ಗದಗ 25: ಪರೀಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದ (ಖ.ಓ.ಖಿ.ಅ.ಕ.)ಅಡಿಯಲ್ಲಿ ದಿ. 25ರಂದು ಬೆಳಿಗ್ಗೆ 11:00 ಘಂಟೆಗೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಹಳೆ ಜಿಲ್ಲಾ ಆಸ್ಪತ್ರೆ ಗದಗದಲ್ಲಿ ಸಕ್ರೀಯ ಟಿಬಿ ಪ್ರಕರಣಗಳನ್ನು ಕಂಡುಹಿಡಿಯುವ ಸರ್ವೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗಣೇಶ ಎಸ್ ಬಾಗಡೆ ಹಿರಿಯ ಚಿಕಿತ್ಸಾ ಮೇಲ್ವಿಚಾರಕರು ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಡಾ. ಎಸ್.ಎಸ್. ನೀಲಗುಂದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ಗದಗ ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸಕ್ರೀಯ ಟಿಬಿ ಪ್ರಕರಣಗಳನ್ನು ಕಂಡುಹಿಡಿಯುವ ಸರ್ವೇ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಎಲ್ಲಾ ಆರೋಗ್ಯ ಸಿಬ್ಬಂದಿಯವರಿಗೆ ಕಾರ್ಯಕರ್ತೆ ಯರಿಗೆ ತಿಳಿಸಿ ಕ್ಷಯರೋಗದ ಬಗ್ಗೆ ವಿವರವಾಗಿ ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಸತೀಶ ಎಸ್. ಬಸರೀಗಿಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಗದಗ ಇವರು ನೆರವೇರಿಸಿ ಕ್ಷಯರೋಗ ಟಿಬಿ ಪತ್ತೆ ಆಂದೋಲನವನ್ನು ಯಶಸ್ವಿಯಾಗಿ ಜರುಗಿಸಲು ಎಲ್ಲ ಆರೋಗ್ಯ ಸಿಬ್ಬಂದಿಯವರಿಗೆ ಹಾಗೂ ಕಾರ್ಯಕತರ್ೆಯರಿಗೆ ತಮ್ಮ ಉದ್ಘಾಟನಾ ನುಡಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ಎಸ್.ಎಸ್.ನೀಲಗುಂದ, ಆರ್ ಟಿ ಕೊಪ್ಪಳ ಎಫ್.ಡಿ.ಎ., ಜಿಲ್ಲಾ ಕಾರ್ಯಕ್ರಮದ ಸಂಯೋಜಕರಾದ ಅಶ್ವತ್ಥರೆಡ್ಡಿ, ಡಿ.ಪಿ.ಎಸ್ ಕೆಂಚರಡ್ಡಿಯವರ, ಪಿಪಿಎಂ ರೇಣುಕಾ, ದೇವಾಡಿಗ, ಬೆರಳಚ್ಚುಗಾರರು, ಗಣೇಶ ಬಾಗಡೆ, ಶ್ರೀಗುರುರಾಜ ಕೋಟ್ಯಾಳ ಎಸ್ಟಿಎಲ್ಎಸ್, ಬಸವರಾಜ ಲಾಳಗಟ್ಟಿ, ಚವಡಿ, ಜೋಷಿ, ಪ್ರವೀಣ ರಾಮಗಿರಿ ಟಿಬಿಹೆಚ್ವ್ಹಿ, ಕು.ಮಂಜೂಳಾ ಓಂಕಾರಿ, ಅನಸೂಯ ಟಂಕಸಾಲಿ ಹಾಗೂ ಇತರೇ ಸಿಬ್ಬಂದಿಯವರು ಹಾಜರಿದ್ದರು. ಕೊನೆಯಲ್ಲಿ ಅಶ್ವತ್ಥರೆಡ್ಡಿಯವರು ವಂದನಾರ್ಪಣೆ ಮಾಡಿದರು.