ಇಂಡಿ 06: ತಾಲೂಕಿನ ರೂಡಗಿ ಗ್ರಾಮದ ಯುವತಿ ಸವಿತಾ ಸಾಯಿಬಗೌಡ ಹದ್ರಿ(22) ಎನ್ನುವ ಯುವತಿ ನವೆಂಬರ್ 3, 2024 ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಗಂಡನ ಮನೆಯಿಂದ ಕಾಣೆಯಾಗಿದ್ದಾಳೆ.
ಈ ಕುರಿತು ಯುವತಿಯ ತಾಯಿ ಮಾದೇವಿ ಶಿವುರಾಯ ಗುಡ್ಡೊಡಗಿ.ಸಾ,ಕುಳೆಕುಮಟಿಗಿ ತಾ,ಆಲಮೇಲ ಇವರು ಇಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಗಳ ಪತ್ತೆಗಾಗಿ ಮನವಿ ಮಾಡಿದ್ದಾರೆ.ಇಂಡಿ ತಾಲ್ಲೂಕಿನ ರೂಡಗಿ ಯಲ್ಲಿರುವ ಗಂಡನ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಕಾಣೆಯಾಗಿದ್ದಾಳೆ.
ಯುವತಿ ಕುರಿತು ಮಾಹಿತಿ ತಿಳಿದು ಬಂದಲ್ಲಿ ಎಸ್ಪಿ ಕಚೇರಿ 08352-250022, ವಿಜಯಪುರ ಕಂಟ್ರೋಲ್ ರೂಂ 08352-250844, ಇಂಡಿ ಗ್ರಾಮೀಣ ಠಾಣೆ 08359-225100, 9480804273 ನಂಬರ್ ಗೆ ಸಂಪರ್ಕಿಸಬಹುದು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.