ಸಾವಿತ್ರಿಬಾಯಿ ಫುಲೆ ದಿನಾಚರಣೆ, ಕ್ಯಾಲೆಂಡರ್ ಬಿಡುಗಡೆSavitribai Phule Day, Calendar Release
Lokadrshan Daily
12/17/24, 5:11 PM ಪ್ರಕಟಿಸಲಾಗಿದೆ
ಕಂಪ್ಲಿ07: ಸಾವಿತ್ರಿ ಬಾಯಿ ಫುಲೆ ಭಾರತದ ಮೊಟ್ಟ ಮೊದಲ ಮಹಿಳೆ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಶಿಕ್ಷಣವೆಂಬದು ಗೊತ್ತಿರದ ಜನರಿಗೆ ಮೊದಲ ಬಾರಿಗೆ ಶಿಕ್ಷಣವನ್ನು ದಾರೆಯರೆದ ಮಹಾತಾಯಿ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಕನರ್ಾಟಕ ರಾಜ್ಯ ಸಕರ್ಾರಿ ಎನ್ಪಿಎಸ್ ನೌಕರರ ಸಂಘ ಕಂಪ್ಲಿ ತಾಲ್ಲೂಕು ಘಟಕವು ಶುಕ್ರವಾರ ಸತ್ಯನಾರಾಯಣ ಪೇಟೆಯ ಸಹಿಪ್ರಾ ಶಾಲೆ ಆವರಣದಲ್ಲಿ ಸಾವಿತ್ರಿ ಬಾಯಿ ಫುಲೆ ದಿನಾಚರಣೆ, ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಗಿನ ವವ್ಯಸ್ಥೆ ವಿರುದ್ದವಾಗಿ ಶಿಕ್ಷಣ ಕ್ರಾಂತಿಯನ್ನೆ ಮಾಡಿದರು ಸಾವಿತ್ರಿ ಬಾಯಿ ಫುಲೆಯವರ ತತ್ವ ಆದರ್ಶಗಳನ್ನು ಅಳವಡಿಕೊಳ್ಳಿ. ಮಹಿಳಾ ಶಿಕ್ಷಣಕ್ಕೆ ಅದ್ಯತೆ ನೀಡಿ ಫುಲೆಯವರ ಜೀವನ ಚರಿತ್ರೆಯನ್ನು ಶಿಕ್ಷಕರು ಮಕ್ಕಳಿಗೆ ಬೋಧಿಸುವಂತಾಗಬೇಕು ಎಂದು ಹೇಳಿದರು.
ರಾಜ್ಯ ಸಕರ್ಾರಿ ಎನ್ಪಿಎಸ್ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದಶರ್ಿ ಎಂ.ಎ.ನಾಗನಗೌಡ ಮಾತನಾಡಿ, ಶಾಲೆ ಬಿಟ್ಟ ಮಕ್ಕಳ ಕುರಿತಂತೆ ಶಿಕ್ಷಕರನ್ನು ಹೊಣೆಗಾರರನ್ನಾಗಿಸದೆ ಪೋಷಕರನ್ನೇ ಹೊಣೆಗಾರರನ್ನಾಗಿಸಬೇಕು. ಶಾಲೆ ಬಿಟ್ಟ ಮಕ್ಕಳ ಪೋಷಕರಿಗೆ ನೀಡುವ ಸಕರ್ಾರಿ ಸೌಲಭ್ಯ ಕಡಿತಗೊಳಿಸುದಾಗ ಮಾತ್ರ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಈ ವಿಷಯವನ್ನು ವಿಧಾನಸೌಧದ ಅಧಿವೇಶನದಲ್ಲಿ ಪ್ರಶ್ನಿಸುವಲ್ಲಿ ಶಾಸಕರು ಮುಂದಾಗಬೇಕೆಂದು ಎಂದರು.