ಅಶಿಕ್ಷಿತರ ಪಾಲಿನ ನಿಜ ಸರಸ್ವತಿ ಸಾವಿತ್ರಿಬಾಯಿ ಫುಲೆ

ಲೋಕದರ್ಶನ ವರದಿ ಅಥಣಿ 07: 19 ನೇಯ ಶತಮಾನದಲ್ಲಿ ಹೆಣ್ಣುಮಕ್ಕಳಿಗೆ ಅದರಲ್ಲಿಯು ಕೆಳವರ್ಗದ ಹೆಣ್ಣು ಮಕ್ಕಳಿಗಾಗಿ ಜೋತಿಬಾ ಫುಲೆ ಅವರ ಜೊತೆಯಾಗಿ 14 ಶಾಲೆಗಳನ್ನು ತೆರೆದ ಕೀತರ್ಿ, ಕ್ರಾಂತಿಕಾರಿ ಮಹಿಳೆ ಸಾವಿತ್ರಿಬಾಯಿ ಫುಲೆ ಇವರದ್ದಾಗಿದೆ. ಭಾರತದ ಮೊಟ್ಟಮೊದಲ ಮಹಿಳಾ ಹೋರಾಟಗಾತರ್ಿ. ಅಶಿಕ್ಷಿತರ ಪಾಲಿನ ನಿಜ ಸರಸ್ವತಿ ಎನಿಸಿಕೊಂಡಿರುವ ಅಕ್ಷರದ ಅವ್ವನ ಬದುಕಿನ ವಿವರಗಳನ್ನು ಡಾ ಆರ್.ಎಫ್ ಇಂಚಲ ಪ್ರಾಚಾರ್ಯರು ವಿವರಿಸಿದರು. ಸ್ಥಳಿಯ ಎಸ್.ಎಸ್.ಎಮ್.ಎಸ್ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಘಟಕವು ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಬ್ರೀಟಿಷ ಸರಕಾರದಿಂದ ಗೌರವ ಪಧವಿಯನ್ನು ಪಡೆದ 'ಸಾವಿತ್ರಿಬಾಯಿ ಫುಲೆಯವರ 189ನೇಯ ಜನ್ಮದಿನಾಚರಣೆ'ಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್. ಎಸ್ ಎಮ್ ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಆರ್ ಎಫ್ ಇಂಚಲ. ಸಾವಿತ್ರಿಬಾಯಿ ಫುಲೆಯವರ ಜೀವನ ಚರಿತ್ರೆಯನ್ನು ಕುರಿತು ಮಾತನಾಡಿದರು. ಅಧ್ಯಕ್ಷಿಯ ಸ್ಥಾನವನ್ನು ವಹಿಸಿದ ಡಾ. ಕೆ. ಆರ್ ಸಿದ್ದಗಂಗಮ್ಮ ಅವರು ಮಹಾರಾಷ್ಟ್ರದ ಬೆಳವಣಿಗೆಯಲ್ಲಿ ಜೋತಿಭಾ ದಂಪತಿಗಳು ಹಾಗೂ ಅಂಬೇಡ್ಕರರ ವಿಚಾರಗಳೇ ಮುಖ್ಯಕಾರಣವೆಂದು ಹೇಳಿದರು. ಡಾ. ಭಾರತಿ ಎಸ್ .ಗದ್ದಿ ಅವರು ಸ್ವಾಗತಿಸಿದರು. ಪೂಣರ್ಿಮಾ ಮಿಣಚೆ ನಿರೂಪಿಸಿದರು. ಸಂಗೀತಾ ಪುಷ್ಟಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು. ಶಾರದಾ ಮಠದ ಹಾಗೂ ನಜೀಮಾ ಮುಲ್ಲಾ ಪ್ರಾಥರ್ಿಸಿದರು. ಹಾಗೂ ಮಹಾವಿದ್ಯಾಲಯದ ಎಲ್ಲ ಪ್ರಾಧ್ಯಾಪಕವೃಂದ ಮತ್ತು ಮಹಾವಿದ್ಯಾಲಯದ ಸಲಹಾ ಸಮಿತಿ ಅಧ್ಯಕ್ಷರು ಪಾಲ್ಗೊಂಡಿದ್ದರು