ಸಾವರ್ಕರ್ ಮತ್ತು ಇಂಗ್ಲೆಂಡಿನ ಭಾರತ ಭವನದ ವಿಚಾರ ಹೇಳುವಾಗ ಧಿಂಗ್ರನ ಉಲ್ಲೇಖವಾಗದಿದ್ದರೆ ಅದು ಅವನಿಗೆ ಮಾಡಿದ ಅಪಚಾರ. ಈ ಮದನ್ ಲಾಲ್ ಧಿಂಗ್ರ ಭಾರತ ಭವನದ ಸಾವರ್ಕರ್ ಅವರ ಉಳಿದ ಸಹಚಾರಿಗಳಂತಲ್ಲ! ಸ್ವಲ್ಪ ವಿಚಿತ್ರ ಸ್ವಭಾವದ ಶಿಸ್ತುಗಾರ ಪುಟ್ಟಸ್ವಾಮಿ ಇವನು! ಸದಾ ಸುಟುಧಾರಿ! ವಿದೇಶಿ ಸಂಗೀತದ ಮತ್ತು ಸಿಗರೇಟಿನ ಹುಚ್ಚು ಇವನಿಗೆ. ಸಾವರ್ಕರ್ ಅವರನ್ನು ಬಿಟ್ಟು ಯಾರಿಗೂ ತಲೆ ತಗ್ಗಿಸುತ್ತಿರಲಿಲ್ಲ! ಅಗಾಗ ಭಾರತ ಭವನದ ಭಾನುವಾರದ ಬೈಟಕ್ಕಿಗೂ ಬಂದು ವಿದೇಶಿ ಸಂಗೀತಹಾಕಿಕೊಂಡು ಕೂರುತ್ತಿದ್ದ. ಆದರೆ ಅವನ ಒಳಗೆ ಉರಿಯುತ್ತಿದ್ದ ದೇಶಭಕ್ತಿಯನ್ನು ಸಾವರ್ಕರ್ ಗುರುತಿಸಿದ್ದರು. ಅವನಿಗೆ ಬೈಟಕ್ಕುಗಳಲ್ಲಿ ನಂಬಿಕೆಯಿರಲಿಲ್ಲ. ಅವನದೇನಿದ್ದರೂ ಪ್ರತ್ಯಕ್ಷ ಕಾರ್ಯಾಚರಣೆಯಲ್ಲಿ ನಂಬಿಕೆ. ಧಿಂಗ್ರ ಮೂಲತಃ ಪಂಜಾಬಿನಿಂದ ಬಂದವನು ಮತ್ತು ಅವನ ಇಡೀ ಮೈಮನದಲ್ಲಿ ತಾರುಣ್ಯ ತುಂಬಿತುಳುಕುತ್ತಿತ್ತು. ಏನೋ ಮಹತ್ತರ ಕಾರ್ಯಾಚರಣೆ ಮಾಡಲು ಹೇಳಿಮಾಡಿಸಿದಂತಹ ವ್ಯಕ್ತಿತ್ವ ಅವನದು.
ಧಿಂಗ್ರ ಹುಟ್ಟಿದ ವರ್ಷ 1883 ಫೆಬ್ರವರಿ 18 ಪಂಜಾಬಿನ ಅಮೃತಸರದಲ್ಲಿ. ಅಂದರೆ ಸಾವರ್ಕರ್ ಹುಟ್ಟಿದವರ್ಷವೇ ಧಿಂಗ್ರನೂ ಹುಟ್ಟಿದ್ದು! ತಂದೆ ಡಾಽ ದತ್ತಾ ಮಲ್ ಧಿಂಗ್ರ ಒಬ್ಬ ವೈದ್ಯರಾಗಿದ್ದರು. ದತ್ತಾ ಮಲ್ ಅವರ ಎಂಟು ಜನ ಮಕ್ಕಳಲ್ಲಿ ಮದನ್ ಲಾಲ್ ಧಿಂಗ್ರನೂ ಒಬ್ಬ. ದತ್ತಾ ಮಲ್ ಅವರು ಬಹಳ ಶ್ರೀಮಂತರು ಮತ್ತು ಅತ್ಯಂತ ಒಳ್ಳೆ ಸಂಬಳದ ಸರಕಾರಿ ಹುದ್ದೆಯಲ್ಲಿದ್ದರು. ಅವರು ತಮ್ಮ ಎಲ್ಲಾ ಮಕ್ಕಳನ್ನೂ ವಿದೇಶದಲ್ಲೇ ಓದಿಸುತ್ತಿದ್ದರು ಮತ್ತು ಅವರಿಗೆ ಸಾಕಷ್ಟು ಬ್ರಿಟಿಷ್ ಅಧಿಕಾರಿಗಳಜೊತೆ ಒಳ್ಳೆಯ ಸಂಬಂಧವಿತ್ತು!
