ಹೆಲ್ಮೇಟ ಧರಿಸಿ ಜೀವ ಉಳಿಸಿಕೊಳ್ಳಿ: ಪಿಎಸ್ಐ ತಿಪ್ಪರಡ್ಡಿ

ಲೋಕದರ್ಶನ ವರದಿ

ಶಿರಹಟ್ಟಿ 30: ಪ್ರತಿಯೊಬ್ಬ ವ್ಯಕ್ತಿ ತಮ್ಮ ಕುಟುಂಬದ ಆಧಾರ ಸ್ತಂಭವಾಗಿರುವುದರ ಜೊತೆಗೆ ಪ್ರತಿ ಜೀವಕ್ಕೂ ಬೆಲೆ ಇದೆ. ಇದನ್ನು ತಿಳಿದುಕೊಳ್ಳದೇ ಹುಂಬತನಕ್ಕೆ  ಮುಂದಾದವರೆ ಜೀವಕ್ಕೆ ಆಪತ್ತು  ತಂದುಕೊಳ್ಳುತ್ತೀರಿ, ಆದ್ದರಿಂದ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೇಟ ಕಡ್ಡಾಯವಾಗಿ ಧರಿಸಿ ಜೀವ ರಕ್ಷಿಸಿಕೊಂಡು ಕುಟುಂಬದವರ ರಕ್ಷಣೆಯನ್ನೂ ಮಾಡಿ ಎಂದು ಶಿರಹಟ್ಟಿ ಪಿಎಸ್ಐ ಬಸವರಾಜ ತಿಪ್ಪರಡ್ಡಿ ಹೇಳಿದರು. 

ಅವರು ಪಟ್ಟಣದ ಜನಸಂದಣಿ ಇರುವ ಬಸವೇಶ್ವರ ವೃತ್ತದಲ್ಲಿ ಹೆಲ್ಮೇಟ ಕಡ್ಡಾಯ ಮತ್ತು ಸುರಕ್ಷತೆ ಕುರಿತು ಸಾರ್ವಜನಿಕರಿಗೆ ಮನವರಿಕೆಮಾಡಿಕೊಟ್ಟರು. 

ನಿರ್ಲಕ್ಷ ಧೋರಣೆಯಿಂದ ಕುಟುಂಬವನ್ನು ಬೀದಿಗೆ ತರಬೇಡಿ, ವಾಹನ ಸವಾರರು ನಿಯಮಗಳನ್ನು ಪಾಲಿಸುವುದರ ಜೊತೆಗೆ ಕಡ್ಡಾಯವಾಗಿ ಹೆಲ್ಮೇಟ ಧರಿಸಿ, ಹೆಲ್ಮೆಟ್ ಧಾರಣೆ ಇಲ್ದೆನೇ ಆಗುವ ಅನಾಹುತದಲ್ಲಿಂದ ಬಚಾವ ಅಗುವುದಕ್ಕೆ ಪ್ರಯತ್ನಿಸಬೇಕು. ಇನ್ನು ಅಟೋ ರಿಕ್ಷಾ ದವರು ಪ್ಯಾಸೆಂಜರ ತಮ್ಮ ವಾಹನದಲ್ಲಿ ಮಿತವಾಗಿ ಸೇರಿಸಿಕೊಳ್ಳಬೇಕು. ಮಿತವಾದ ವೇಗದಲ್ಲಿ ಚಲಿಸಬೇಕು. ಇತ್ತೀಚಿನ ದಿನಮಾನದಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮಿತವಾಗಿ ಪ್ರಯಾಣಿಕರನ್ನು ಕರೆದೊಯ್ಯಬೇಕು. ವಾಹನ ಚಲಿಸುವಾಗ ಹೆಚ್ಚು ಧ್ವನಿಯೊಂದಿಗೆ ಹಾಡುಗಳನ್ನು ಕೇಳಿವುದು ಮತ್ತು ಶಬ್ದಗಳನ್ನು ಮಾಡುವುದು ನಿಷೇಧಿಸಬೇಕು. ನಿಮ್ಮ ಆ ಶಬ್ದದಿಂದ ಹಿಂಬದಿಯಿಂದ ಬರುವ ವಾಹಗಳ ಶಬ್ದ ನಿಮಗೆ ಕೇಳದೇ ಅಪಘಾತವಾಗುತ್ತವೆ ಇದಕ್ಕೆ ಕಟ್ಟೆಚ್ಚವಾಗಿ ನಿರ್ವಹಿಸಬೇಕು ಎಂದು ಮನವರಿಕೆ ಮಾಡಿದರು. 

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಎನ್.ಪಾಟೀಲ್ ಮತ್ತು ಪಪಂ ಮಾಜಿ ಉಪಾಧ್ಯಕ್ಷ ಚಾಂದಸಾಬ ಮುಳಗುಂದ, ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.