ಲೋಕದರ್ಶನ ವರದಿ
ಶಿರಹಟ್ಟಿ 23: ಲಕ್ಷ್ಮಣ ಸವದಿ ಅವರಿಗೆ ಮುಖ್ಯಮಂತ್ರಿ ಯಡಿಯುರಪ್ಪನವರ ಸರಕಾರದಲ್ಲಿ ಸಂಪುಟ ದರ್ಜೆ ಯ ಸ್ಥಾನ ಲಭ್ಯವಾಗಿರುವುದು ಗಾಣಿಗ ಸಮಾಜಕ್ಕೆ ಎಲ್ಲಿಲ್ಲದ ಖುಷಿಯಾಗಿದೆ. ಇವರು ಸೇವೆ ಗಾಣಿಗ ಸಮಾಜದ ಜೊತೆಗೆ ರಾಜ್ಯದ ಎಲ್ಲ ಸಮಾಜಕ್ಕೂ ಅನುಕೂಲಕಾರಿಯಾಗಲಿ ಎಂದು ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಹೇಳಿದರು.
ಅವರು ಪಟ್ಟಣದ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ಲಕ್ಷ್ಮಣ ಸವದಿ ಸಚಿವ ಸ್ಥಾನ ಲಭ್ಯವಾದ ಹಿನ್ನಲೆಯಲ್ಲಿ ಗಾಣಿಗ ಸಮಾಜದ ಮುಖಂಡರು ಬಸವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಗಾಣಿಗ ಸಮಾಜವನ್ನು ಪರಿಗಣಿಸಿ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿ, ಸರಕಾರದಲ್ಲಿ ಲಕ್ಷ್ಮಣ ಸವದಿಯವರ ಸೇವೆ ರಾಜ್ಯ ಸಮಸ್ತ ಎಲ್ಲಾ ಸಮುದಾಯದವರಿಗೆ ಅನುಕೂಲಕಾರಿಯಾಗಲಿ. ಸ್ಥಿರ ಸರಕಾರವನ್ನು ಯಡಿಯೂರಪ್ಪನವರ ನಡೆಸಲಿ ಎಂದು ದೇವರಲ್ಲಿ ಪ್ರಾಥರ್ಿಸುತ್ತೇವೆ ಎಂದು ಹೇಳಿದರು.
ಉಮೇಶ ಗಾಣಿಗೇರ ಮಾತನಾಡಿ, ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ನೀಡಿರುವುದು ಗಾಣಿಗ ಸಮಾಜಕ್ಕೆ ಸರಕಾರದ ನಮಗೆ ಲ್ಲ ಸಾಕಷ್ಟು ಹೆಮ್ಮೆ ಇದ್ದು, ಲಕ್ಷ್ಮಣ ಸವದಿ ಯವರು ಸೇವೆರಾಜ್ಯದ ಪ್ರಗತಿಗೆ ಪೂರಕವಾಗಲಿ, ಅವರಿಂದ ಉತ್ತಮ ಯೋಜನೆಗಳು ವ್ಯೆಕ್ತವಾಗಿ ರಾಜ್ಯದ ಅಭಿವೃದ್ದಿಯಲ್ಲಿ ಅವರ ಪಾತ್ರ ಹಿರಿದಾಗಲಿ ಎಂದು ಆಶಿಸಿದರು.
ಮುಖಂಡರಾದ ಬಸಲಿಂಗಪ್ಪ ಕಪ್ಪತ್ತನವರ, ಸುರೇಶ ಕಪ್ಪತ್ತನವರ, ಡಾ. ರಮೇಶ ಕಪ್ಪತ್ತನವರ, ಉಮೇಶ ಗಾಣಿಗೇರ, ನಾಗರಾಜ ಲಕ್ಕುಂಡಿ, ,ಸುಧೀರ ಜಮಖಂಡಿ, ಫಕ್ಕಿರೇಶ ಕಪ್ಪತ್ತನವರ, ಮುತ್ತಣ್ಣ ಕಪ್ಪತ್ತನವರ, ಬಸವರಾಜ ಪಾಟೀಲ್, ಪಪಂ ಸದಸ್ಯ ದೀಪು ಕಪ್ಪತ್ತನವರ, ಜಗದೀಶ ತೇಲಿ, ಪ್ರಕಾಶ ಸಜ್ಜನರ,ಡಾ. ಸಜ್ಜನವರ, ಈರಣ್ಣ ಸಜ್ಜನರ,ಮಂಜುನಾಥ ಕಪ್ಪತ್ತನರ, ಗೂಳಪ್ಪ ಕರಿಗಾರ, ಅಪ್ಪಣ್ಣ ಕುಬೇರ, ಶರಣಪ್ಪ ಶಿಂದಗಿ, ಹಾಲಪ್ಪ ಬಿಡನಾಳ, ಅಜ್ಜು ಕಪ್ಪತ್ತನವರ, ಮುಂತಾದವರು ಉಪಸ್ಥಿತರಿದ್ದರು.