ಒಮ್ಮೆ ಭಾರತಭವನದಲ್ಲಿ ಬಾಂಬ್ ಮಾಡಲು ಬೇಕಾದ ಧ್ರಾವಣವನ್ನು ಸಾವರ್ಕರ್ ಅವರು ಸ್ಟೌ ಮೇಲೆ ಕಾಯಿಸಲು ಇಟ್ಟಿದರು. ಆ ಧ್ರಾವಣ ಕುದಿದು ಇನ್ನೇನು ಸ್ಪೋಟಗೊಳ್ಳುವುದಿತ್ತು ಮತ್ತು ಅದನ್ನು ಸ್ಟೌ ಮೇಲಿನಿಂದ ಕೆಳಗಿಳಿಸಲು ತಕ್ಷಣಕ್ಕೆ ಇಕ್ಕಳವು ಸಿಗುತ್ತಿಲ್ಲ! ಅಲ್ಲೇ ಇದ್ದ ಧಿಂಗ್ರ ಬರಿಗೈಯಿಂದಲೇ ಅದನ್ನು ಕೆಳಗಿಳಿಸಿಬಿಟ್ಟ! ಅವನ ಕೈ ಸುಟ್ಟ ಮಾಂಸದ ವಾಸನೆ ಕೊಣೆಯಲ್ಲೆಲ್ಲಾ ಹರಡಿತು ಆದರೂ, ಅವನ ಮುಖದಲ್ಲಿ ನೋವಿನ ಛಾಯೆಯಿಲ್ಲ, ಚೀತ್ಕಾರವಿಲ್ಲ ಮತ್ತು ಕಣ್ಣೀರೂಯಿಲ್ಲ! ಇದು ಧಿಂಗ್ರನ ಮನೋಬಲಕ್ಕೆ ಸಾಕ್ಷಿ. ಎಷ್ಟಾದರೂ ಪಂಜಾಬಿನ ರಕ್ತವಲ್ಲವೇ ಅವನದು!
ಭಾರತದಲ್ಲಿ ಬ್ರಿಟಿಷರ ಕ್ರೂರ ಅಟ್ಟಹಾಸಕ್ಕೆ ಕಾರಣರಾದ ಲಂಡನ್ನಿನಲ್ಲೇ ಇದ್ದ ಬ್ರಿಟಿಷ್ ಅಧಿಕಾರಿಗಳನ್ನು ವಧೆಮಾಡಲು ಧಿಂಗ್ರ ನಿಶ್ಚಯಿಸಿದ್ದ ಮತ್ತು ಈ ಇದು ಸಾವರ್ಕರ್ ಅವರದ್ದೇ ಯೋಜನೆಯಾಗಿತ್ತು! ಅದಕ್ಕೆ ಬೇಕಾಗಿದ್ದ ಪಿಸ್ತೂಲ್ ಕೂಡ ಹೊಂದಿಸಿಕೊಂಡಾಗಿತ್ತು ಮತ್ತು ಗುರಿ ಸಾಧನೆಯ ಅಭ್ಯಾಸವನ್ನೂ ಅವನು ಮಾಡಿದ್ದ! ಭಾರತಕ್ಕೆ ವೈಸರಾಯ್ ಆಗಿದ್ದ ಜಾರ್ಜ್ ಕರ್ಜನ್ ಮತ್ತು ಬಂಗಾಳದ ನಿವೃತ್ತ ಗೌರ್ನರ್ ಫುಲ್ಲರ್ ಇವರನ್ನು ಮುಗಿಸಲು ಧಿಂಗ್ರ ಪ್ರಯತ್ನಿಸಿದ್ದ ಆದರೆ, ಅವರಿಬ್ಬರ ಅದೃಷ್ಟ ಅಂದು ಚೆನ್ನಾಗಿತ್ತು! ಅವರಿಬ್ಬರೂ ಇದ್ದ ಸಮಾರಂಭದ ಭವನಕ್ಕೆ ಧಿಂಗ್ರ ಸಮಯಕ್ಕೆ ಸರಿಯಾಗಿ ತಲುಪಲಾಗಲಿಲ್ಲ. ಬೇಟೆ ತಪ್ಪಿಹೋಗಿದ್ದಕ್ಕೆ ಸಾವರ್ಕರ್ ಮತ್ತು ಧಿಂಗ್ರ ಇಬ್ಬರಿಗೂ ಬಹಳ ನಿರಾಸೆಯಾಯಿತು. ಮತ್ತೊಂದು ಹೊಸ ಬೇಟೆಗೆ ಕಾರಾಯಾಚರಣೆ ಪ್ರಾರಂಭವಾಯಿತು! ಈ ಹೊಸ ಬೇಟೆಯ ಗುರಿಯೇ ಬ್ರಿಟಿಷ್ ಮುತ್ಸದ್ಧಿ ಕರ್ಜನ್ ವೈಲಿ!
