ಪರಿಸರ ಸುಂದರವಾಗಿಡಲು ಗಿಡ ಮರಗಳನ್ನು ಉಳಿಸಿ, ಬೆಳೆಸಿ: ಮುನ್ಯಾಳ

ಲೋಕದರ್ಶನ ವರದಿ
ರಾಯಬಾಗ: ಗಿಡ ಮರಗಳನ್ನು ನಾಶ ಮಾಡದೇ ಅವುಗಳನ್ನು ಸೌಂರಕ್ಷಿಸಿ, ಉಳಿಸಿ, ಬೆಳೆಸಿದರೆ ನಮ್ಮ ಸುತ್ತಮುತ್ತಲಿನ ಪರಿಸರ ಸುಂದರವಾಗಿರುತ್ತದೆ ಎಂದು ಎಸ್ಪಿಎಮ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಬಿ.ಮುನ್ಯಾಳ ಹೇಳಿದರು.
ಶನಿವಾರ ಪಟ್ಟಣ ಹೊರವಲಯದ ಶಿವಾಜಿ ಪಾರ್ಕದಲ್ಲಿ ಸ್ಥಳಿಯ ಎಸ್.ಪಿ.ಮಂಡಳದ ರಾ.ವಿ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ ವಿಶೇಷ ಶಿಬಿರದಲ್ಲಿಯುವ ರೆಡ್ ಕ್ರಾಸ್ ಘಟಕ ಹಾಗೂ ಸ್ಕೌಟ್ಸ್ & ಗೈಡ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಲ ಸಂರಕ್ಷಣೆ, ಮಳೆ ನೀರು ಕೊಯ್ಲು ಹಾಗೂ ಪ್ಲಾಸ್ಟಿಕ ನಿಷೇಧ ಕುರಿತುಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 
ರಾ.ವಿ.ಸಂಯುಕ್ತ ಪ.ಪೂ.ಮಹಾವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಶಂಕರ ಚಂದರಗಿ,ಆರ್.ಎಸ್.ಕಾಂಬಳೆ, ಪಿ.ಎಂ.ಭೆಂಡೆ, ಎ.ಸಿ.ಪಾಟೀಲ, ರವಿ ಬಸನಾಯಿಕ ಸೇರಿದಂತೆ ಎನ್ಎಸ್ಎಸ್ ಶಿಬಿರಾಥರ್ಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.