ನಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

ಕಾರವಾರ : ಕಾರವಾರ ತಾಲೂಕಿನ ನಗೆ ಗ್ರಾಮದಲ್ಲಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಸಾವಿತ್ರಿಬಾಯಿ ಫುಲೆ ಅವರ 191ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಪೂರ್ವದ ಕಾಲದಲ್ಲೇ  ಸಾವಿತ್ರಿಬಾಯಿ ಫುಲೆ ಹೆಣ್ಣು ಮಕ್ಕಳಿಗೆ ಶಾಲೆ ತೆರೆದು ಅಕ್ಷರದ ಬೆಳಕು ನೀಡಿದರು. ಸಮಾಜದ ಅಡೆತಡೆ ಎದುರಿಸಿ , ಪ್ರತಿರೋಧ ಎದುರಿಸಿ ಶೋಷಿತರ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿದ ತಾಯಿ ಎಂದು ಮುಖ್ಯ ಅಧ್ಯಾಪಕ ಅಖ್ತರ  ಸಯ್ಯದ್ ಮಕ್ಕಳಿಗೆ ವಿವರಿಸಿದರು. ಫಾತೀಮಾ ಶೇಖ್ ಸಹ ಸಾವಿತ್ರಿ ಬಾಯಿ ಅವರ ಕಾರ್ಯಕ್ಕೆ ಕೈ ಜೋಡಿಸಿ, ಶಿಕ್ಷಕಿಯಾಗಿ ಕೆಲಸ ಮಾಡಿದರು ಎಂದು ನುಡಿದರು. ಸಾವಿತ್ರಿ ಬಾಯಿ ಪುಲೆ  ಉತ್ತಮ ಶಿಕ್ಷಕಿ ಹಾಗೂ ಮಹಿಳಾ ಸಬಲೀಕರಣದ ರೂವಾರಿ ಎಂದರು. ನಂತರ  ಶಿಕ್ಷಕರು ಮಕ್ಕಳಿಗೆ ಸಿಹಿ ವಿತರಿಸಿದರು. ಮುಖ್ಯಾಧ್ಯಾಪಕರು ಸಹ ಶಿಕ್ಷಕಿ ನಾಗವೇಣಿ ಪಾವಸ್ಕರ ಹಾಜರಿದ್ದರು.