ಯಾರು ಈ ಕರ್ಜನ್ ವೈಲಿ? ಇವನೊಬ್ಬ ನಿವೃತ್ತ ಬ್ರಿಟಿಷ್ ಸೇನಾಧಿಕಾರಿ ಮತ್ತು ಭಾರತದಲ್ಲಿ ಬ್ರಿಟಿಷರ ಆಡಳಿತಕ್ಕೆ ಪ್ರಮುಖ ಸಲಹೆಗಾರ. ಪಿತೂರಿಯಲ್ಲಿ ಮತ್ತು ಕುಟಿಲತೆಯಲ್ಲಿ ಪಳಗಿದ ವ್ಯಕ್ತಿ. ಭಾರತದಲ್ಲಿದ್ದ ಬ್ರಿಟಿಷ್ ಅಧಿಕಾರಿಗಳ ಕುಟಿಲತೆ ಮತ್ತು ಕ?ರ ಆಡಳಿತ ಇವನ ಕ?ರ ಮೆದುಳಿನ ಕೂಸು! ಹಾಗಾಗಿ ಧಿಂಗ್ರ ಇವನನ್ನು ಬೇಟೆಯಾಡಲು ತೀರ್ಮಾನಿಸಿದ! ಕರ್ಜನ್ ವೈಲಿ ಅದೃಷ್ಟ ಕೆಟ್ಟಿತ್ತು! ಈ ಬಾರಿ ಧಿಂಗ್ರನ ಗುರಿ ತಪ್ಪಲಿಲ್ಲ!
ಜುಲೈ 01 1909 ಅಂದು ಸಂಜೆ ಲಂಡನ್ನಿನ ಇಂಪೀರಿಯಲ್ ಇನಿಸ್ಟಿಟ್ಯೂಟ್ ಭವನದಲ್ಲಿ ಲಂಡನ್ನಿನ ಇಂಡಿಯನ್ ನ್ಯಾಶನಲ್ ಅಸ್ಸೊಸಿಯೇಶನ್ ಒಂದು ಸಭೆ ಆಯೋಜಿಸಿತ್ತು. ನೂರಾರು ಬ್ರಿಟಿಷರು ಮತ್ತು ಭಾರತೀಯರೂ ಸೇರಿದ್ದರು. ಪ್ರಮುಖವಾಗಿ ಅಲ್ಲಿಗೆ ಕರ್ಜನ್ ವೈಲಿಯೂ ಬಂದಿದ್ದ ಮತ್ತು ಧಿಂಗ್ರನೂ ಪೂರ್ಣ ಸೂಟು ತೊಟ್ಟು ಪಿಸ್ತೂಲಿನೊಂದಿಗೆ ಸಿದ್ದವಾಗಿಯೇ ಬಂದಿದ್ದ! ಧಿಂಗ್ರನ ತಂದೆ ದತ್ತಾ ಮಲ್ ಧಿಂಗ್ರ ಅವರಿಗೆ ಕರ್ಜನ್ ವೈಲಿ ಹಳೆ ಪರಿಚಯ. ಹಾಗಾಗಿ ದತ್ತಾ ಮಲ್ ಧಿಂಗ್ರ ತಮ್ಮ ಲಂಡನ್ನಿನಲ್ಲಿದ್ದ ಮಗನ ಅಭ್ಯುದಯದ ವಿಚಾರವಾಗಿ ಕರಜನ್ ವೈಲಿಗೆ ಅಗಾಗ ಪತ್ರ ಬರೆಯುತ್ತಿದ್ದರು. ಮದನ್ ಲಾಲ್ ಧಿಂಗ್ರನ ಪರಿಚಯವೂ ಕರ್ಜನ್ ವೈಲಿಗೆ ಇತ್ತು. ಸಮಾರಂಭ ಮುಗಿದಮೆಲೇ ಧಿಂಗ್ರ ಕರ್ಜನ್ ವೈಲಿ ಯನ್ನು ನೋಡಿ ಮುಗುಳ್ನಗೆಬೀರಿ ಮಾತನಾಡಲು ಹತ್ತಿರ ಹೋದ. ಹತ್ತಿರಹೋದವನೇ ಕ್ಷಣಮಾತ್ರದಲ್ಲಿ ಕೊಟಿನ ಜೇಬಿನಿಂದ ಪಿಸ್ತೂಲ್ ತೆಗೆದು ಢಂ ಢಂ ಎನ್ನಿಸಿಬಿಟ್ಟ. ಕ್ರೂರಿ ಕರ್ಜನನ ಪ್ರಾಣ ಪಕ್ಷಿ ಹಾರಿಹೋಗಿತ್ತು! ಜನರೆಲ್ಲಾ ಚೆಲ್ಲಾಪಿಲ್ಲಿಯಾಗಿ ಕೂಗುತ್ತಾ ಹೊರಗೊಡಿದರು ಆದರೆ ದಿಂಗ್ರ ಮಾತ್ರ ಶಾಂತವಾಗಿದ್ದ. ತಕ್ಷಣ ಲಂಡನ್ ಪೊಲೀಸರು ಧಿಂಗ್ರನನ್ನು ಬಂಧಿಸಿದರು. ಮರುದಿನ ಇಂಗ್ಲೆಂಡಿನ ಪತ್ರಿಕೆಗಳಲ್ಲಿ ಇದೇ ಪ್ರಮುಖ ಸುದ್ದಿ! ಇದರಜೊತೆಗೇ ಮೊದಲೇ ಸಿದ್ಧಪಡಿಸಿಟ್ಟಿದ ಧಿಂಗ್ರನ ಹೆಳಿಕೆಯೂ ಪ್ರಕಟವಾಗುವಂತೆ ಸಾವರ್ಕರ್ ವ್ಯವಸ್ತೆ ಮಾಡಿದ್ದರು! ಭಾರತೀಯರೆಲ್ಲಾ ಹೆಮ್ಮೆಪಟ್ಟರು ಮತ್ತು ಬ್ರಿಟಿಷರಿಗೆ ಯಾವಾಗ ಯಾರು ತಮ್ಮ ಮೇಲೆ ಗುಂಡುಹಾರಿಸುತ್ತಾರೋ ಎನ್ನುವ ಭಯ! ಇದರ ಮಧ್ಯೆ ಭಾರತದಲ್ಲಿದ್ದ ಮತ್ತು ಇಂಗ್ಲೆಂಡಿನಲ್ಲೇ ನೆಲಸಿದ್ದ ಕೆಲವು ಹೇಡಿ ಸೌಮ್ಯವಾದಿಗಳು ಧಿಂಗ್ರನ ಕೃತ್ಯವನ್ನು ಖಂಡಿಸಿದರು! ಮೊಹನದಾಸ ಕರಮಚಂದ ಗಾಂಧಿಯವರೂ ಧಿಂಗ್ರನನ್ನು ಖಂಡಿಸಿ ಹೆಳಿಕೆ ಕೊಟ್ಟರು! ಭಾರತದಲ್ಲಿದ್ದ ಧಿಂಗ್ರನ ತಂದೆ ಮಗನ ಕೃತ್ಯವನ್ನು ಖಂಡಿಸಿ ಅವನು ನನ್ನಮಗನೇ ಅಲ್ಲ ಎಂದು ಹೆಳಿಕೆ ಕೊಟ್ಟರು! ಎಂತಹ ಅಪ್ಪ!!
