ಮಾಡಲಿಲ್ಲ. ಕೆಲಸ ಏಕೆ ಆಗಿಲ್ಲ ಎನ್ನುತ್ತಿದ್ದಂತೆ ಕೆಲಕಾಲ ಗದ್ದಲದ ವಾತಾವರಣ ಸೃಷ್ಠಿಯಾಯಿತು. ನಂತರ ಮುಖಂಡರನ್ನು ಸಮಾಧಾನಪಡಿಸಿದ ಶಾಸಕರು ಕೂಡಲೇ ಸಂಬಂಧದಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಂಡು ಸ್ಟ್ಯಾಚು ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ದಲಿತರ ವಿವಿಧ ಸಮಸ್ಯೆಗಳು ಹಾಗೂ ಪರಿಹಾರ ಕ್ರಮದ ಕುರಿತು ಚಚರ್ಿಸಲಾಯಿತು. ತಾ.ಪಂ ಅಧ್ಯಕ್ಷೆ ಶಕುಂತಲಾ ವಡ್ಡರ, ತಹಸೀಲ್ದಾರ ಬಸನಗೌಡ ಕೋಟೂರ, ತಾ.ಪಂ ಕಾರ್ಯನಿವರ್ಾಹಕ ಅಧಿಕಾರಿ ಎ.ಜಿ. ಪಾಟೀಲ, ಪಿಎಸ್ಐ ಸುನಿಲಕುಮಾರ ನಾಯಕ, ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಇದ್ದರು.