ಗದಗ: ಪರೀಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ (ಖ.ಓ.ಖಿ.ಅ.ಕ.)ಅಡಿಯಲ್ಲಿ ದಿ. 25ರಿಂದ 10ರವರೆಗೆ ಜಿಲ್ಲೆಯಾದ್ಯಂತ ಸಕ್ರೀಯ ಟಿಬಿ ಪ್ರಕರಣಗಳನ್ನು ಕಂಡುಹಿಡಿಯುವ ಸರ್ವೇ ಕಾರ್ಯಕ್ರಮವನ್ನು ನಡೆಸುತ್ತಿರುವ ಪ್ರಯುಕ್ತ ಜಿಲ್ಲಾಡಳಿತ ಕಛೇರಿ ಜಿಲ್ಲಾಡಳಿತ ಭವನ, ಗದಗದಲ್ಲಿ ದಿ. 20ರಂದು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಮಾನ್ಯ ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿಗಳು ಗದಗ ಇವರು ಅಧ್ಯಕ್ಷತೆಯನ್ನು ವಹಿಸಿ, ಜಿಲ್ಲೆಯಲ್ಲಿ ಸಕ್ರೀಯ ಟಿಬಿ ಪ್ರಕರಣಗಳನ್ನು ಕಂಡುಹಿಡಿಯುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಆಂದೋಲನದಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಟಿಬಿ ಪತ್ತೆ ಹಚ್ಚುವಲ್ಲಿ ಮುಂದಾಗಬೇಕು. ಅಲ್ಲದೇ ಕೊಳಚೆ ಪ್ರದೇಶಗಳಲ್ಲಿ ಆರೋಗ್ಯ ಸಹಾಯಕರು ವಿಶೇಷ ಗಮನಹರಿಸಿ ಟಿಬಿ ಪತ್ತೆ ಮಾಡಬೇಕು ಎಂದು ಸಭೆಯಲ್ಲಿ ಸೂಚಿಸಿದರು.
ಸಭೆಯಲ್ಲಿ ಡಾ ಬಿ.ಎಮ್ ಗೊಜನೂರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು (ಪ್ರಭಾರ), ಡಾ ಕರಿಗೌಡರ ಜಿಲ್ಲಾ ಶಸ್ತ್ರಚಿಕಿತ್ಸಕರು, ಡಾ.ಎಸ್ ಎಸ್ ನೀಲಗುಂದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಗದಗ (ಪ್ರಭಾರ) ಹಾಗೂ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಸಭೆಯಲ್ಲಿ ಉಪಸ್ಥಿತರಿದ್ದರು.