ಏ. 12ರಂದು ಸವ್ಯಸಾಚಿ ಗ್ರಂಥ ಬಿಡುಗಡೆ ಸಮಾರಂಭ

Savyasachi Granth release ceremony on April 12

ಅಥಣಿ 10: ಅರವಿಂದರಾವ ದೇಶಪಾಂಡೆ ಅವರ ಸಾಮಾಜಿಕ, ಸಂಘಟನಾ ಹಾಗೂ ಶೈಕ್ಷಣಿಕ ಸೇವೆಯನ್ನು ಮನಗಂಡು  ಎಪ್ರಿಲ್ 12 ರಂದು ಜೆ ಎ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ  ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಸವ್ಯಸಾಚಿ ಗ್ರಂಥ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು  ಜೆ ಎ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಡಾ ರಾಮ ಕುಲಕರ್ಣಿ  ಹೇಳಿದರು. 

ಅವರು ಅಥಣಿ ಪಟ್ಟಣದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಕಾರ್ಯಕ್ರಮದಲ್ಲಿ ಕನೇರಿ ಮಠದ ಶ್ರೀ ಅದೃಶ್ಯಕಾಡಸಿದ್ದೇಶ್ವರ ಮಹಾಸ್ವಾಮಿಗಳು, ಅಯೋಧ್ಯಾ ಶ್ರೀರಾಮಲಲ್ಲಾ ಮೂರ್ತಿಯ ಶಿಲ್ಪಿ ಡಾ ಅರುಣ ಯೋಗಿರಾಜ, ಆರ್ ಎಸ್ ಎಸ್ ಪ್ರಮುಖ ಸುರೇಶ ಜೋಶಿ (ಭಯ್ಯಾಜಿ), ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ ಎಲ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತ ಇರುತ್ತಾರೆ ಎಂದರು.  

ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಅಥಣಿಯಲ್ಲಿ  ಶೈಕ್ಷಣಿಕವಾಗಿ, ಸಂಘಟನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ಸೇವೆ ಸಲ್ಲಿಸಿದ ಅರವಿಂದರಾವ ದೇಶಪಾಂಡೆ ಅವರ ಸೇವೆಗೆ ಪ್ರತ್ಯುತ್ತರವಾಗಿ ಸಮಾನ ಮನಸ್ಕರೆಲ್ಲ ಸೇರಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಎಲ್ಲರೂ ಸೇರಿ ಯಶಸ್ವಿಗೊಳಿಸಲು ಎಲ್ಲರಿಗೂ ಸ್ವಾಗತ ಎಂದರು. 

ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಬಿ.ಎಲ್‌.ಪಾಟೀಲ, ಅನೀಲ ದೇಶಪಾಂಡೆ (ಹಿಡಕಲ್), ಸುಹಾಸ ದಾತಾರ ಉಪಸ್ಥಿತರಿದ್ದರು.