ರೈಲಿನಲ್ಲಿ ಪತ್ತೆಯಾದ 1 ದಿನದ ನವಜಾತ ಶಿಶು

ರಾಜಸ್ಥಾನ ಅ.22:  ರಾಜಸ್ಥಾನದ ಬಾರ್ಮರ್ನಿಂದ ಉತ್ತರಖಂಡದ ಹರಿದ್ವಾರಕ್ಕೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಅನಾಥವಾಗಿ ಮಲಗಿದ್ದ 1 ದಿನದ ನವಜಾತ ಶಿಶು ಪತ್ತೆಯಾಗಿದೆ.

ರೈಲಿನಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿಸಿದ ರೈಲ್ವೇ ಹೆಡ್ ಕಾನ್ಸ್ಸ್ಟೇಬಲ್ ಅನುಮಾನ ಮೂಡಿ. ತಕ್ಷಣವೇ ರೈಲು ಬೋಗಿಗೆ ಹತ್ತಿದ್ದಾರೆ. ಮಗುವಿನ ಶಬ್ದ ಕೇಳಿಸುತ್ತಿದ್ದ ಹೊದಿಕೆ ತೆರೆದು ನೋಡಿದರೆ ನವಜಾತ ಮಗು ಪತ್ತೆಯಾಗಿದೆ. ಈ ಘಟನೆ ಬಾರ್ಮರ್ ಹರಿದ್ವಾರ ರೈಲಿನಲ್ಲಿ ನಡೆದಿದೆ. 

ಈ ರೈಲಿನ ಎಸ್4 ಕೋಚ್ 71ನೇ ಬರ್ತ್ ನಂಬರ್ನಲ್ಲಿ ಈ ಮಗು ಪತ್ತೆಯಾಗಿದೆ. ಹೆಡ್ ಕಾನ್ಸ್ಸ್ಟೇಬಲ್ ಭೀಮರಾಮ್ ಪೂನದ್ ಮಗುವನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಅಳುತ್ತಾ ತೀವ್ರ ಅಸ್ವಸ್ಥಗೊಂಡಿದೆ. ಇತ್ತ ಹಸಿವಿನಿಂದಲೂ ಬಳಲಿದೆ. ರೈಲಿನಲ್ಲಿ ಮಗುವನ್ನು ಬಿಟ್ಟು 8 ಗಂಟೆಗೂ ಹೆಚ್ಚು ಸಮಯವಾಗಿದೆ. ಕಾರಣ ಕನಿಷ್ಠ 8 ಗಂಟೆಗಳಿಂದ ಮಗುವಿನ ಹೊಟ್ಟೆಯಲ್ಲಿ ಏನೂ ಇಲ್ಲ. ಹೀಗಾಗಿ ಮಗು ತೀವ್ರ ಅಸ್ವಸ್ಥಗೊಂಡಿದೆ.  

ಮಗುವಿನ ಪೋಷಕರಿಗಾಗಿ ತೀವ್ರ ಹುಡುಕಾಟ ನಡೆದಿದೆ.