ಸಾವಿತ್ರಿಬಾಯಿ ಫುಲೆಯವರು ಎಲ್ಲ ಮಹಿಳೆಯರಿಗೆ ಮಾದರಿ

ಲೋಕದರ್ಶನ ವರದಿ

ರಾಯಬಾಗ 17: ಸಾವಿತ್ರಿಬಾಯಿ ಫುಲೆ ಅವರು ಆಧುನಿಕ ಕಾಲದ ಸ್ತ್ರೀ ಸ್ವಾಭಿಮಾನದ ಹೆಗ್ಗುರುತಾಗಿ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆಂದು ಸರಕಾರಿ ಪ್ರಥಮ ದಜರ್ೆ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಅರುಣ ಕಾಂಬಳೆ ಹೇಳಿದರು.

ಸೋಮವಾರ ಪಟ್ಟಣದ ಎಸ್ಪಿಎಮ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಆಧುನಿಕ ಕಾಲದ ಮಹಿಳೆಯರ ಸಮಸ್ಯೆ ಮತ್ತು ಸವಾಲುಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನೇಕ ಶೋಷಣೆಯಿಂದ ಮಹಿಳೆ ಜರ್ಜರಿವಾದರೂ, ಅವಳು ಜೀವಸೆಲೆಯಂತೆ ಸಮಾಜದಲ್ಲಿ ಮೇಲೆದ್ದು ತನ್ನ ಅಸ್ತಿತ್ವವನ್ನು ಸಾಬೀತು ಪಡಿಸುತ್ತಲ್ಲೇ ಬಂದಿದ್ದಾಳೆ. ಮಹಿಳೆಯರ ಆತ್ಮಸ್ಥೈರ್ಯ ಹಾಗೂ ಪ್ರತಿಭೆಗೆ ಭಾರತೀಯ ಸಂವಿಧಾನ ಒತ್ತಾಸೆಯಾಗಿ ನಿಂತಿದೆ ಎಂದರು.

ಪ್ರಾಚಾರ್ಯ ಪಿ.ಬಿ.ಮುನ್ಯಾಳ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕರಾದ ಡಾ.ಯಲ್ಲಪ್ಪ ಹಿಮ್ಮಡಿ, ರವಿ ಬಸನಾಯಿಕ, ಸಚಿನ ಕಾಂಬಳೆ, ಮಾರುತಿ ಹಾಡಕಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಸಮಾಜಶಾಸ್ತ್ರದ ಮುಖ್ಯಸ್ಥೆ ಪ್ರೊ.ಲಕ್ಷ್ಮೀ ಪೂಜೇರಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು, ಕವಿತಾ ಕಾಂಬಳೆ ನಿರೂಪಿಸಿದರು, ಪ್ರೀತಿ ಹಿರೇಕೊಡಿ ವಂದಿಸಿದರು.