ಸಾವಳಗೀಶ್ವರ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ

ಬೈಲಹೊಂಗಲ 05: ಕರ್ನಾಟಕ ಸಾಂಸ್ಕೃತಿಕವಾಗಿ ಧಾರ್ಮಿಕ, ಶೈಕ್ಷಣಿಕವಾಗಿ ಮುಂದೆ ಬರಲು ಮಠಗಳು ಕಾರಣವಾಗಿವೆ. ಈ ಕಾರ್ಯಕ್ಕೆ ಬಸವಾದಿ ಶರಣರ ಕಾಯಕ ನಿಷ್ಠೆ ಕಾರಣವೆಂದು ಗದಗ ತೊಂಟದಾರ್ಯಮಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಹೇಳಿದರು.

      ಅವರು ತಾಲೂಕಿನ ಸಮೀಪದ ನಾಗನೂರ ಗ್ರಾಮದ ರುದ್ರಾಕ್ಷಿಮಠದಲ್ಲಿ ನಡೆದ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಮಹಾಸ್ವಾಮೀಜಿ ಪುಣ್ಯಸ್ಮರಣೆ ರಜತಮಹೋತ್ಸವ, ಬಸವ ಪುರಾಣ, ಡಾ.ಸಾವಳಗೀಶ್ವರ ದೇವರ ನಿರಂಜನ ಪಟ್ಟಾಕಾರ ಮಹೋತ್ಸವದ 26 ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣವರ ನಂತರ ಸಾಮಾಜಿಕ ಚಳಿವಳಿಯನ್ನು 15 ನೇ ಶತಮಾನದಲ್ಲಿ ಎಡೆಯೂರು ಸಿದ್ದಲಿಂಗೇಶ್ವರರು ಪರಂಪರೆ ಮುಂದುವರೆಸಿದರು. ನಾಗನೂರು ಮಠಕ್ಕೂ ಗದಗ ಮಠಕ್ಕೂ ಅವಿನಾಭಾವ ಸಂಭಂಧವಿದೆ ಎಂದರು.

    ಹಂದಿಗುಂದ ಶಿವಾನಂದ ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ ಯಾವ ಪದವಿಯೂ ಶಾಸ್ವತವಲ್ಲ. ಯಾವುದು ಬೇಕು ಎನ್ನುತ್ತೇವೆ ಅದು ನಮ್ಮಿಂದ ದೂರ ಸರಿಯುತ್ತದೆ. ಯಾವುದು ಒಲ್ಲೆ ಎಂದರೆ ಬೆನ್ನು ಹತ್ತಿ ಬರುತ್ತದೆ. ವಿಶ್ವವಿದ್ಯಾಲಯಗಳು, ನಿಲ್ದಾಣಗಳಿಗೆ ಬಸವಣ್ಣವರ ಹೆಸರಿಡಬೇಕೆಂದರು.

      ಬೀದರ ಲಿಂಗಾಯತ ಮಠದ ಅನ್ನಪೂರ್ಣ  ತಾಯಿಯವರು ಮಾತನಾಡಿ, ಶರಣರ ನುಡಿಗಳೇ ವಚನಗಳಾಗಿವೆ. ಹೆಣ್ಣು ಮಕ್ಕಳ ಅಭಿವೃದ್ಧಿಗೆ ಬಸವಣ್ಣವರ ಉತ್ತಮ ಕೊಡುಗೆ ನೀಡಿದ್ದಾರೆ. ಅನುಭವ ಮಂಟಪದಲ್ಲಿ 35 ಜನ ಹೆಣ್ಣು ಮಕ್ಕಳು ವಚನಗಾತರ್ಿಯರು ಇದ್ದರು ಎಂದರು.

     ಬೀದರ ಲಿಂಗಾಯತ ಮಠದ ಅಕ್ಕ ಗಂಗಾಭಿಕಾ ದೇವಿ ಮಾತನಾಡಿ, ತಮಗಾಗಿ ಬದುಕಿದವನ್ನು ಯಾರೂ ನೆನಪಿಡುವದಿಲ್ಲ. ಸಮಾಜಕ್ಕೆ ಬದುಕಿದವರನ್ನು ಜನ ನೆನಪಿಡುತ್ತಾರೆ. ಸಮಾಜವನ್ನು ಮುನ್ನೆಡೆಸುವ ಶಕ್ತಿ ಮಹಿಳೆಯರಲ್ಲಿದೆ. ಮಹಿಳೆಯರಿಗೆ ಮನೆಯ ಜವಾಬ್ದಾರಿ ನೀಡಿದರೆ ಉತ್ತಮವಾಗಿ ನಿರ್ವಹಿಸುತ್ತಾರೆಂದರು.

     ಮೈಸೂರ ವಿದ್ಯುತ್ ನಿಗಮದ ಇಂಜಿನಿಯರ್ ಶಂಕರ ದೇವನೂರ ಮಾತನಾಡಿ, ಮನುಷ್ಯ ಜೀವನ ನೂರು ವರ್ಷ ಬದುಕಿದ್ದು ಲೆಕ್ಕಕ್ಕೆ ಬರುವದಿಲ್ಲ. ಸಮಾಜಕ್ಕೆ ಬದುಕುವದು ಮುಖ್ಯ. ನಮ್ಮ ಬದುಕು ಹೋವಿನಂತಾಗಬೇಕು. ,ಇಡೀ ಜೀವ ಸಂಕುಲಕ್ಕೆ ಉತ್ತಮವಾದ ಮಾರ್ಗದರ್ಶನವನ್ನು 12 ನೇ ಶತಮಾನದಲ್ಲಿ ಬಸವಣ್ಣವರು ಮಾಡಿದ್ದಾರೆಂದರು.

ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

     ಶಾಸಕ ಮಹಾಂತೇಶ ಕೌಜಲಗಿ, ಡಾ.ಅನ್ನಪ್ಪ ಬಾಳಿ, ತಾ.ಪಂ ಸದಸ್ಯ ರವಿ ಗದಗ, ಆನಂದ ಗುಡಸ, ಐಎಎಸ್ ಅಕಾರಿ ಗಂಗೂಬಾಯಿ ಮಾನಕರ,ಶಿವಶಂಕರ ಸಂಬರಗಿಮಠ, ಇನ್ನಿತರರು ಪಾಲ್ಗೊಂಡಿದ್ದರು.