ನಂತರ ಮದನ್ ಲಾಲ್ ಧಿಂಗ್ರನಿಗೆ ಮರಣದಂಡನೆ ಶಿಕ್ಷೆಯನ್ನು ಲಂಡನ್ನಿನ ನ್ಯಾಯಾಲಯ ಘೊಷಿಸಿತು. 17 ಆಗಸ್ಟ್ 1909 ಧಿಂಗ್ರ ಹುತಾತ್ಮನಾದದಿನ. ಅಂದು ಅವನನ್ನು ಲಂಡನ್ನಿನ ಪೆಂಟೋನ್ವಿಲ್ಲೆ ಜೈಲಿನಲ್ಲಿ ನೇಣುಹಾಕಲಾಯಿತು. ಧಿಂಗ್ರನ ನ್ಯಾಯಾಲಯದ ಕೊನೆಯ ಹೆಳಿಕೆ- "ಧನ್ಯವಾದಗಳು ನ್ಯಾಯಾಧೀಶರೆ. ನಾನು ಹೆದರುವುದಿಲ್ಲ. ನನ್ನ ಮಾತೃಭೂಮಿಗಾಗಿ ನನ್ನ ಪ್ರಾಣವನ್ನು ಅರ್ಿಸುವ ಗೌರವವನ್ನು ಹೊಂದಲು ನಾನು ಹೆಮ್ಮೆಪಡುತ್ತೇನೆ"
ಮದನ್ ಲಾಲ್ ಧಿಂಗ್ರ 26 ವರ್ಷದ ತರುಣ, ಮನ್ಮಥನನ್ನು ಮೀರಿಸುವ ರೂಪ, ವಿದ್ಯಾವಂತ, ಹಣಕ್ಕೆ ಕೊರತೆಯಿಲ್ಲದ ಆಗರ್ಭ ಶ್ರೀಮಂತನ ಮಗ. ಧಿಂಗ್ರ ಸನ್ನೆಮಾಡಿದರೆ ಸಾಕು ಹಿಂದೆ ಬರಲು ಸಿದ್ಧವಿದ್ದ ಹತ್ತಾರು ಇಂಗ್ಲಿಷ್ ಹುಡುಗಿಯರಿದ್ದರು ಆದರೆ, ಅವನಿಗೆ ಅದಾವುದೂ ಬೇಡವಾಯಿತು. ಅವನಿಗೆ ತಾಯಿ ಭಾರತಿಯ ಬಿಡುಗಡೆಯ ಹುಚ್ಚು ಹತ್ತಿತ್ತು!
ಹುತಾತ್ಮನಾಗುವ ಮುನ್ನ ಮದನ್ ಲಾಲ್ ಧಿಂಗ್ರನ ಹೇಳಿಕೆ.
"ಬಯೋನೆಟ್ಟುಗಳನ್ನು ಹಿಡಿದಿರುವ ವಿದೇಶಿ ರಾಷ್ಟ್ರವು ಶಾಶ್ವತವಾದ ಯುದ್ಧಸ್ತಿತಿಯಲ್ಲಿದೆ ಎಂದು ನಾನು ನಂಬುತ್ತೇನೆ. ನಿರಾಯುಧವಾದ ಜನಾಂಗಕ್ಕೆ ಮುಕ್ತ ಯುದ್ಧವು ಅಸಾಧ್ಯವಾದಕಾರಣ ನಾನು ಇದ್ದಕ್ಕಿದ್ದಹಾಗೆ ಆಕ್ರಮಣ ಮಾಡಿದೆ. ನನಗೆ ಬಂದೂಕನ್ನು ನಿರಾಕರಿಸಿದ್ದರಿಂದ ನಾನು ಪಿಸ್ತೂಲು ಹೊರತೆಗೆದು ಗುಂಡುಹಾರಿಸಿದೆ. ಐಶ್ವರ್ಯ ಮತ್ತು ಬುದ್ಧಿಯಲ್ಲಿ ಬಡವನಾದ ನನ್ನಂತಹ ಮಗನಿಗೆ ತಾಯಿಗೆ ಅರ್ಿಸಲು ನನ್ನ ರಕ್ತವನ್ನು ಬಿಟ್ಟು ಬೇರೇನೂ ಇಲ್ಲ. ಆದ್ದರಿಂದ ನಾನು ಅವಳ ಬಲೀಪೀಠದಮೇಲೆ ಅದನ್ನೇ ತ್ಯಾಗಮಾಡಿದ್ದೇನೆ. ಪ್ರಸ್ತುತ ಭಾರತದಲ್ಲಿ ಅಗತ್ಯವಿರುವ ಏಕೈಕ ಪಾಠವೆಂದರೆ ಸಾಯುವುದು ಹೇಗೆಂದು ಕಲಿಸುವುದು ಮತ್ತು ಅದನ್ನು ಕಲಿಸುವ ಏಕೈಕಮಾರ್ಗವೆಂದರೆ ನಾನೇ ಸಾಯುವುದು. ದೇವರಲ್ಲಿ ನನ್ನ ಏಕೈಕ ಪ್ರಾರ್ಥನೆಯೆಂದರೆ, ನಾನು ಅದೇ ತಾಯಿಯಿಂದ ಮರುಜನ್ಮಗಳನ್ನು ಪಡೆದು, ಕಾರಣ ಯಶಸ್ವಿಯಾಗುವವರೆಗೆ ಅದೇ ಪವಿತ್ರ ಉದ್ದೇಶದಲ್ಲಿ ನಾನು ಮತ್ತೆ ಮತ್ತೆ ಸಾಯುತ್ತೇನೆ. ವನ್ದೇ ಮಾತರಂ (ನಾನು ನಿನ್ನನ್ನು ಸ್ತುತಿಸುತ್ತೇನೆ).
- 0 0 0 -