ಬೆಂಗಳೂರು ಯಲಹಂಕ ವಲಯದಲ್ಲಿ ಮೇಘಸ್ಫೋಟ: 10 ಬಡಾವಣೆಗಳು ಜಲಾವೃತ

ಬೆಂಗಳೂರು 22: ಬೆಂಗಳೂರು ಯಲಹಂಕ ವಲಯದಲ್ಲಿ ಸೋಮವಾರ ರಾತ್ರಿ ಮೇಘಸ್ಫೋಟ ಸಂಭವಿಸಿದ್ದು, ದಾಖಲೆಯ 42 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ಪರಿಣಾಮ ಇಲ್ಲಿನ 10 ಬಡಾವಣೆಗಳು ಜಲಾವೃತವಾಗಿದ್ದು, 4000ಕ್ಕೂ ಅಧಿಕ ನಿವಾಸಿಗಳು ತೊಂದರೆಗೀಡಾಗಿದ್ದಾರೆ. 

ಇನ್ನು ಪ್ರವಾಹದಿಂದಾಗಿ 10 ಬಡಾವಣೆಗಳು ಜಲಾವೃತಗೊಂಡಿದ್ದು, 4000 ಜನರ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. 

ಕೇಂದ್ರೀಯ ವಿಹಾರ್ ಅಪಾಟರ್್ ಮೆಂಟ್ ಸಂಕೀರ್ಣಕ್ಕೆ ನಾಲ್ಕು ಅಡಿಗೂ ಹೆಚ್ಚು ನೀರು ನುಗ್ಗಿದ್ದರಿಂದ 3000ಕ್ಕೂ ಹೆಚ್ಚು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಎರಡು ದೋಣಿಗಳನ್ನು ನಿಯೋಜಿಸಿವೆ. 

ಘಟನೆಯ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹೆಚ್ಚುವರಿ ಮುಖ್ಯ ಕಾರ್ಯದಶರ್ಿ ನಗರಾಭಿವೃದ್ಧಿ ಇಲಾಖೆ ಬೆಂಗಳೂರು, ಉಮಾಶಂಕರ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಕಾಯರ್ಾಚರಣೆಗಳ ಮೇಲ್ವಿಚಾರಣೆ ನಡೆಸಿದರು.