ಲೋಕದರ್ಶನ ವರದಿ
ಕೊಪ್ಪಳ 26: ಗ್ರಾಮೀಣ ಪ್ರದೇಶದಲ್ಲಿ ಧಾಮರ್ಿಕ ಪರಂಪರೆ ಸಂಸ್ಕೃತಿ ಹಾಸುಹೊಕ್ಕಾಗಿದೆ ಇಂತಹ ಪರಂಪರೆಯನ್ನು ಉಳಿಸಬೇಕಿದೆ. ಯುವ ಜನತೆ ಸಂಪ್ರದಾಯಸ್ತರಾಗಬೇಕಿದೆ. ಧಾಮರ್ಿಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾನವ ಜನ್ಮ ಶ್ರೇಷ್ಠವಾದ್ದರಿಂದ ದುಷ್ಚಟಗಳಿಗೆ ಅಂಟಿಕೊಳ್ಳದೆ ಅಮೂಲ್ಯ ಜೀವನವನ್ನು ಹಾಳು ಮಾಡದೇ ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವುದರ ಜೊತೆಗೆ ದೇವರ ನಾಮಸ್ಮರಣೆ ಕೂಡ ಅಗತ್ಯವಾಗಿದ್ದು ನಮ್ಮ ಮನದ ಮಲೀನವನ್ನು ತೊಡೆದು ಹಾಕಲು ನಾಂದಿಯಾಗುತ್ತದೆ ಎಂದು ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಕಣಗಾಲ್ ಹೇಳಿದರು.
ಅವರು ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಕಾಳಿಕಾದೇವಿ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಧಾಮರ್ಿಕ ಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಂತರ ಜಗದಿಶಯ್ಯ ಹಿರೇಮಠ ಮಾತನಾಡಿ ನಮ್ಮ ನಾಡಿನಾದ್ಯಂತ ಧರ್ಮ ಕಾರ್ಯಗಳು ನಡೆಯುತ್ತಲಿವೆ. ಹಲವಾರು ಮಹಾಂತರು, ಗುರುಗಳು ಧಮರ್ೋಪದೇಶವನ್ನು ಕೊಟ್ಟಿದ್ದಾರೆ. ಅಲ್ಲದೇ ಧರ್ಮ ಕಾರ್ಯಗಳು ಗ್ರಾಮಗಳಲ್ಲಿ ಮನೆ-ಮನೆಗಳಲ್ಲಿ ನಡೆಯುತ್ತಿವೆ. ಇಲ್ಲದಿದ್ದರೇ ನಮಗೆ ದೇವರ ಬಗ್ಗೆ ಗುರುವಿನ ಬಗ್ಗೆ ಅರಿವು ಮುಡುತ್ತಾ ಇರಲಿಲ್ಲ. ಹಾಗಾಗಾ ಸತ್ಸಂಘಗಳು ನಡೆಯುತ್ತಾ ಇರಬೇಕು. ಯುವ ಪೀಳಿಗೆ ಮೋಜು ಮಸ್ತಿಗಳಿಗೆ ವಾಲದೆ ಧರ್ಮಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಧಾಮರ್ಿಕ ಕಾರ್ಯಗಳಲ್ಲಿ ಭಾಗವಹಿಸಿದರೆ. ಧರ್ಮ ನಮಗೆ ದಾರಿ ತೊರಿಸುತ್ತದೆ.
ಗೀತೋಪದೇಶ, ಮಹಾಭಾರತ ಮಕ್ಕಳಿಗೆ ಉಪದೇಶ ಮಾಡಿಸಿ ಸನ್ಮಾಗರ್ಿಗಳಾಗಿಸಿ ಎಂದರು. ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆ ಕುಂಭಮೇಳ ನಡೆಸಿ ಕಾಳಿಕಾದೇವಿಗೆ ಕುಂಭಾಬಿಷೇಕ ನೆರವೇರಿಸಿ ಸಹಸ್ರ ಬಿಲ್ವಾರ್ಚನೆ ಮಹಾಮಂಗಾಳರತಿ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದ ಜಗದಯ್ಯ ಸಾಲಿಮಠ ಹಾಗೂ ತಂಡದವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಸಲಾಯಿತು. ದಾಸರಪದ, ವಚನಗಳನ್ನು ಹಾಡಿ ಜನ-ಮನ ತಣಿಸಿದರು. ಫಕೀರಪ್ಪ ತಿಗರಿ ತಬಲಾ ಸಾಥ್ ನೀಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಕೊಟ್ರಯ್ಯ ಸ್ವಾಮಿ ಅಬ್ಬಿಗೇರಿ ಮಠ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಶಂಕರಗೌಡ ಹಿರೇಗೌಡ್ರ, ರಾಜು ಹಿರೇಮಠ, ವಿರುಪಾಕ್ಷೇಶ್ವರ ಸ್ವಾಮಿಗಳು, ವಿಶ್ವಕರ್ಮ ಸಮಾಜದ ತಾಲೂಕಾ ಅಧ್ಯಕ್ಷ ಶೇಖರಪ್ಪ ಬಡಿಗೇರ ಇತರರು ಭಾಗವಹಿಸಿದ್ದರು. ಮಂಜುನಾಥಗೌಡ ಹಿರೇಗೌಡ್ರ ಸ್ವಾಗತಿಸಿದರು. ಕಾಳಿಕಾದೇವಿ ಗ್ರಾಮೀಣಾಭಿವೃದ್ದಿ ಸಂಘದ ಅಧ್ಯಕ್ಷ ಯರಿಯಪ್ಪಗೌಡ ಹಿರೇಗೌಡ್ರ ನಿರೂಪಿಸಿದರು. ಕಾರ್ಯದಶರ್ಿ ನಾಗಯ್ಯ ಗುಳಿಗಿಹುಗ್ಗಿ ವಂದಿಸಿದರು.